ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ
ಬೊಮ್ಮಾಯಿ ಅವರನ್ನು ಬದಲಾಯಿಸುವ ಯಾವ ಇರಾದೆಯೂ ಪಕ್ಷದ ಹೈಕಮಾಂಡ್ ಗಿಲ್ಲ. ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಮ್ಮ ಪ್ರಕಾರ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿ ಎಸ್ ವೈ ಹೇಳಿದರು.
Shivamogga: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಕಳೆದೊಂದು ತಿಂಗಳಿಗಿಂತ ಹೆಚ್ಚಿನ ಅವಧಿಯಿಂದ ಹೇಳುತ್ತಲೇ ಇದ್ದಾರೆ, ಅದರೆ ಅದು ಸಾಧ್ಯವಾಗುತ್ತಿಲ್ಲ. ಏತನ್ಮಧ್ಯೆ ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳು ಮೂಡಿವೆ. ಅವರ ಕಾರ್ಯವೈಖರಿಯಿಂದ ಪಕ್ಷದ ವರಿಷ್ಠರು (high command) ಬೇಸರಗೊಂಡಿದ್ದಾರೆಂಬ ವದಂತಿ ಇದೆ. ಇದು ಚುನಾವಣಾ ವರ್ಷ ಆಗಿರುವುದರಿಂದ ಅವರು ಚಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬೊಮ್ಮಾಯಿ ಅವರ ರಾಜಕೀಯ ಗುರು ಮತ್ತು ಅವರನ್ನು ಮುಖ್ಯಮಂತ್ರಿ ಮಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ನಾಯಕತ್ವ ಬದಲಾವಣೆಯ ವರದಿಗಳನ್ನು ಅಲ್ಲಗಳೆದಿದ್ದಾರೆ.
ಶಿವಮೊಗ್ಗನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಯಡಿಯೂರಪ್ಪನವರು, ಬೊಮ್ಮಾಯಿ ಅವರನ್ನು ಬದಲಾಯಿಸುವ ಯಾವ ಇರಾದೆಯೂ ಪಕ್ಷದ ಹೈಕಮಾಂಡ್ ಗಿಲ್ಲ. ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಮ್ಮ ಪ್ರಕಾರ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಬಿಜೆಪಿಯ ಹಲವಾರು ಶಾಸಕರಿಗೆ ಮುಂದಿನ ಸಲ ಟಿಕೆಟ್ ಕೊಡಲಾಗದು ಅಂತ ಹೇಳಲಾಗುತ್ತಿದೆ ಅಂತ ಅವರನ್ನು ಕೇಳಿದಾಗ ಪಕ್ಷದ ವರಿಷ್ಠರು ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು. ಮಿಷನ್ 150 ಸಾಧಿಸುವ ಬಗ್ಗೆ ಪಕ್ಷದ ಆಂತರಿಕ ಸಮೀಕ್ಷೆ ಉತ್ತೇಜನಕಾರಿಯಲ್ಲದ ಸಂಗತಿಗಳನ್ನು ಕಂಡುಕೊಂಡಿದೆ ಎಂಬ ವಿಷಯಯವನ್ನು ಬಿ ಎಸ್ ವೈ ಅವರ ಗಮನಕ್ಕೆ ತಂದಾಗ, ಪಕ್ಷದ ಸಂಘಟನೆಗಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಆರಂಭವಾಗಿದೆ. ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ, ಬೂತ್ ಗೆದ್ದರೆ ರಾಜ್ಯ ಗೆದ್ದಂತೆಯೇ, 150 ಸೀಟುಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ, ಅಂತ ಹೇಳಿದರು.
ಇದನ್ನೂ ಓದಿ: ಚುನಾವಣೆಗೆ ರಣತಂತ್ರ ರೂಪಿಸುತ್ತಿರುವ ಬಿಜೆಪಿ: ಮೀಟಿಂಗ್ ಮೇಲೆ ಮೀಟಿಂಗ್, ಸಂತೋಷ್-ಬೊಮ್ಮಾಯಿ ಸುದೀರ್ಘ ಚರ್ಚೆ