ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಸಚಿವರೊಬ್ಬರ ಸಂಬಂಧಿ ಭಾಗಿಯಾಗಿರುವ ಮಾಹಿತಿ ನನಗಿದೆ: ಡಿಕೆ ಶಿವಕುಮಾರ
ಸರ್ಕಾರದ ದ್ವಂದ್ವವೂ ನಮಗೆ ಅರ್ಥವಾಗದು. ತನಿಖೆ ಮುಗಿಯುವ ಮೊದಲೇ ಮರುಪರೀಕ್ಷೆಗೆ ಆದೇಶ ನೀಡಿದೆ. ಇದರಿಂದ ಸಹಜವಾಗೇ ಪ್ರಾಮಾಣಿಕರು ಹತಾಷರಾಗಿದ್ದಾರೆ ಮತ್ತು ರೊಚ್ಚಿಗೆದ್ದಿದ್ದಾರೆ ಎಂದು ಶಿವಕುಮಾರ ಹೇಳಿದರು.
Bengaluru: ಪಿ ಎಸ್ ಐ ನೇಮಕಾತಿ ಹಗರಣ (PSI Recruitment Scam) ಬಗೆದಷ್ಟು ಹೂರಣ ಹೊರಬರುತ್ತಿದೆ ಮಾರಾಯ್ರೇ. ಇದರ ಜಾಲ ಬಹಳ ದೊಡ್ಡದಾಗಿರುವಂತಿದೆ. ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಹಿರಿಯ ಸಚಿವರೊಬ್ಬರ ತಮ್ಮ ಎಂದು ಹೇಳಲಾಗುತ್ತಿರುವ ದರ್ಶನ್ ಗೌಡ (Darshan Gowda) ಎನ್ನುವವರ ಹೆಸರು ಹರರಣದಲ್ಲಿ ಕೇಳಿಬರುತ್ತಿದೆ. ಸೋಮವಾರದಂದು ಬೆಂಗಳೂರಿನಲ್ಲಿ ಪತ್ರಕರ್ತರು ಇದೇ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರನ್ನು ಕೇಳಿದಾಗ ಅವರು ತಮಗೆ ಗೊತ್ತಿರುವ ಮಾಹಿತಿಯನ್ನು ಬಿಚ್ಟಿಟ್ಟರು. ಮುಖ್ಯಮಂತ್ರಿಗಳು ತಮಗೆ ಬೆದರಿಕೆ ಹಾಕಿರುವುದನ್ನು ಹೇಳಿದ ಅವರು ರಾಮನಗರದ ಉಸ್ತುವಾರಿ ಸಚಿವರನ್ನು ಕುರಿತು ನಾವ್ಯಾರೂ ಗಂಡಸರಲ್ಲ, ಅವರೊಬ್ಬರೇ ಗಂಡಸು ಎಂದರು. ತಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಉಸ್ತುವಾರಿ ಮಂತ್ರಿಗಳ ಸಂಬಂಧಿಕರೊಬ್ಬರು ಹಗರಣದಲ್ಲಿ ಶಾಮೀಲಾಗಿದ್ದಾರೆ ಮತ್ತು ಒಂದೇ ತಾಲ್ಲೂಕಿನಿಂದ ಮೂರು ಜನ ಪಿ ಎಸ್ ಐ ಹುದ್ದೆಗೆ ಸೆಲೆಕ್ಟ್ ಅಗಿದ್ದಾರೆ ಎಂದು ಶಿವಕುಮಾರ ಹೇಳಿದರು.
ಸದರಿ ಮೂರು ಜನ ತಮ್ಮ ಜಮೀನುಗಳನ್ನು ಮಾರಿ ದುಡ್ಡು ಹೊಂದಿಸಿ ಕೊಟ್ಟಿದ್ದಾರೆ. ಆಯ್ಕೆ ಆಗಿರುವ ಅಭ್ಯರ್ಥಿಗಳಲ್ಲಿ ಒಬ್ಬರ ತಂದೆ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿರುವುದನ್ನು ಕೇಳಿ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಇದೆಲ್ಲ ನನಗೆ ಸಿಕ್ಕಿರುವ ಮಾಹಿತಿ ಮತ್ತು ಅದನ್ನೇ ನೀವು ಟಿವಿಗಳಲ್ಲಿ ತೋರಿಸುತಿರುವಿರಿ. ಮತ್ಯಾರೋ ಸಿಐಡಿ ಗೆ ಫೋನ್ ಮಾಡಿ ತನಿಖೆ ಮುಂದಿವರಿಸಬೇಡಿ ಅಂತ ಹೇಳಿದ್ದಾರಂತೆ ಎಂದು ಶಿವಕುಮಾರ ಹೇಳಿದರು.
ಸರ್ಕಾರದ ದ್ವಂದ್ವವೂ ನಮಗೆ ಅರ್ಥವಾಗದು. ತನಿಖೆ ಮುಗಿಯುವ ಮೊದಲೇ ಮರುಪರೀಕ್ಷೆಗೆ ಆದೇಶ ನೀಡಿದೆ. ಇದರಿಂದ ಸಹಜವಾಗೇ ಪ್ರಾಮಾಣಿಕರು ಹತಾಷರಾಗಿದ್ದಾರೆ ಮತ್ತು ರೊಚ್ಚಿಗೆದ್ದಿದ್ದಾರೆ. ತನ್ನ ಆದೇಶದ ಮೂಲಕ ಸರ್ಕಾರವೇ ಕಾನೂನಿನ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವವರು ನಿಸ್ಸಂದೇಹವಾಗಿ ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂದು ಶಿವಕುಮಾರ ಹೇಳಿದರು.
ಹಾಗೆಯೇ, ಡಿಜಿ ಮತ್ತು ಗೃಹ ಸಚಿವ ಪತ್ರಿಕಾ ಗೋಷ್ಟಿಗಳನ್ನು ನಡೆಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವವರಿಗೆ ಅನ್ಯಾಯವಾಗಲು ಬಿಡಲ್ಲ ಅಂತ ಹೇಳುತ್ತಾರೆ. ಅಮೇಲೆ ಗೃಹ ಸಚಿವರು ಡಿಜಿ ಅವರನ್ನು ತಮ್ಮ ಪಕ್ಕ ಕೂರಿಸಿಕೊಂಡೇ ಮರುಪರೀಕ್ಷೆ ನಡೆಸುವ ಅದೇಶ ಹೊರಡಿಸುತ್ತಾರೆ, ಎಂದು ಹೇಳಿದ ಶಿವಕುಮಾರ, ರಾಜ್ಯದಲ್ಲಿ ಆಡಳಿತ ಯಂತ್ರ ಕೆಟ್ಟುಹೋಗಿದೆ ಅನ್ನೋದಿಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಅನ್ನುತ್ತಾರೆ.
ಇದನ್ನೂ ಓದಿ: PSI ಪರೀಕ್ಷೆ ಡೀಲ್‌ನಲ್ಲಿ ಸಹೋದರ ಪಾತ್ರ? ವಿ.ಎಸ್.ಉಗ್ರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಡಾ.ಅಶ್ವತ್ಥ್