ಉಕ್ರೇನ್​​ನಲ್ಲಿ ಮುಂದುವರಿದ ಯುದ್ಧ ಸ್ಥಿತಿ; ಇತ್ತ ಭಾರತಕ್ಕೆ ಭೇಟಿ ಕೊಡಲಿರುವ ರಷ್ಯಾ ವಿದೇಶಾಂಗ ಇಲಾಖೆ ಸಚಿವ

ಚೀನಾದಲ್ಲಿ ಮಾರ್ಚ್​ 30 ಮತ್ತು 31ರಂದು ಅಫ್ಘಾನಿಸ್ತಾನದ ನೆರೆರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಇದ್ದು ಅದರಲ್ಲಿ ಲಾವ್ರೋವ್​ ಪಾಲ್ಗೊಳ್ಳುವರು. ಇವರನ್ನು ಹೊರತುಪಡಿಸಿ ಪಾಕಿಸ್ತಾನ, ಇರಾನ್​, ತಜಿಕಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳ ವಿದೇಶಾಂಗ ಸಚಿವರೂ ಕೂಡ ಭಾಗವಹಿಸಲಿದ್ದಾರೆ.

ಉಕ್ರೇನ್​​ನಲ್ಲಿ ಮುಂದುವರಿದ ಯುದ್ಧ ಸ್ಥಿತಿ; ಇತ್ತ ಭಾರತಕ್ಕೆ ಭೇಟಿ ಕೊಡಲಿರುವ ರಷ್ಯಾ ವಿದೇಶಾಂಗ ಇಲಾಖೆ ಸಚಿವ
ರಷ್ಯಾ ವಿದೇಶಾಂಗ ಇಲಾಖೆ ಸಚಿವ ಸರ್​ಗೆ ಲ್ಯಾವ್​ರೊವ್
Follow us
| Updated By: Lakshmi Hegde

Updated on:Mar 29, 2022 | 11:06 AM

ಉಕ್ರೇನ್​​ನಲ್ಲಿ ರಷ್ಯಾ (Russia Attack Ukraine) ಆಕ್ರಮಣ ಮುಂದುವರಿಸಿದೆ. ಈ ಮಧ್ಯೆ ರಷ್ಯಾ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಈ ವಾರದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಅವರು ಚೀನಾಕ್ಕೆ ತೆರಳಿದ್ದರು. ಅಲ್ಲಿಂದ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳಿಂತ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಸರ್ಗೆ ಲಾವ್ರೋವ್​ ಅವರು ಮಾರ್ಚ್​ 31ರಂದು ಭಾರತಕ್ಕೆ ಬರುವ ನಿರೀಕ್ಷೆಯಿದ್ದು, ಅದೇ ದಿನ ಯುಕೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಲಿಜ್​ ಟ್ರಸ್​​ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ. ಅಂದಹಾಗೇ ಇವರಿಬ್ಬರ ಭೇಟಿ ವೇಳೆಯೂ ಚರ್ಚೆಗೆ ಒಳಪಡುವ ಪ್ರಮುಖ ವಿಷಯ ಉಕ್ರೇನ್​ ಬಿಕ್ಕಟ್ಟು ಎಂದೂ ಹೇಳಲಾಗಿದೆ.

ಚೀನಾದಲ್ಲಿ ಮಾರ್ಚ್​ 30 ಮತ್ತು 31ರಂದು ಅಫ್ಘಾನಿಸ್ತಾನದ ನೆರೆರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಇದ್ದು ಅದರಲ್ಲಿ ಲಾವ್ರೋವ್​ ಪಾಲ್ಗೊಳ್ಳುವರು. ಇವರನ್ನು ಹೊರತುಪಡಿಸಿ ಪಾಕಿಸ್ತಾನ, ಇರಾನ್​, ತಜಿಕಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳ ವಿದೇಶಾಂಗ ಸಚಿವರೂ ಕೂಡ ಭಾಗವಹಿಸಲಿದ್ದಾರೆ. ಅಂದಹಾಗೆ ಬೀಜಿಂಗ್​​ನಲ್ಲಿ ಇಂಥ ಸಭೆ ನಡೆಯುತ್ತಿರುವುದು ಮೂರನೇ ಬಾರಿಯಾಗಿದೆ. ಅದರಲ್ಲಿ ಪಾಲ್ಗೊಂಡ ಬಳಿಕ ರಷ್ಯಾ ವಿದೇಶಾಂಗ ಸಚಿವರು ಭಾರತಕ್ಕೆ ಬರಲಿದ್ದಾರೆ.

ಏಪ್ರಿಲ್​ 1ರಂದು ಭಾರತದ ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್​ ಜತೆ ಲಾವ್ರೋವ್​ ದ್ವಿಪಕ್ಷೀಯ ಮಾತುಕತೆ ನಡೆಸುವರು. ಲಾವ್ರೋವ್ ಭೇಟಿ ವೇಳೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅದರಲ್ಲಿ ಮುಖ್ಯವಾಗಿ ಉಕ್ರೇನ್​ ಬಿಕ್ಕಟ್ಟಿನ ಸಂಬಂಧ ವಿಸ್ತೃತ ಮಾತುಕತೆಯಾಗಲಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಸಿಕ್ಕಿದೆ.

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರಿದ ನಂತರ ಅಮೆರಿಕ, ಯುಕೆ ಸೇರಿ ಹಲವು ದೇಶಗಳು ರಷ್ಯಾವನ್ನು ಟೀಕಿಸುತ್ತಿವೆ. ಅಷ್ಟೇ ಅಲ್ಲ ವಿವಿಧ ರೀತಿಯ ನಿರ್ಬಂಧ ವಿಧಿಸಿವೆ. ಆದರೆ ಭಾರತ ರಷ್ಯಾವನ್ನು ಟೀಕಿಸಿಲ್ಲ. ಅದರೊಂದಿಗೆ ಸಂಬಂಧವನ್ನು ಹಾಗೇ ಕಾಯ್ದುಕೊಂಡಿದೆ. ಹಾಗಂತ ರಷ್ಯಾ ಪರವಾಗಿ ನಿಂತೂ ಇಲ್ಲ. ರಷ್ಯಾ-ಉಕ್ರೇನ್​ ಯುದ್ಧ ವಿಚಾರದಲ್ಲಿ ತಟಸ್ಥ ನಿಲುವು ಕಾಯ್ದುಕೊಂಡು, ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡುತ್ತಲೇ ಬಂದಿದೆ. ರಷ್ಯಾ-ಉಕ್ರೇನ್​ ಯುದ್ಧದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆಯಲ್ಲಿ ಇದುವರೆಗೆ ಅಂಗೀಕರಿಸಲ್ಪಟ್ಟ ಯಾವುದೇ ನಿರ್ಣಯಕ್ಕೂ ಭಾರತ ಮತದಾನ ಮಾಡಲಿಲ್ಲ. ಇದನ್ನು ರಷ್ಯಾ ಹೊಗಳಿದೆ. ಇದೀಗ ರಷ್ಯಾ ವಿದೇಶಾಂಗ ಇಲಾಖೆ ಸಚಿವ ಭಾರತಕ್ಕೆ ಆಗಮಿಸುತ್ತಿರುವುದು ಅತ್ಯಂತ ಮಹತ್ವ ಎನ್ನಿಸಿದೆ. ಯುಎಸ್​ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಬ್ಯಾಂಕ್​​ಗಳು ಮತ್ತು ಇತರ ಕ್ಷೇತ್ರಗಳ ಮೇಲೆ ಹೇರಿರುವ ನಿರ್ಬಂಧಗಳಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ಪರಿಹರಿಸುವ ಬಗ್ಗೆ, ರಕ್ಷಣಾ ಮತ್ತು ಇತರ ಒಪ್ಪಂದಗಳಿಗೆ ಪರ್ಯಾಯ ಪಾವತಿ ಕಾರ್ಯವಿಧಾನಗಳ ಬಗ್ಗೆ ಲಾವ್ರೋವ್ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ಪುನೀತ್ ನಿಧನರಾಗಿ 5 ತಿಂಗಳು, ಕುಟುಂಬ ಸದಸ್ಯರಿಂದ ಪೂಜೆ ಸಲ್ಲಿಕೆ; ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದ ಆರ್​ಜಿವಿ

Published On - 9:39 am, Tue, 29 March 22