AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಸೋತಿದ್ದು ಯಾಕೆ? ಎಲ್ಲವನ್ನೂ ವಿವರಿಸಿದ ಮನೋಜ್​ ಬಾಜ್​ಪಾಯಿ

Manoj Bajpayee: ‘ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು’ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಸೋತಿದ್ದು ಯಾಕೆ? ಎಲ್ಲವನ್ನೂ ವಿವರಿಸಿದ ಮನೋಜ್​ ಬಾಜ್​ಪಾಯಿ
ಮನೋಜ್​ ಬಾಜ್​ಪಾಯಿ
TV9 Web
| Edited By: |

Updated on: Apr 30, 2022 | 10:20 AM

Share

ದಕ್ಷಿಣ ಭಾರತದ ಸಿನಿಮಾಗಳು ಮಾಡುತ್ತಿರುವ ಮೋಡಿ ಕಂಡು ಬಾಲಿವುಡ್​ ಮಂದಿ ಬೆರಗಾಗಿದ್ದಾರೆ. ಕನ್ನಡ ಮತ್ತು ತೆಲುಗಿನ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF 2), ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳು ಧೂಳೆಬ್ಬಿಸಿವೆ. ದಕ್ಷಿಣ ಭಾರತದ ಸಿನಿಮಾಗಳ ಎದುರು ಪೈಪೋಟಿ ನೀಡಲು ಬಾಲಿವುಡ್​ ಸ್ಟಾರ್​ ಹೀರೋಗಳಿಗೂ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದ ಜನರು ದಕ್ಷಿಣದ ಡಬ್ಬಿಂಗ್​ ಸಿನಿಮಾಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಮೂಲ ಹಿಂದಿ ಚಿತ್ರಗಳು ಸೋತು ಸುಣ್ಣ ಆಗುತ್ತಿವೆ. ಬಾಲಿವುಡ್​ (Bollywood) ಮಂದಿಗೆ ಇಂಥ ಪರಿಸ್ಥಿತಿ ಯಾಕೆ ಬಂತು ಎಂಬುದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಸ್ವತಃ ಬಾಲಿವುಡ್​ ಸೆಲೆಬ್ರಿಟಿಗಳೇ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಖ್ಯಾತ ನಟ ಮನೋಜ್​ ಬಾಜ್​ಪಾಯಿ (Manoj Bajpayee) ಅವರು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗಕ್ಕೂ ಬಾಲಿವುಡ್​ಗೂ ಇರುವ ವ್ಯತ್ಯಾಸ ಏನು ಎಂಬುದನ್ನು ಅವರು ಗುರುತಿಸಿದ್ದಾರೆ. ಸೌತ್​ ಸಿನಿಮಾಗಳನ್ನು ನೋಡಿ ಹಿಂದಿ ಚಿತ್ರರಂಗದವರು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾಗಳು ಯಾವ ಮಟ್ಟಕ್ಕೆ ಬ್ಲಾಕ್​ ಬಸ್ಟರ್​ ಆಗುತ್ತಿವೆ ಎಂದರೆ ನನ್ನ ವಿಷಯ ಬಿಡಿ, ಬಾಲಿವುಡ್​ನ ಪ್ರಮುಖ ಫಿಲ್ಮ್​ ಮೇಕರ್​ಗಳಿಗೆ ಭಯ ಹುಟ್ಟಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ.​ ದಕ್ಷಿಣ ಭಾರತದವರು ತುಂಬ ಪ್ಯಾಷನೇಟ್​ ಆಗಿ ಸಿನಿಮಾ ಮಾಡುತ್ತಾರೆ. ಯಾವುದರಲ್ಲೂ ರಾಜಿ ಆಗಲ್ಲ. ತಾವು ಜಗತ್ತಿನ ದಿ ಬೆಸ್ಟ್​ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ ಎಂಬ ಭಾವನೆಯಲ್ಲೇ ಅವರು ಶೂಟಿಂಗ್​ ಮಾಡುತ್ತಾರೆ. ತುಂಬ ಆಲೋಚನೆ ಮಾಡುತ್ತಾರೆ. ಪ್ರೇಕ್ಷಕರ ಬಗ್ಗೆ ಹಗುರವಾಗಿ ಒಮ್ಮೆ ಕೂಡ ಮಾತನಾಡುವುದಿಲ್ಲ’ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

‘ಇದು ಮಾಸ್​ ಆಗಿದೆ, ಹಾಗಾಗಿ ನಡೆದು ಬಿಡುತ್ತೆ ಅಂತ ದಕ್ಷಿಣ ಭಾರತದವರು ಹೇಳಲ್ಲ. ಕೆಜಿಎಫ್​ 2, ಪುಷ್ಪ, ಆರ್​ಆರ್​ಆರ್​ ಸಿನಿಮಾಗಳ ಮೇಕಿಂಗ್​ ಗಮನಿಸಿ. ಅವು ತುಂಬ ನೀಟ್ ಆಗಿವೆ. ಇದು ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ ಎಂಬ ರೀತಿಯಲ್ಲೇ ಅವರು ಪ್ರತಿ ದೃಶ್ಯದ ಚಿತ್ರೀಕರಣ ಮಾಡುತ್ತಾರೆ. ಆ ಗುಣದ ಕೊರತೆ ನಮ್ಮಲ್ಲಿ ಇದೆ. ನಾವು ಬರೀ ಹಣದ ದೃಷ್ಟಿಯಿಂದ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು’ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

ಇದೇ ರೀತಿ ಅನೇಕ ನಟರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಇತ್ತೀಚೆಗೆ ನವಾಜುದ್ದೀನ್​ ಸಿದ್ದಿಕಿ ಅವರು ಕೂಡ ಬಾಲಿವುಡ್​ನ ಕೆಲವು ಲೋಪಗಳ ಬಗ್ಗೆ ಮಾತನಾಡಿದ್ದರು. ದಕ್ಷಿಣ ಭಾರತದ ಹಲವು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ಇದು ತಪ್ಪು ಅನ್ನೋದು ನವಾಜುದ್ದೀನ್ ಅವರ ಅಭಿಪ್ರಾಯ. ‘ನಮ್ಮಿಂದ ಒಂದು ತಪ್ಪು ನಡೆದಿದೆ. ನಾವು ಸೌತ್ ಚಿತ್ರಗಳನ್ನು ರೀಮೇಕ್ ಮಾಡುತ್ತಲೇ ಇದ್ದೇವೆ. ನಾವು ಒರಿಜಿನಲ್​ ಸ್ಟೋರಿಗಳನ್ನು ಮಾಡುತ್ತಿಲ್ಲ. ನಾವು ರಿಮೇಕ್​ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಮೂಲ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕಿದೆ’ ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ