AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI ಪರೀಕ್ಷೆ ಡೀಲ್‌ನಲ್ಲಿ ಸಹೋದರ ಪಾತ್ರ? ವಿ.ಎಸ್.ಉಗ್ರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಡಾ.ಅಶ್ವತ್ಥ್‌

ವಿ.ಎಸ್.ಉಗ್ರಪ್ಪ ಇಂದು ಸುದ್ದಿಗೋಷ್ಠಿ ನಡೆಸಿ, ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್ ಭಾಗಿ ಆಗಿದ್ದಾರೆ. ಕೂಡಲೇ ಸಚಿವ ಅಶ್ವತ್ಥ್ ನಾರಾಯಣ ರಾಜೀನಾಮೆ ನೀಡಲಿ.

PSI ಪರೀಕ್ಷೆ ಡೀಲ್‌ನಲ್ಲಿ ಸಹೋದರ ಪಾತ್ರ? ವಿ.ಎಸ್.ಉಗ್ರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಡಾ.ಅಶ್ವತ್ಥ್‌
ಸಚಿವ ಡಾ ಅಶ್ವಥ್​ ನಾರಾಯಣ
TV9 Web
| Updated By: ಆಯೇಷಾ ಬಾನು|

Updated on: May 02, 2022 | 2:05 PM

Share

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್.ಉಗ್ರಪ್ಪ ಇಂದು ಸುದ್ದಿಗೋಷ್ಠಿ ನಡೆಸಿ ಕೆಲವು ಗಂಭಿರ ಆರೋಪಗಳನ್ನು ಮಾಡಿದ್ದಾರೆ. ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ .ಎಸ್.ಉಗ್ರಪ್ಪ ನೇರ ಆರೋಪ ಮಾಡಿದ್ದಾರೆ. ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್ ಭಾಗಿ ಆಗಿದ್ದಾರೆ ಎಂದಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ಡಾ.ಅಶ್ವತ್ಥ್ ನಾರಾಯಣ ಹಿಂದೇಟು ಹಾಕಿದ್ದು ಮಾಧ್ಯಮದವರಿಗೆ ಏನನ್ನೂ ಪ್ರತಿಕ್ರಿಯೆ ನೀಡಿದೆ ಹೋಗಿದ್ದಾರೆ.

ವಿ.ಎಸ್.ಉಗ್ರಪ್ಪ ಇಂದು ಸುದ್ದಿಗೋಷ್ಠಿ ನಡೆಸಿ, ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್ ಭಾಗಿ ಆಗಿದ್ದಾರೆ. ಕೂಡಲೇ ಸಚಿವ ಅಶ್ವತ್ಥ್ ನಾರಾಯಣ ರಾಜೀನಾಮೆ ನೀಡಲಿ. ದರ್ಶನ್ ಗೌಡ ಆಯ್ಕೆ ಹಿಂದೆ ಸಹೋದರ ಸತೀಶ್ ಕೈವಾಡವಿದೆ. ನಿಮಗೆ ಗಂಡಸ್ತನವಿದ್ರೆ, ತಾಕತ್‌ ಇದ್ದರೆ ಈ ಬಗ್ಗೆ ತನಿಖೆ ನಡೆಸಿ. ಹೈಕೋರ್ಟ್‌ ನ್ಯಾಯಮೂರ್ತಿರಿಂದ ತನಿಖೆ ನಡೆಸಲು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಡಾ.ಅಶ್ವತ್ಥ್‌ ವಿಕಾಸಸೌಧದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ, ಉಗ್ರಪ್ಪ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಹತ್ತು ನಿಮಿಷ ಬರ್ತೀನಿ ಇರಿ ಎಂದು ತೆರಳಿದ್ದಾರೆ.

ಮಿಸ್ಟರ್ ಮೋದಿ ಎಲ್ಲಿದ್ಯಪ್ಪಾ, ಕರ್ನಾಟಕದ ಬ್ರಹ್ಮಾಂಡ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವೇ: ಉಗ್ರಪ್ಪ ಪ್ರಶ್ನೆ ಬೆಂಗಳೂರು: ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಬೇರೆಯವರು ಮಾಡುವುದಕ್ಕೂ ಬಿಡುವುದಿಲ್ಲ ಎನ್ನುವ ನರೇಂದ್ರ ಮೋದಿ ಈಗ ಎಲ್ಲಿದ್ದಾರೆ. ಮಿಸ್ಟರ್ ಮೋದಿ ಎಲ್ಲಿದ್ಯಪ್ಪ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹರಿಹಾಯ್ದರು. ಪಿಎಸ್​ಐ ನೇಮಕಾತಿ ಮಾತ್ರವೇ ಅಲ್ಲ, ಕೆಪಿಎಸ್​ಸಿ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇಲ್ಲಿರುವುದು ಮೋದಿ ಅವರ ಪಕ್ಷದ್ದೇ ಸರ್ಕಾರ. ಮೋದಿ ನಿದ್ರೆ ಮಾಡ್ತಿದ್ದಾರಾ? ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳುತ್ತಾರಾ ಎಂದು ವ್ಯಂಗ್ಯವಾಡಿದರು. ಗುತ್ತಿಗೆದಾರರ ಸಂಘಟನೆ ಪ್ರಧಾನಿಗೆ ಪತ್ರ ಬರೆದು ಮೂರು ತಿಂಗಳ ಮೇಲಾಗಿದೆ. ಸಂತೋಷ್ ಆತ್ಮಹತ್ಯೆ ಬಳಿಕವೂ ಮೋದಿಯವರು ಎಚ್ಚೆತ್ತುಕೊಂಡಿಲ್ಲ. ಪ್ರಧಾನಿ ಕಚೇರಿಯಿಂದಲೇ ಭ್ರಷ್ಟಾಚಾರದ ಪಾಲನೆ ಪೋಷಣೆಯಾಗುತ್ತಿದೆ. ಕೆಪಿಎಸ್​ಸಿಗೆ ₹ 10 ಕೋಟಿ ಕೊಡಬೇಕು ಎನ್ನುವ ಆರೋಪವನ್ನು ಸ್ವ ಪಕ್ಷದವರೇ ಮಾಡಿದ್ದಾರೆ. ಬರೀ ಪುಂಗಿ ಊದುವುದರಿಂದ ಏನೂ ಆಗುವುದಿಲ್ಲ. ರಾಜ್ಯದಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಮತ್ತು ಸಿ.ಟಿ.ರವಿ ಇಬ್ಬರೂ ಪುಂಗಿ ಬಿಡೋರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಿಸ್ಟರ್ ಮೋದಿ ಎಲ್ಲಿದ್ಯಪ್ಪಾ, ಕರ್ನಾಟಕದ ಬ್ರಹ್ಮಾಂಡ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವೇ: ಉಗ್ರಪ್ಪ ಪ್ರಶ್ನೆ