ಎಮ್ ಟಿ ಬಿ ನಾಗರಾಜರಿಗೆ ತಾವು ಮಾಡಿದ ಪಾಪದ ಅರಿವು ಈಗ ಆಗುತ್ತಿದೆ ಎಂದರು ಸಿದ್ದರಾಮಯ್ಯ
ನನ್ನಲ್ಲಿ ಹಣದ ಕೊರತೆಯಿಲ್ಲ, ಹಣ ಸಂಪಾದಿಸಲು ನಾನು ಪಕ್ಷಾಂತರ ಮಾಡಲಿಲ್ಲ, ಅದರೆ ಒಂದು ರಾಜಕೀಯ ಪಕ್ಷ ಬಿಟ್ಟು ಮತ್ತೊಂದನ್ನು ಸೇರಿದ್ದು ನಾನು ರಾಜಕೀಯದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಎಂದು ನಾಗರಾಜ ರವಿವಾರ ಹೇಳಿದ್ದರು.
Vijayapura: ಮುಂದಿನ ವಿಧಾನ ಸಭಾ ಚುನಾವಣೆಗೆ ಮೊದಲು ಪೌರಾಡಳಿ ಮತ್ತು ಸಣ್ಣ ಕೈಗಾರಿಕೆ ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಅವರು ವಾಪಸ್ಸು ಕಾಂಗ್ರೆಸ್ ಪಕ್ಷ ಸೇರಬೇಕೆಂಬ ಇಚ್ಛೆ ಅಪರೋಕ್ಷವಾಗಿ ವ್ಯಕ್ತಪಡಿಸಿದ್ದರೂ ಆಶ್ಚರ್ಯವಿಲ್ಲ. ಯಾಕೆ ಗೊತ್ತಾ? ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ವಿಷಾದಿಸುತ್ತಿದ್ದಾರೆ. ವಿಜಯಪುರ (Vijayapura) ಪ್ರವಾಸದಲ್ಲಿರುವ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಹಿಂದೊಮ್ಮೆ ಅವರ ಆಪ್ತ ಶಿಷ್ಯ ನಾಗರಾಜ ಹೀಗೆ ಹೇಳಿದ್ದಾರೆ ಅಂತ ತಿಳಿಸಿದಾಗ ‘ನಾನು ಮೊದಲೇ ಹೇಳಿರಲಿಲ್ಲವೇ’ ಅನ್ನೋ ಧಾಟಿಯಲ್ಲಿ ಅವರು ತಾನು ಮಾಡಿದ ಪಾಪದ ಅರಿವು ಅವರಿಗೆ ಈಗ ಆಗಿದೆ, ಹಾಗಾಗಿ ಪಶ್ವಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯನವರಿಗೆ ತಮ್ಮ ಕ್ಷೇತ್ರಗಳಿಂದ ಸ್ಪರ್ಧಿಸಿ ಅಂತ ಹೇಳುತ್ತಿರುವುದನ್ನು ಅವರ ಗಮನಕ್ಕೆ ತಂದಾಗ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಂತ ನಾನಿನ್ನೂ ನಿರ್ಧರಿಸಿಲ್ಲ ಎನ್ನುತ್ತಾ ಅವರು ಅಲ್ಲಿಂದ ಹೊರಟರು.
ರವಿವಾರದಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಪುರಸಭೆ ಆವರಣದಲ್ಲಿ ಅಯೋಜಿಸಲಾಗಿದ್ದ ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತಾಡಿದ್ದ ಸಚಿವ ನಾಗರಾಜ ಅವರು, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದು ತಾನು ಮಾಡಿದ ದೊಡ್ಡ ತಪ್ಪು ಎಂದು ಹೇಳಿದರು.
ನನ್ನಲ್ಲಿ ಹಣದ ಕೊರತೆಯಿಲ್ಲ, ಹಣ ಸಂಪಾದಿಸಲು ನಾನು ಪಕ್ಷಾಂತರ ಮಾಡಲಿಲ್ಲ, ಅದರೆ ಒಂದು ರಾಜಕೀಯ ಪಕ್ಷ ಬಿಟ್ಟು ಮತ್ತೊಂದನ್ನು ಸೇರಿದ್ದು ನಾನು ರಾಜಕೀಯದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಎಂದು ನಾಗರಾಜ ರವಿವಾರ ಹೇಳಿದ್ದರು.
ಇದನ್ನೂ ಓದಿ: ಕಟ್ಟಡವೊಂದನ್ನು ಉದ್ಘಾಟಿಸಲು ಶಾಲಾ ಮಕ್ಕಳಂತೆ ಕಚ್ಚಾಡಿದರು ಸಚಿವ ಎಮ್ಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ!