PM Modi: ಇಂದು ಸಾಗರ ಶೃಂಗಸಭೆಯ ಉನ್ನತ ವಿಭಾಗವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ
One Ocean Summit: ಪ್ರಧಾನಿ ನರೇಂದ್ರ ಮೋದಿ ಇಂದು ಸಾಗರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶೃಂಗಸಭೆಯ ಉದ್ದೇಶವು ಆರೋಗ್ಯಕರ ಮತ್ತು ಸುಸ್ಥಿರ ಸಾಗರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಮತ್ತು ಬೆಂಬಲಿಸಲು ಸ್ಪಷ್ಟವಾದ ಕ್ರಮವನ್ನು ತೆಗೆದುಕೊಳ್ಳಲು ಅಂತರರಾಷ್ಟ್ರೀಯ ಸಮುದಾಯವನ್ನು ಸಜ್ಜುಗೊಳಿಸುವುದಾಗಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಡಿಯೋ ಸಂದೇಶದ ಮೂಲಕ ಸಾಗರ ಶೃಂಗಸಭೆಯ (One Ocean Summit) ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಜರ್ಮನಿ, ಬ್ರಿಟನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಕೆನಡಾ ಸೇರಿದಂತೆ ಹಲವಾರು ರಾಷ್ಟ್ರ ಹಾಗೂ ರಾಜ್ಯಗಳ ಮುಖ್ಯಸ್ಥರು ಕೂಡ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಮೋದಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಸಾಗರ ಶೃಂಗಸಭೆಯ ಉನ್ನತ ಮಟ್ಟದ ವಿಭಾಗವನ್ನು ವಿಡಿಯೋ ಸಂದೇಶದ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್‌ನ ಸಹಕಾರದೊಂದಿಗೆ ಫ್ರಾನ್ಸ್ ಫೆಬ್ರವರಿ 9ರಿಂದ 11ರವರೆಗೆ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಇದರ ಉದ್ದೇಶವು ಆರೋಗ್ಯಕರ ಮತ್ತು ಸುಸ್ಥಿರ ಸಾಗರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಮತ್ತು ಬೆಂಬಲಿಸಲು ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಳ್ಳಲು ಅಂತರರಾಷ್ಟ್ರೀಯ ಸಮುದಾಯವನ್ನು ಸಜ್ಜುಗೊಳಿಸುವುದಾಗಿದೆ.
2021- 2030ರ ನಡುವಿನ ದಶಕವನ್ನು ವಿಶ್ವಸಂಸ್ಥೆಯು ‘ಸುಸ್ಥಿರ ಅಭಿವೃದ್ಧಿಗಾಗಿ ಸಾಗರ ವಿಜ್ಞಾನದ ದಶಕ’ ಎಂದು ಘೋಷಿಸಿದೆ. ಕ್ಷೀಣಿಸುತ್ತಿರುವ ಸಾಗರ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ಯೋಜನೆ ರೂಪಿಸಲಾಗಿದೆ. IOC-UNESCO ಮತ್ತು ಫ್ರಾನ್ಸ್ ಸರ್ಕಾರ ಜಂಟಿಯಾಗಿ ಆಯೋಜಿಸಿರುವ ಈ ಶೃಂಗಸಭೆಯು, ಸಾಗರಕ್ಕೆ ಮೀಸಲಾದ ದಶಕದ ಮೊದಲ ವರ್ಷದಲ್ಲಿ ನಡೆಯುತ್ತಿರುವ ಪ್ರಮುಖ ಸಂಕಿರಣವಾಗಿದೆ.
ಈ ಕುರಿತು ಎಎನ್ಐ ಟ್ವೀಟ್ ಇಲ್ಲಿದೆ:
PM Narendra Modi will address the high-level segment of One Ocean Summit on February 11 through a video message. The high-level segment of the Summit will also be addressed by several Heads of States & Govts including Germany, UK, South Korea, Japan, Canada, among others: PMO pic.twitter.com/qnRrHWY1pp
— ANI (@ANI) February 10, 2022
ಇಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಲಿರುವ ಪ್ರಧಾನಿ:
ಈ ನಡುವೆ ಪ್ರಧಾನಿ ಇಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಉತ್ತರಾಖಂಡದ ಅಲ್ಮೋರಾ ಮತ್ತು ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ‘ಉತ್ತರಪ್ರದೇಶ, ಉತ್ತರಾಖಂಡ ಮತ್ತು ಗೋವಾದ ಜನರ ಪ್ರೀತಿಗಾಗಿ ಧನ್ಯವಾದಗಳು. ಫೆಬ್ರವರಿ 11 ರಂದು ಅಲ್ಮೋರಾ ಮತ್ತು ಕಾಸ್ಗಂಜ್‌ನಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದೇನೆ’ ಎಂದು ಪ್ರಧಾನಿ ಮೋದಿ ಗುರುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
CISF Recruitment 2022: ಪಿಯುಸಿ ಪಾಸಾದವರಿಗೆ ಕೈಗಾರಿಕಾ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ: ವೇತನ 69 ಸಾವಿರ ರೂ.
Karnataka High Court Decision on Hijab Highlights: ಸೋಮವಾರದಿಂದ ಹೈಸ್ಕೂಲ್ ಹಾಗೂ ಕಾಲೇಜು ಆರಂಭ; ಸಿಎಂ ಹೇಳಿಕೆ