‘ಕೆಜಿಎಫ್ 2’ ಚಿತ್ರದ 16ನೇ ದಿನದ ಕಲೆಕ್ಷನ್ ಹಿಂದಿಕ್ಕಲು ಒದ್ದಾಡಿದ ಅಜಯ್ ದೇವಗನ್ ಹೊಸ ಸಿನಿಮಾ

‘ಕೆಜಿಎಫ್ 2’ ಚಿತ್ರದ ಹಿಂದಿ ವರ್ಷನ್​ನ ಸದ್ಯದ ಕಲೆಕ್ಷನ್ 353.6 ಕೋಟಿ ರೂಪಾಯಿ ಆಗಿದೆ. ಇಂದು ಹಾಗೂ  ನಾಳೆ ಚಿತ್ರದ ಗಳಿಕೆ ಹೆಚ್ಚಬಹುದು. ಮೇ 2 ಈದ್ ಹಬ್ಬವಿದೆ. ಇದು ಕೂಡ ‘ಕೆಜಿಎಫ್ 2’ ಕಲೆಕ್ಷನ್​ಗೆ ಸಹಕಾರಿ ಆಗಲಿದೆ.

‘ಕೆಜಿಎಫ್ 2’ ಚಿತ್ರದ 16ನೇ ದಿನದ ಕಲೆಕ್ಷನ್ ಹಿಂದಿಕ್ಕಲು ಒದ್ದಾಡಿದ ಅಜಯ್ ದೇವಗನ್ ಹೊಸ ಸಿನಿಮಾ
ಯಶ್-ಅಜಯ್ ದೇವಗನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 30, 2022 | 4:49 PM

ಬಾಲಿವುಡ್ ಮಂದಿಗೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ಅಕ್ಷರಶಃ ದುಸ್ವಪ್ನವಾಗಿ ಕಾಡುತ್ತಿದೆ. ಯಶ್ ಸಿನಿಮಾ ತೆರೆಕಂಡು 17 ದಿನ ಕಳೆದಿದೆ. ಆದರೆ, ಈ ಚಿತ್ರದ ಕಲೆಕ್ಷನ್ ಹಿಂದಿಕ್ಕೋಕೆ ಹೊಸ ಸಿನಿಮಾಗಳಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಏಪ್ರಿಲ್​ 14ರ ಆಸುಪಾಸಿನಲ್ಲಿ ತೆರೆಗೆ ಬಂದ ತಮಿಳಿನ ‘ಬೀಸ್ಟ್​’ ಹಾಗೂ ಹಿಂದಿಯ ‘ಜೆರ್ಸಿ’ ಸಿನಿಮಾಗಳು (Jersey Movie) ಸೋಲುಂಡಿವೆ. ಇದರಿಂದ ‘ಕೆಜಿಎಫ್ 2’ ಚಿತ್ರಕ್ಕೆ ವರದಾನವಾಗಿದೆ. ಈಗ ಶುಕ್ರವಾರ (ಏಪ್ರಿಲ್ 29) ತೆರೆಗೆ ಬಂದ ಎರಡು ಬಾಲಿವುಡ್​ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸೊರಗುವುದು ಖಚಿತ ಎನ್ನಲಾಗುತ್ತಿದೆ. ಈ ಎರಡೂ ಚಿತ್ರಗಳ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಬಂದಿದ್ದು, ಅಚ್ಚರಿ ಮೂಡಿಸಿದೆ.

ಏಪ್ರಿಲ್ 29ರಂದು ಬಾಲಿವುಡ್​ನಲ್ಲಿ ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’ ಹಾಗೂ ಅಜಯ್​ ದೇವಗನ್ ನಟನೆಯ ‘ರನ್​ವೇ 34’ ರಿಲೀಸ್ ಆಗಿದೆ. ಏಪ್ರಿಲ್ 29 ‘ಕೆಜಿಎಫ್ 2’ಗೆ 16ನೇ ದಿನ. ಈ ಚಿತ್ರ ಶುಕ್ರವಾರ 4.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ‘ರನ್​ವೇ 34’ ಚಿತ್ರದ ಮೊದಲ ದಿನದ ಕಲೆಕ್ಷನ್ ಹಿಂದಿಕ್ಕಿದೆ.

ಅಜಯ್​ ದೇವಗನ್ ನಟನೆಯ ‘ರನ್​ವೇ 34’ ಚಿತ್ರ ಮೊದಲ ದಿನ ಗಳಿಸಿದ್ದು ಕೇವಲ 3 ಕೋಟಿ ರೂಪಾಯಿ. ಅಜಯ್ ಅವರು ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲ ನಿರ್ದೇಶನವನ್ನೂ ಮಾಡಿದ್ದಾರೆ. ಆದರೆ, ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿಲ್ಲ. ಇದರಿಂದ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಲು ವಿಫಲವಾಗಿದೆ.

‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೂ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನ 6.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಶನಿವಾರ (ಏಪ್ರಿಲ್ 30) ಹಾಗೂ ಭಾನುವಾರ  (ಮೇ 1)ಈ ಚಿತ್ರಗಳು ಹೇಗೆ ಪರ್ಫಾರ್ಮ್ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

‘ಕೆಜಿಎಫ್ 2’ ಚಿತ್ರದ ಹಿಂದಿ ವರ್ಷನ್​ನ ಸದ್ಯದ ಕಲೆಕ್ಷನ್ 353.6 ಕೋಟಿ ರೂಪಾಯಿ ಆಗಿದೆ. ಇಂದು ಹಾಗೂ  ನಾಳೆ ಚಿತ್ರದ ಗಳಿಕೆ ಹೆಚ್ಚಬಹುದು. ಮೇ 2 ಈದ್ ಹಬ್ಬವಿದೆ. ಇದು ಕೂಡ ‘ಕೆಜಿಎಫ್ 2’ ಕಲೆಕ್ಷನ್​ಗೆ ಸಹಕಾರಿ ಆಗಲಿದೆ.

ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್​ಆರ್​ಆರ್’ ಗೆಲುವಿನ ಬಗ್ಗೆ ಅಭಿಷೇಕ್ ಬಚ್ಚನ್ ಹೇಳೋದೇ ಬೇರೆ; ಏನದು?

1,000 ಕೋಟಿ ರೂಪಾಯಿ ದಾಟಿದ ‘ಕೆಜಿಎಫ್ 2’ ಕಲೆಕ್ಷನ್; ಹೊಸ ದಾಖಲೆ ಬರೆದ ಕನ್ನಡ ಸಿನಿಮಾ