ಬಾಗಲಕೋಟೆ: ಘೋಷಿತ ಮೆಡಿಕಲ್ ಕಾಲೇಜು ಶೀಘ್ರ ಸ್ಥಾಪನೆಗೆ ಅಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

ಬಾಗಲಕೋಟೆ: ಘೋಷಿತ ಮೆಡಿಕಲ್ ಕಾಲೇಜು ಶೀಘ್ರ ಸ್ಥಾಪನೆಗೆ ಅಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 02, 2022 | 7:39 PM

ತಮ್ಮ ದೇಹ ಮತ್ತು ಮಸ್ತಿಷ್ಕವನ್ನು ತಂಪಾಗಿಸಿಕೊಳ್ಳಲು ಟ್ಯಾಂಕರ್ ಕೆಳಗೆ ಕೂತು ಮೈ ಮೇಲೆಲ್ಲ ನೀರು ಹೊಯ್ದುಕೊಳ್ಳುತ್ತಿದ್ದಾರೆ. ಅದನ್ನೂ ಅವರು ಮಾಡಲೇಬೇಕು. ಇಲ್ಲದಿದ್ದರೆ ಅವರು ತೀವ್ರ ಸ್ವರೂಪದ ಡಿಹೈಡ್ರೇಶನ್ ಗೆ ಒಳಗಾಗುತ್ತಾರೆ. ಪ್ರತಿಭಟನೆ ನಡೆಯುವಾಗ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯುತ್ತದೆ.

ಈಗಾಗಲೇ ಘೋಷಣೆಯಾಗಿರುವ ಬಾಗಲಕೋಟೆ ವೈದ್ಯಕೀಯ ಕಾಲೇಜಿನ (medical college) ಸ್ಥಾಪನೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) (ನಾರಾಯಣಗೌಡ ಬಣ) ಕಾರ್ಯಕರ್ತರು ನಗದಲ್ಲಿಂದು ವಿಭಿನ್ನವಾಗಿ ಮತ್ತು ಸರ್ಕಾರದ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಕಾರ್ಯಕರ್ತರ ಪೈಕಿ ಇಬ್ಬರು ಬಾಗಲಕೋಟೆ ಸುಡುಬಿಸಿಲಲ್ಲಿ (scorching heat) ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರೆ ಉಳಿದವರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇಲ್ಲಿ ಬಿಸಲಿನ ತಾಪ ಹೇಗಿದೆ ಅಂತ ಒಮ್ಮೆ ಗಮನಿಸಿ ಮಾರಾಯ್ರೇ. ದೀರ್ಘದಂಡ ನಮಸ್ಕಾರ ಹಾಕುತ್ತಿರುವವರ ಮುಂದೆ ನೀರಿನ ಟ್ಯಾಂಕರ್ ನಿಧಾನ ಗತಿಯಲ್ಲಿ ಸಾಗುತ್ತಿದೆ. ಟ್ಯಾಂಕರ್ ನಿಂದ ಮೊದಲು ರಸ್ತೆಯ ಮೇಲೆ ನೀರು ಬೀಳುವಂತೆ ಮಾಡಲಾಗಿದೆ. ನೀರಿನಿಂದ ನೆನೆದು ಕೊಂಚ ತಂಪಾದ ಮೇಲೆ ಅವರು ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ನೀರು ಹಾಕದಿದ್ದರೆ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ರಸ್ತೆಗಳು ಕೆಂಡದಂತಾಗಿರುತ್ತವೆ.

ತಮ್ಮ ದೇಹ ಮತ್ತು ಮಸ್ತಿಷ್ಕವನ್ನು ತಂಪಾಗಿಸಿಕೊಳ್ಳಲು ಟ್ಯಾಂಕರ್ ಕೆಳಗೆ ಕೂತು ಮೈ ಮೇಲೆಲ್ಲ ನೀರು ಹೊಯ್ದುಕೊಳ್ಳುತ್ತಿದ್ದಾರೆ. ಅದನ್ನೂ ಅವರು ಮಾಡಲೇಬೇಕು ಮಾರಾಯ್ರೇ. ಇಲ್ಲದಿದ್ದರೆ ಅವರು ತೀವ್ರ ಸ್ವರೂಪದ ಡಿಹೈಡ್ರೇಶನ್ ಗೆ ಒಳಗಾಗುತ್ತಾರೆ. ಪ್ರತಿಭಟನೆ ನಡೆಯುವಾಗ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯುತ್ತದೆ.

ಒಬ್ಬ ಕಾರ್ಯಕರ್ತ ಪೊಲೀಸರೊಂದಿಗೆ ಏರುಧ್ವನಿಯಲ್ಲಿ ಮಾತಾಡುತ್ತಿರುವುದು ನಿಮಗೆ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ. ಪೊಲೀಸರು ಪ್ರತಿಭಟನೆ ತಡೆಯಲು ಪ್ರಯತ್ನಿಸಿದರು ಎಂಬ ಮಾಹಿತಿ ಇದೆ. ಆಗಲೇ ಅವರ ವರ್ತನೆಯಿಂದ ಕೋಪಗೊಂಡ ಕಾರ್ಯಕರ್ತರು ನಾವು ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗವನ್ನುಂಟು ಮಾಡುತ್ತಿಲ್ಲ. ಪ್ರತಿಭಟನೆ ನಡೆಸಲು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಹೇಳುತ್ತಿದ್ದಾರೆ. ಆದಾಗ್ಯೂ ಪೊಲೀಸರು ಕೆಲ ಕಾರ್ಯಕರ್ತರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಪ್ರತಿಭಟನೆ ಆರಂಭಿಸುವ ಮೊದಲು ಕಾರ್ಯಕರ್ತರು ಡಾ ಬಿ ಅರ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಇದನ್ನೂ ಓದಿ:    Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಪೊಲೀಸರಿಗೆ ಬೆದರಿಕೆಯೊಡ್ಡಿದ ಮಹಿಳಾ ಅಧಿಕಾರಿ; ವಿಡಿಯೋ ವೈರಲ್