ಕಟ್ಟಡವೊಂದನ್ನು ಉದ್ಘಾಟಿಸಲು ಶಾಲಾ ಮಕ್ಕಳಂತೆ ಕಚ್ಚಾಡಿದರು ಸಚಿವ ಎಮ್​ಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ!

ಒಂದು ಹಂತದಲ್ಲಿ ಶರತ್, ತಮ್ಮ ತಂದೆ ಸಂಸದ ಬಿ ಎನ್ ಬಚ್ಚೇಗೌಡ ವಿಷಯ ಮಾತಾಡಕೂಡದು ಅಂತ ಎಮ್ ಟಿ ಬಿಗೆ ಎಚ್ಚರಿಸುವುದು ಅಸ್ಪಷ್ಟವಾಗಿ ಕೇಳಿಸುತ್ತದೆ. ಅದಕ್ಕೆ ಮೊದಲು ಸಚಿವರು, ಹಿಂದೆ ನಿನ್ನ ತಂದೆ ವರ್ತಿಸುತ್ತಿದ್ದ ಹಾಗೇಯೇ ನಿನ್ನ ವರ್ತನೆ ಇದೆ ಎಂದು ಹೇಳಿದರಂತೆ.

ಕಟ್ಟಡವೊಂದನ್ನು ಉದ್ಘಾಟಿಸಲು ಶಾಲಾ ಮಕ್ಕಳಂತೆ ಕಚ್ಚಾಡಿದರು ಸಚಿವ ಎಮ್​ಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 10, 2022 | 7:07 PM

ಕಟ್ಟಡವೊಂದರ ಟೇಪ್ ಕತ್ತರಿಸಿ ಉದ್ಘಾಟನೆ (Inauguration) ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಹೊಸಕೇಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ (Sharath Bache Gowda) ಮತ್ತು ನಗರಾಭಿವೃದ್ಧಿ ಸಚಿವ ಎಮ್ ಟಿ ಬಿ ನಾಗಾರಾಜ್ (MTB Nagraj) ಶಾಲಾಮಕ್ಕಳಂತೆ ಕಿತ್ತಾಡಿದ ಸ್ವಾರಸ್ಯಕರ ಮತ್ತು ಅಷ್ಟೇ ವಿಷಾದಕರ ಘಟನೆಯೊಂದು ಹೊಸಕೋಟೆ (Hoskote) ತಾಲ್ಲೂಕಿನ ಮುತ್ಸಂದ್ರ ಗ್ರಾಮದಲ್ಲಿ ನಡೆದಿದೆ. ಸದರಿ ಗ್ರಾಮದ ಪಂಚಾಯತಿ ಕಟ್ಟಡ ಉದ್ಘಾಟನೆ ಸಮಯದಲ್ಲಿ ಗಣ್ಯರು ಸಾರ್ವಜನಿಕರ ಎದುರು ಜಗಳ ಮಾಡಿದ್ದಾರೆ. ಅಸಲಿಗೆ ಟೇಪನ್ನು ತಾನು ಕಟ್ ಮಾಡಬೇಕಿತ್ತು ಎಂದು ವಾದಿಸಿರುವ ಸಚಿವ ನಾಗರಾಜ, ಶಾಸಕರು ತಾವೇ ಕತ್ತರಿ ತಟ್ಟೆಯಲ್ಲಿದ್ದ ಕತ್ತರಿ ಎತ್ತಿಕೊಂಡು ಟೇಪ್ ಕಟ್ ಮಾಡಿದಾಗ ಕೋಪದಿಂದ ಭುಸುಗುಡಲಾರಂಭಿಸಿದ್ದಾರೆ. ಕಟ್ಟಡದ ಒಳಗೆ ಪೂಜೆ ನಡೆಯುವ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಅರ್ಚಕರು ಪೂಜೆ ಮಾಡುವುದನ್ನು ನಿಲ್ಲಿಸಿ ಶಾಸಕ ಮತ್ತು ಸಚಿವರ ಜಗಳ ನೋಡುತ್ತಾ ನಿಂತುಬಿಡುತ್ತಾರೆ. ಸ್ಥಳದಲ್ಲಿ ಗಲಾಟೆ ಜಾಸ್ತಿ ಇರುವುದರಿಂದ ಅವರಿಬ್ಬರು ಪರಸ್ಪರ ಬೈದಾಡುವುದು ಸರಿಯಾಗಿ ಕೇಳಿಸುವುದಿಲ್ಲ.

ಆದರೆ, ಒಂದು ಹಂತದಲ್ಲಿ ಶರತ್, ತಮ್ಮ ತಂದೆ ಸಂಸದ ಬಿ ಎನ್ ಬಚ್ಚೇಗೌಡ ವಿಷಯ ಮಾತಾಡಕೂಡದು ಅಂತ ಎಮ್ ಟಿ ಬಿಗೆ ಎಚ್ಚರಿಸುವುದು ಅಸ್ಪಷ್ಟವಾಗಿ ಕೇಳಿಸುತ್ತದೆ. ಅದಕ್ಕೆ ಮೊದಲು ಸಚಿವರು, ಹಿಂದೆ ನಿನ್ನ ತಂದೆ ವರ್ತಿಸುತ್ತಿದ್ದ ಹಾಗೇಯೇ ನಿನ್ನ ವರ್ತನೆ ಇದೆ ಎಂದು ಹೇಳಿದರಂತೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಶರತ್ ಅವರು ಆಮೇಲೆ ಕಾಂಗ್ರೆಸ್ ಪಕ್ಷ ಸೇರಿದ್ದರು. ವಿದೇಶದಲ್ಲಿ ವ್ಯಾಸಂಗ ಮಾಡಿರುವ ಅವರ ಮತ್ತು ಎಮ್ ಟಿ ಬಿ ನಾಗರಾಜ ನಡುವೆ ಇರುಸು ಮುರುಸು ಮೊದಲಿನಿಂದಲೂ ಇದ್ದು ಆಗಾಗ ಮಾತಿನ ಚಕಮಕಿ ನಡೆಯುತ್ತಿರುತ್ತದೆ.

ಇದನ್ನೂ ಓದಿ:  ನೀವು ಮತ ಹಾಕುವಾಗ ತಪ್ಪು ಮಾಡಿದರೆ ನಮ್ಮ ರಾಜ್ಯವೂ ಕೇರಳವಾಗುತ್ತದೆ: ಉತ್ತರಪ್ರದೇಶ ಜನರಿಗೆ ಸಿಎಂ ಯೋಗಿ ವಿಡಿಯೋ ಸಂದೇಶ

Follow us