ಜರ್ಮನಿಯಲ್ಲಿ ಪುಟ್ಟ ಬಾಲಕನೊಬ್ಬ ಪ್ರಧಾನಿ ಮೋದಿ ಮುಂದೆ ದೇಶಭಕ್ತಿ ಗೀತೆ ಹಾಡಿ ಅವರ ಮನಸೂರೆಗೊಂಡ!
ಬಳಿಕ ನರೇಂದ್ರ ಮೋದಿಯವರ ಪೋರ್ಟ್ರೇಟ್ ಅನ್ನು ಉಡುಗೊರೆಯಾಗಿ ನೀಡಿದ ಒಬ್ಬ ಪುಟ್ಟ ಬಾಲಕಿಯ ಜೊತೆಯೂ ಪ್ರಧಾನಿಗಳು ಒಂದು ಆಪ್ತ ಸಮಾಲೋಚನೆ ನಡೆಸಿದರು. ತಮ್ಮನ್ನು ತನ್ನ ಐಕಾನ್ ಎಂದು ಕರೆದ ಪುಟ್ಟ ಬಾಲೆಯ ಜೊತೆ ಅವರು ಫೋಟೋ ತೆಗೆಸಿಕೊಂಡರು ಮತ್ತು ಆಕೆಗಾಗಿ ಪೋರ್ಟ್ರೇಟ್ ಮೇಲೆ ಸಹಿ ಮಾಡಿದರು.
ತಮ್ಮ 3-ದಿನಗಳ ಯುರೋಪ್ ಪ್ರವಾಸದ ಮೊದಲ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಸೋಮವಾರ ಜರ್ಮನಿಯ ಬರ್ಲಿನ್ ನಲ್ಲಿ (Berlin) ಬಂದಿಳಿದರು. ವಿಮಾನ ನಿಲ್ದಾಣದಿಂದ ಅವರು ತಮಗಾಗಿ ಗೊತ್ತು ಮಾಡಿದ್ದ ನಗರದ ಖ್ಯಾತ ಅಡ್ಲಾನ್ ಕೆಂಪಿನ್ಸ್ಕಿ (Aldan Kempinski) ಹೋಟೆಲ್ ತಲುಪಿದಾಗ ಅಲ್ಲಿ ಕಾಯುತ್ತಿದ್ದ ನೂರಾರು ಭಾರತೀಯ ಸಂಜಾತರು ಅವರಿಗಾಗಿ ಕಾಯುತ್ತಿದ್ದರು. ಅನೇಕರು ತಮ್ಮ ಮಕ್ಕಳನ್ನು ಸಹ ಅಲ್ಲಿಗೆ ಕರೆತಂದಿದ್ದರು. ಮೋದಿ ಅವರು ಕಣ್ಣಿಗೆ ಬೀಳುತ್ತಲೇ ‘ಭಾರತ್ ಮಾತಾ ಕೀ ಜೈ,’ ‘ವಂದೇ ಮಾತರಂ’ ಅಂತ ಘೋಷಣೆ ಕೂಗುತ್ತಾ ಅವರನ್ನು ಸ್ವಾಗತಿಸಿದರು. ಅವರಲ್ಲಿ ಒಬ್ಬ ಬಾಲಕ ಒಂದು ದೇಶಭಕ್ತಿ ಗೀತೆಯನ್ನು ಪ್ರಧಾನಿಗಳ ಮುಂದೆ ಅಸ್ಖಲಿತವಾಗಿ ಹೇಳಿ ಅವರ ಮನಸೂರೆಗೈದ. ಅವನು ಎಷ್ಟು ಸೊಗಸಾಗಿ ಹಾಡಿದನೆಂದರೆ, ಅದನ್ನು ಕೇಳುತ್ತಾ ಭಾವಪರವಶರಾದ ಮೋದಿ ಅವರು ಚಿಟಿಕೆ ಹಾಕುತ್ತಾ ಬಾಲಕನ ಹಾಡಿಗೆ ತಾಳ ಸೇರಿಸಿದರು. ಅಮೇಲೆ ಹುಡುಗನ ತಲೆ ಸವರಿ ಅವನ ಮುಖವನ್ನು ತಮ್ಮ ಕೈಯಲ್ಲಿ ಹಿಡಿದು ಕೊಂಡಾಡಿದರು. ನೆರೆದಿದ್ದ ಜನರೆಲ್ಲ ಚಪ್ಪಾಳೆ ತಟ್ಟುತ್ತಾ ಈ ಸನ್ನಿವೇಶವನ್ನು ತಮ್ಮ ಮನಸ್ಸು ಮತ್ತು ಫೋನ್ಗಳಲ್ಲಿ ತುಂಬಿಕೊಂಡರು.
#WATCH PM Narendra Modi in all praises for a young Indian-origin boy as he sings a patriotic song on his arrival in Berlin, Germany pic.twitter.com/uNHNM8KEKm
— ANI (@ANI) May 2, 2022
ಬಳಿಕ ನರೇಂದ್ರ ಮೋದಿಯವರ ಪೋರ್ಟ್ರೇಟ್ ಅನ್ನು ಉಡುಗೊರೆಯಾಗಿ ನೀಡಿದ ಒಬ್ಬ ಪುಟ್ಟ ಬಾಲಕಿಯ ಜೊತೆಯೂ ಪ್ರಧಾನಿಗಳು ಒಂದು ಆಪ್ತ ಸಮಾಲೋಚನೆ ನಡೆಸಿದರು. ತಮ್ಮನ್ನು ತನ್ನ ಐಕಾನ್ ಎಂದು ಕರೆದ ಪುಟ್ಟ ಬಾಲೆಯ ಜೊತೆ ಅವರು ಫೋಟೋ ತೆಗೆಸಿಕೊಂಡರು ಮತ್ತು ಆಕೆಗಾಗಿ ಪೋರ್ಟ್ರೇಟ್ ಮೇಲೆ ಸಹಿ ಮಾಡಿದರು.
ಜರ್ಮಿನಿಗೆ ಭೇಟಿ ನೀಡಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರು ಹೊಸದಾಗಿ ನೇಮಕಗೊಂಡಿರುವ ಚಾನ್ಸ್ಲರ್ ಒಲಾಫ್ ಶೋಲ್ಜ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: PM Modi: ಇಂದು ಸಾಗರ ಶೃಂಗಸಭೆಯ ಉನ್ನತ ವಿಭಾಗವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ