AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Karthik Jayaram: ನಟ ಜೆಕೆ ಜನ್ಮದಿನ: ಉತ್ತರ ಭಾರತದ ಪ್ರೇಕ್ಷಕರಿಂದಲೂ ಭೇಷ್​ ಎನಿಸಿಕೊಂಡ ಕರುನಾಡಿನ ಪ್ರತಿಭಾವಂತ ಕಲಾವಿದ

Karthik Jayaram Birthday: ಜೆಕೆ ಜನ್ಮದಿನಕ್ಕೆ ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ನಟನೆ ಮಾತ್ರವಲ್ಲದೇ ಫಿಟ್ನೆಸ್​ ವಿಚಾರದಲ್ಲೂ ಜೆಕೆ ಮಾದರಿ ಆಗಿದ್ದಾರೆ.

Happy Birthday Karthik Jayaram: ನಟ ಜೆಕೆ ಜನ್ಮದಿನ: ಉತ್ತರ ಭಾರತದ ಪ್ರೇಕ್ಷಕರಿಂದಲೂ ಭೇಷ್​ ಎನಿಸಿಕೊಂಡ ಕರುನಾಡಿನ ಪ್ರತಿಭಾವಂತ ಕಲಾವಿದ
ಕಾರ್ತಿಕ್ ಜಯರಾಮ್
TV9 Web
| Updated By: ಮದನ್​ ಕುಮಾರ್​|

Updated on: May 01, 2022 | 10:16 AM

Share

ನಟ ಕಾರ್ತಿಕ್​ ಜಯರಾಮ್​ (Karthik Jayaram) ಅವರು ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಫೇಮಸ್​ ಆಗಿದ್ದಾರೆ. ಕಾರ್ತಿಕ್​ ಜಯರಾಮ್​ ಎಂದರೆ ಕೆಲವರಿಗೆ ತಕ್ಷಣಕ್ಕೆ ತಿಳಿಯದೇ ಇರಬಹುದು. ಆದರೆ ಜೆಕೆ (Actor JK) ಎಂದರೆ ಥಟ್​ ಅಂತ ಗೊತ್ತಾಗುತ್ತದೆ. ಅಷ್ಟರಮಟ್ಟಿಗೆ ಜೆಕೆ ಎಂದೇ ಜನಪ್ರಿಯತೆ ಪಡೆದಿದ್ದಾರೆ ಕಾರ್ತಿಕ್​ ಜಯರಾಮ್. ಇಂದು ಜೆಕೆ ಅವರಿಗೆ ಜನ್ಮದಿನದ (Karthik Jayaram Birthday) ಸಡಗರ. ಆ ಸಲುವಾಗಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ವಿಶ್​ ಮಾಡುತ್ತಿದ್ದಾರೆ. ಕನ್ನಡದಲ್ಲಿ ಸಿನಿಮಾ ಜರ್ನಿ ಆರಂಭಿಸಿದ ಅವರನ್ನು ಬಾಲಿವುಡ್​ ಕೂಡ ಸ್ವಾಗತಿಸಿತು. ಹಿಂದಿ ಕಿರುತೆರೆಯಲ್ಲೂ ಮಿಂಚಿದ್ದಾರೆ. ನಟನೆಗೆ ನೀಡುವಷ್ಟೇ ಮಹತ್ವವನ್ನು ಅವರು ಫಿಟ್ನೆಸ್​ ಸಲುವಾಗಿ ನೀಡುತ್ತಾರೆ. ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುವುದು ತಪ್ಪಿಸುವುದಿಲ್ಲ. ಕಟ್ಟುಮಸ್ತಾದ ಬಾಡಿ ಹೊಂದಿರುವ ಅವರು ಅದಕ್ಕಾಗಿ ಪಡುವ ಪರಿಶ್ರಮಕ್ಕೆ ಹ್ಯಾಟ್ಸಾಫ್​ ಎನ್ನಲೇಬೇಕು. ಈ ವಿಚಾರದಲ್ಲಿ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಪ್ರಸ್ತುತ ಜೆಕೆ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದಾರೆ. ಜೆಕೆ ಹುಟ್ಟುಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ಮುಂದಿನ ಸಿನಿಮಾಗಳಿಗೆ ಆಲ್​ ದಿ ಬೆಸ್ಟ್​ ಹೇಳುತ್ತಿದ್ದಾರೆ ಅವರ ಅಭಿಮಾನಿಗಳು.

ಚಿತ್ರರಂಗದಲ್ಲಿ ಕಾರ್ತಿಕ್​ ಜಯರಾಮ್​ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ನೆಪೋಟಿಸಂ ಇದ್ದರೂ ಕೂಡ ಅವರು ತಮ್ಮತನವನ್ನು ಬಿಟ್ಟುಕೊಟ್ಟಿಲ್ಲ. ಆ ಕಾರಣದಿಂದ ಅವರು ಮಾಡಿರುವ ಸಿನಿಮಾಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವರು ತಮ್ಮದೇ ಆದಂತಹ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಿರುತೆರೆಯಲ್ಲಿ ಕಾರ್ತಿಕ್​ ಜಯರಾಮ್​ ಅವರು ಛಾಪು ಮೂಡಿಸಿದ್ದಾರೆ. ಅವರ ಪ್ರತಿಭೆ ಕಂಡು ಹಿಂದಿ ಟಿಲಿವಿಷನ್​ ಇಂಡಸ್ಟ್ರಿಯವರು ಮಣೆ ಹಾಕಿದರು. ‘ಸಿಯಾ ಕೆ ರಾಮ್​’ ಧಾರಾವಾಹಿಯಲ್ಲಿ ಅವರಿಗೆ ರಾವಣನ ಪಾತ್ರ ನೀಡಲಾಯಿತು.

‘ಸಿಯಾ ಕೆ ರಾಮ್​’ ಸೀರಿಯಲ್​ ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ಪ್ರಸಾರವಾಯಿತು. ಅದರಲ್ಲಿ ರಾವಣನಾಗಿ ಅಬ್ಬರಿಸಿದ ಕಾರ್ತಿಕ್​ ಜಯರಾಮ್ ಅವರಿಗೆ ಹಿಂದಿ ಪ್ರೇಕ್ಷಕರು ಭೇಷ್​ ಎಂದರು. ಉಕ್ಕಿನಂತಹ ಮೈಕಟ್ಟು ಮತ್ತು ಮನ ಸೆಳೆಯುವ ನಟನೆಯಿಂದಾಗಿ ರಾವಣನ ಪಾತ್ರಕ್ಕೆ ಜೆಕೆ ಜೀವ ತುಂಬಿದರು. ಲಾಕ್​ಡೌನ್​ ಸಂದರ್ಭದಲ್ಲಿ ‘ಸಿಯಾ ಕೆ ರಾಮ್​’ ಧಾರಾವಾಹಿ ಕನ್ನಡಕ್ಕೂ ಡಬ್​ ಆಗಿ ಪ್ರಸಾರವಾಯಿತು. ಆಗ ತಮ್ಮ ಪಾತ್ರಕ್ಕೆ ಸ್ವತಃ ಜೆಕೆ ಧ್ವನಿ ನೀಡಿದರು. ಆ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಅವರು ಇನ್ನಷ್ಟು ಹತ್ತಿರವಾದರು.

ಕಾರ್ತಿಕ್​ ಜಯರಾಮ್​ ನಟಿಸಿದ ಹಿಂದಿಯ ‘ಓ ಪುಷ್ಪ ಐ ಹೇಟ್​ ಟಿಯರ್ಸ್​’ ಸಿನಿಮಾ 2020ರಲ್ಲಿ ತೆರೆಕಂಡಿತು. ಆ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ಮಾಡಿದ್ದರು. ಕನ್ನಡದಲ್ಲೂ ನೆಪೋಟಿಸಂ ಪಿಡುಗು ಇದೆ ಎಂದು ಜೆಕೆ ಧ್ವನಿ ಎತ್ತಿದ್ದರು. ಪ್ರತಿಭೆ ಇದ್ದವರನ್ನೂ ತುಳಿಯುವ ಕೆಲಸ ಆಗುತ್ತಿದೆ ಎಂಬುದನ್ನು ಅವರು ಧೈರ್ಯವಾಗಿ ಹೇಳಿದ್ದರು. ಅದೇನೇ ಇದ್ದರೂ ಜೆಕೆ ಮಿಂಚುತ್ತಿದ್ದಾರೆ. ತಮ್ಮ ಪಾಲಿಗೆ ಬಂದ ಅವಕಾಶಗಳನ್ನು ಸ್ವೀಕರಿಸುತ್ತ, ಪಾತ್ರಕ್ಕೆ ನ್ಯಾಯ ಒದಗಿಸುತ್ತ ಅವರು ಮುಂದೆ ಸಾಗುತ್ತಿದ್ದಾರೆ.

ಫಿಟ್ನೆಸ್​ ವಿಚಾರದಲ್ಲಿ ಕಾರ್ತಿಕ್​ ಜಯರಾಮ್​ ರಾಜಿ ಆಗುವವರಲ್ಲ. ಲಾಕ್​ಡೌನ್​ ಸಂದರ್ಭದಲ್ಲಿ ಜಿಮ್​ ಕ್ಲೋಸ್​ ಆಗಿದ್ದಾಗಲೂ ಕೂಡ ಅವರು ಮನೆಯಲ್ಲಿ ಇರುವ ಪರಿಕರಗಳನ್ನೇ ಬಳಸಿಕೊಂಡು ವ್ಯಾಯಾಮ ಮಾಡಿದ್ದರು. ಆಗಾಗ ಅವರು ತಮ್ಮ ವರ್ಕೌಟ್​ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಅವುಗಳಿಗೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

Happy Birthday Harshika Poonacha: ಹರ್ಷಿಕಾ ಪೂಣಚ್ಚ ಬರ್ತ್​ಡೇ: 7 ಭಾಷೆಯ ಸಿನಿಮಾದಲ್ಲಿ ನಟಿಸಿದ ಕನ್ನಡತಿಗೆ ಹುಟ್ಟುಹಬ್ಬದ ಸಂಭ್ರಮ

Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ