Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ

Happy Birthday Ajith Kumar: ಬೇರೆ ನಟರಿಗಿಂತಲೂ ಅಜಿತ್​ ಕುಮಾರ್​ ಅವರು ಸಖತ್​ ಭಿನ್ನ. ಇಂದು (ಮೇ 1) ಅವರ ಜನ್ಮದಿನದ ಪ್ರಯುಕ್ತ ಎಲ್ಲರೂ ಶುಭ ಕೋರುತ್ತಿದ್ದಾರೆ.

Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ
ಅಜಿತ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: May 01, 2022 | 8:43 AM

ದಕ್ಷಿಣ ಭಾರತದಲ್ಲಿ ನಟ ಅಜಿತ್​ ಕುಮಾರ್​ ಅವರು ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಇಂದು (ಮೇ 1) ಅವರ ಜನ್ಮದಿನವನ್ನು (Ajith Kumar Birthday) ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರಿಗೆ ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಹಲವು ವರ್ಷಗಳ ವೃತ್ತಿ ಜೀವನದಲ್ಲಿ ಅಜಿತ್​ ಕುಮಾರ್​ (Ajith Kumar) ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಅಜಿತ್​ ಕುಮಾರ್​ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗೆಗಿನ ಕೆಲವು ಅಪರೂಪದ ಮಾಹಿತಿಗಳನ್ನು ಮೆಲುಕು ಹಾಕಲಾಗುತ್ತಿದೆ. ನಟನೆ ಮಾತ್ರವಲ್ಲದೇ ಹಲವು ಬೇರೆ ಬೇರೆ ವಿಚಾರಗಳಲ್ಲಿ ಅಜಿತ್​ ಕುಮಾರ್​ (Thala Ajith) ಅವರಿಗೆ ಆಸಕ್ತಿ ಇದೆ. ಅವುಗಳ ಕಡೆಗೂ ಅವರು ಗಮನ ನೀಡಿತ್ತಾರೆ. ತಮ್ಮ ಹವ್ಯಾಸಕ್ಕಾಗಿ ಅವರು ಸಮಯ ಮೀಸಲಿಡುತ್ತಾರೆ. ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನವನ್ನು ಆದಷ್ಟು ಮೀಡಿಯಾ ಕಣ್ಣಿನಿಂದ ದೂರ ಇಡಲು ಅಜಿತ್​ ಕುಮಾರ್​ ಬಯಸುತ್ತಾರೆ. ಹಲವು ವಿಚಾರಗಳಲ್ಲಿ ಅವರು ಬೇರೆ ನಟರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ.

  1. ಫಾರ್ಮುಲ 2 ರೇಸರ್​: ಹೌದು, ನಟ ಅಜಿತ್​ ಕುಮಾರ್​ ಅವರಿಗೆ ರೇಸ್​ ಬಗ್ಗೆ ಅಪಾರ ಉತ್ಸಾಹ. ಅವರು ಫಾರ್ಮುಲ 2 ರೇಸರ್​. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ರೇಸ್​ಗಳಲ್ಲಿ ಅವರು ಸ್ಪರ್ಧಿಸಿದ್ದಾರೆ. 2003ರಲ್ಲಿ ಅವರು ಮೊದಲ ಬಾರಿಗೆ ರೇಸ್​ ಅಂಗಳಕ್ಕೆ ಕಾಲಿಟ್ಟರು.
  2. ವಿಮಾನ ಹಾರಿಸಬಲ್ಲ ನಟ: ಅಜಿತ್​ ಕುಮಾರ್​ ಅವರಿಗೆ ವಿಮಾನ ಯಾನದ ಬಗ್ಗೆ ತೀವ್ರ ಆಸಕ್ತಿ ಇದೆ. ವಿಮಾನ ಹಾರಿಸುವುದು ಅವರ ಹವ್ಯಾಸಗಳಲ್ಲೊಂದು! ಇದಕ್ಕಾಗಿ ಅವರು ತರಬೇತಿ ಪಡೆದುಕೊಂಡಿದ್ದಾರೆ. ಅವರ ಬಳಿ ಪೈಲಟ್​ ಲೈಸನ್ಸ್​ ಇದೆ. ಈ ವಿಚಾರದಲ್ಲಿ ಅಜಿತ್​ ಕುಮಾರ್​​ ಬಗ್ಗೆ ಅವರ ಅಭಿಮಾನಿಗಳಿಗೆ ಸಖತ್​ ಹೆಮ್ಮೆ ಇದೆ.
  3. ಫೋಟೋಗ್ರಫಿ ಬಗ್ಗೆ ಆಸಕ್ತಿ: ಸಿನಿಮಾ ರೀತಿಯೇ ಫೋಟೋಗ್ರಫಿ ಬಗ್ಗೆ ಅಜಿತ್​ ಕುಮಾರ್​ ಅವರಿಗೆ ಪ್ಯಾಷನ್​ ಇದೆ. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಜೊತೆ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆ. ಶೂಟಿಂಗ್​ ಬಿಡುವಿನಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ಅವರದ್ದು.
  4. ಖಾಸಗಿ ಬದುಕಿಗೆ ಹೆಚ್ಚು ಆದ್ಯತೆ: ಅಜಿತ್ ಕುಮಾರ್​​ ಅವರು ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳ. ತಾವಾಯ್ತು ತಮ್ಮ ಕೆಲಸವಾಯ್ತು ಎಂಬಂತಹ ವ್ಯಕ್ತಿತ್ವ ಅವರದ್ದು. ಅನಗತ್ಯ ವಿಚಾರಗಳಲ್ಲಿ ಅವರು ತಲೆ ಹಾಕುವುದಿಲ್ಲ. ಶೂಟಿಂಗ್​ ಮುಗಿದ ತಕ್ಷಣ ಅವರು ತಮ್ಮ ಖಾಸಗಿ ಬದುಕಿನಲ್ಲಿ ತೊಡಗಿಕೊಳ್ಳುತ್ತಾರೆ.
  5. ರಾಜಕೀಯದಿಂದ ದೂರ: ಸಾಮಾನ್ಯವಾಗಿ ಸಿನಿಮಾ ಮತ್ತು ರಾಜಕೀಯದ ನಡುವೆ ಒಂದು ನಂಟು ಇರುತ್ತದೆ. ಚಿತ್ರರಂಗದ ಸಮಾರಂಭಗಳಿಗೆ ರಾಜಕಾರಣಿಗಳು ಬರುವುದು ಹಾಗೂ ರಾಜಕೀಯದ ಕೆಲಸಗಳಿಗೆ ಚಿತ್ರರಂಗದ ಕಲಾವಿದರು ಸಾಥ್​ ನೀಡುವುದು ಇದ್ದೇ ಇರುತ್ತದೆ. ಆದರೆ ಅಜಿತ್​ ಅವರು ರಾಜಕೀಯದಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಂಡಿದ್ದಾರೆ.

ಅಜಿತ್​ ಕುಮಾರ್​ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅಜಿತ್​ ನಟನೆಯ ‘ವಲಿಮೈ’ ಸಿನಿಮಾ ಫೆ. 24ರಂದು ತೆರೆಕಂಡಿತು. ಅಭಿಮಾನಿಗಳು ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ನೀಡಿದರು. ಆದರೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​

ಒಟಿಟಿಗೆ ಲಗ್ಗೆ ಇಡುತ್ತಿದೆ ಅಜಿತ್​ ಸಿನಿಮಾ; 10 ಸಾವಿರ ಚದರ ಅಡಿಯ ‘ವಲಿಮೈ’ ಪೋಸ್ಟರ್​ ಅನಾವರಣ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ