ಮೈಸೂರು ಭಾಗದಲ್ಲಿ ಸುರಿಯುತ್ತಿರುವ ಮಳೆ ರೈತರ ಕೈಗೆ ಬಂದ ಫಸಲನ್ನು ಹಾಳು ಮಾಡುತ್ತಿದೆ

ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಧೋ ಅಂತ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಅನೇಕ ಕಡೆಗಳಲ್ಲಿ ಕೈಗೆ ಬಂದ ಫಸಲು ಹಾಳಾಗಿ ಹೋಗಿದೆ. ರೈತರು ತಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾರೆ.

TV9kannada Web Team

| Edited By: Arun Belly

May 02, 2022 | 9:40 PM

Mysuru: ನಮ್ಮ ದೇಶದ ರೈತರು (farmers) ದೌರ್ಭಾಗ್ಯವಂತರು ಅನ್ನೋದು ಸರ್ವವಿದಿತ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಹೊಟ್ಟೆ ತುಂಬಿಸುವ ಅವರು ಮಳೆರಾಯನಿಂದಾಗಿ (rains) ಅನುಭವಿಸುವ ಪಡಿಪಾಟಲು ಅಷ್ಟಿಷ್ಟಲ್ಲ. ಒಮ್ಮೆ ಅತಿವೃಷ್ಟಿ (excessive rains) ಮತ್ತೊಮ್ಮೆ ಅನಾವೃಷ್ಟಿ-ರೈತನಿಗೆ ಎರಡೂ ಒಳ್ಳೆಯವಲ್ಲ. ಓಕೆ, ಒಳ್ಳೆ ಮಳೆಯಾಯ್ತು, ಈ ಬಾರಿ ಉತ್ತಮ ಫಸಲು, ಸಾಲಗಳನ್ನು ತೀರಿಸಿಕೊಳ್ಳಬಹುದು, ಮಗಳ ಮದುವೆ ಮಾಡಬಹುದು, ಮಗನ ಫೀಸು ಕಟ್ಟಬಹುದು ಅಂದುಕೊಂಡು ಸಂತಸಲ್ಲಿದ್ದರೆ ಅಕಾಲಿಕ ಮಳೆ ರೈತನ ಪ್ರಾಣ ಹಿಂಡುತ್ತದೆ. ನಿಮಗೆ ಈ ವಿಡಿಯೋ ನಲ್ಲಿ ಕಾಣುತ್ತಿರೋದು ಅದೇ.

ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಧೋ ಅಂತ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಅನೇಕ ಕಡೆಗಳಲ್ಲಿ ಕೈಗೆ ಬಂದ ಫಸಲು ಹಾಳಾಗಿ ಹೋಗಿದೆ. ರೈತರು ತಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾರೆ. ಈ ವಿಡಿಯೋ ನಮಗೆ ಹುಣಸೂರು ತಾಲ್ಲೂಕಿನ ಸಬ್ಬನಹಳ್ಳಿಯಿಂದ ಲಭ್ಯವಾಗಿದೆ. ಮಳೆ ಸೃಷ್ಟಿಸಿರುವ ಅವಾಂತರ ನಿಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸದರಿ ಗ್ರಾಮದ ಕೃಷ್ಣಯ್ಯ ಮತ್ತು ಕರಿಯಯ್ಯ ಹೆಸರಿನ ರೈತರ ತೆಂಗಿನ ಮತ್ತು ಬಾಳೆ ತೋಟಗಳು ಹಾಳಾಗಿ ಹೋಗಿವೆ. ಉರುಳಿ ಬಿದ್ದರುವ ತೆಂಗಿನ ಮರ ಹಾಗೂ ಬಾಳೆಗಿಡಗಳನ್ನು ರೈತ ಅಸಹಾಯಕರಾಗಿ ನೋಡುತ್ತ ನಿಂತಿದ್ದಾರೆ.

ನಮ್ಮ ರೈತರು ತಮ್ಮ ಬೆಳೆಗಳ ಮೇಲೆ ವಿಮೆ ಮಾಡಿಸುವುದಿಲ್ಲ ಮಾರಾಯ್ರೇ. ಹಾಗಾಗಿ ಆಗಿರುವ ನಷ್ಟ ನಷ್ಟವೇ. ಸರ್ಕಾರಗಳು ಪರಿಹಾರ ನೀಡುವುದು ದೂರದ ಮಾತು. ಒಂದು ವೇಳೆ ಕೊಟ್ಟರೂ ‘ಕಮೀಷನ್’ ಕಟ್ ಅಗಿ ಇವರ ಕೈಗೆ ಸಿಗೋದು ಬಿಡಿಗಾಸು!

ಇದನ್ನೂ ಓದಿ:   ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ವಿವಿಧೆಡೆ ಮಳೆ ಆರ್ಭಟ: ಉರುಳಿದ ಮರಗಳು, ವಿದ್ಯುತ್ ಕಡಿತ

Follow us on

Click on your DTH Provider to Add TV9 Kannada