ನೀವು ಮತ ಹಾಕುವಾಗ ತಪ್ಪು ಮಾಡಿದರೆ ನಮ್ಮ ರಾಜ್ಯವೂ ಕೇರಳವಾಗುತ್ತದೆ: ಉತ್ತರಪ್ರದೇಶ ಜನರಿಗೆ ಸಿಎಂ ಯೋಗಿ ವಿಡಿಯೋ ಸಂದೇಶ

ನಮ್ಮದು ಡಬಲ್​ ಎಂಜಿನ್ ಸರ್ಕಾರವೇ ಆಗಿದೆ. ಕೇಂದ್ರದಲ್ಲಿರುವ ಬಿಜೆಪಿ ಮತ್ತು ರಾಜ್ಯದಲ್ಲಿರು ಬಿಜೆಪಿ ಸರ್ಕಾರಗಳು ಜನರಿಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಡಲು ಬದ್ಧತೆಯನ್ನು ಹೊಂದಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನೀವು ಮತ ಹಾಕುವಾಗ ತಪ್ಪು ಮಾಡಿದರೆ ನಮ್ಮ ರಾಜ್ಯವೂ ಕೇರಳವಾಗುತ್ತದೆ: ಉತ್ತರಪ್ರದೇಶ ಜನರಿಗೆ ಸಿಎಂ ಯೋಗಿ ವಿಡಿಯೋ ಸಂದೇಶ
ಸಿಎಂ ಯೋಗಿ
Follow us
TV9 Web
| Updated By: Lakshmi Hegde

Updated on:Feb 10, 2022 | 8:24 AM

ಇಂದು ಉತ್ತರ ಪ್ರದೇಶದ ಮೊದಲ ಹಂತದ ಮತದಾನ (First Phase Voting In Uttar Pradesh) ಪ್ರಾರಂಭವಾಗಿದೆ. ಹೀಗೆ ಜನರು ತಮ್ಮ ಮತಚಲಾಯಿಸುವುದಕ್ಕೂ ಕೆಲವೇ ಹೊತ್ತುಗಳ ಮೊದಲು ಸಿಎಂ ಯೋಗಿ ಆದಿತ್ಯನಾಥ್​ (CM Yogi Adityanath) ಅವರು ರಾಜ್ಯದ ಜನರಿಗೆ ಒಂದು ಸಣ್ಣ ಎಚ್ಚರಿಕೆ ನೀಡಿದ್ದಾರೆ.  ನೀವೇನಾದರೂ ಇಂದು ಮತ ಹಾಕುವಲ್ಲಿ ಎಡವಿದರೆ ಮುಂದೆ ನಮ್ಮ ಉತ್ತರ ಪ್ರದೇಶ ರಾಜ್ಯವೂ ಕೂಡ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ಆಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಸುಮಾರು 6 ನಿಮಿಷಗಳ ವಿಡಿಯೋ ಮಾಡಿ, ಶೇರ್​ ಮಾಡಿರುವ ಯೋಗಿ, ಇಷ್ಟುದಿನ ಸುಮ್ಮನಿದ್ದ ದಂಗೆಕೋರರೆಲ್ಲ ಈಗಲೇ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ, ಭಯೋತ್ಪಾದಕರು ಪದೇಪದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದೂ ಆರೋಪ ಮಾಡಿದ್ದಾರೆ. 

ನಮ್ಮದು ಡಬಲ್​ ಎಂಜಿನ್​ ಸರ್ಕಾರ ಎಂದು ಹೇಳಲಾಗುತ್ತದೆ. ಹೌದು, ನಮ್ಮದು ಡಬಲ್​ ಎಂಜಿನ್ ಸರ್ಕಾರವೇ ಆಗಿದೆ. ಕೇಂದ್ರದಲ್ಲಿರುವ ಬಿಜೆಪಿ ಮತ್ತು ರಾಜ್ಯದಲ್ಲಿರು ಬಿಜೆಪಿ ಸರ್ಕಾರಗಳು ಜನರಿಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಡಲು ಬದ್ಧತೆಯನ್ನು ಹೊಂದಿವೆ. ಕಳೆದ ಐದು ವರ್ಷಗಳಲ್ಲಿ ಜನರಿಗಾಗಿ ತುಂಬ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ ಎಂದು ಹೇಳಿರುವ ಯೋಗಿ ಆದಿತ್ಯನಾಥ್​,  ಉತ್ತರಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅನೇಕ ಅಭಿವೃದ್ಧಿಯಾಗಿದೆ. ಇದನ್ನು ನಾನು ನನ್ನ ಹೃದಯದಿಂದ ಹೇಳುತ್ತಿದ್ದೇನೆ. ಎಚ್ಚರವಿರಲಿ, ನೀವೇನಾದರೂ ಈಗ ಸರಿಯಾಗಿ ಮತದಾನ ಮಾಡದೆ ಇದ್ದರೆ, ಈ ಐದು ವರ್ಷಗಳಲ್ಲಿ ಯುಪಿಯಲ್ಲಿ ಕೆಲಸ ಮಾಡಿದ ಶ್ರಮಿಕರ ಶ್ರಮ ವ್ಯರ್ಥವಾಗುತ್ತದೆ. ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ನಮ್ಮ ರಾಜ್ಯವೂ ಆಗಲು ತುಂಬ ಸಮಯ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.  ಅಷ್ಟೇ ಅಲ್ಲ, ಈ ಐದು ವರ್ಷದಲ್ಲಿ ನಾನು ಪಟ್ಟ ಶ್ರಮಕ್ಕೆ ನಿಮ್ಮ ಒಂದು ಮತ ಆಶೀರ್ವಾದ ಆಗಲಿದೆ. ಮುಂದಿನ ದಿನಗಳಲ್ಲಿ ಕೂಡ ನೀವು ಭಯಮುಕ್ತರಾಗಿ ಜೀವನ ನಡೆಸಲು ಅದು ಭರವಸೆಯೂ ಹೌದು ಎಂದು ಹೇಳಿದ್ದಾರೆ.

ಉತ್ತರಪ್ರದೇಶಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಿದ್ದು, ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಜಾನೆಯಿಂದ ಮತದಾನ ಶುರುವಾಗಿದೆ. ಇಂದು 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಅಂದರೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಇಂದು ಮತದಾನ ನಡೆಯಲಿದೆ. ಇಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವೇ ಇದ್ದು, ಬಿಜೆಪಿ ಪಾಲಿಗೆ ಈ ಸಮುದಾಯದ ಮತಗಳಿಕೆ ಪ್ರಸಕ್ತ ಬಾರಿ ತುಸು ಕಷ್ಟವಾಗಬಹುದು. ಯಾಕೆಂದರೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದು ಇದೇ ಜಾಟ್​ ಸಮುದಾಯದವರೇ ಆಗಿದ್ದರು.

ಇದನ್ನೂ ಓದಿ: UP Assembly Election 2022: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಪ್ರಾರಂಭ; ಮುಂಜಾನೆಯಿಂದಲೇ ಮತಗಟ್ಟೆಗೆ ಜನರ ಆಗಮನ

Published On - 8:14 am, Thu, 10 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ