ಒಟಿಟಿಗೆ ಲಗ್ಗೆ ಇಡುತ್ತಿದೆ ಅಜಿತ್ ಸಿನಿಮಾ; 10 ಸಾವಿರ ಚದರ ಅಡಿಯ ‘ವಲಿಮೈ’ ಪೋಸ್ಟರ್ ಅನಾವರಣ
ಸಿನಿಮಾ ಜೀ5ನಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ವಲಿಮೈ’ ಪೋಸ್ಟರ್ಅನ್ನು ಜೀ5 ಬಿಡುಗಡೆ ಮಾಡಿದೆ.
ಅಜಿತ್ (Ajith) ನಟನೆಯ ‘ವಲಿಮೈ’ ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಜಿತ್ ಬೈಕ್ ಸ್ಟಂಟ್ಸ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈ ಚಿತ್ರವನ್ನು ಅನೇಕರಿಗೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಈ ಸಿನಿಮಾ ಒಟಿಟಿಗೆ ತೆರೆಗೆ ಬರೋಕೆ ದಿನಾಂಕ ನಿಗದಿ ಆಗಿದೆ. ‘ವಲಿಮೈ’ (Valimai) ತೆರೆಕಂಡು ಒಂದು ತಿಂಗಳಿಗೆ ಅಂದರೆ, ಮಾರ್ಚ್ 25ರಂದು ಚಿತ್ರ ಒಟಿಟಿಗೆ ಲಗ್ಗೆ ಇಡುತ್ತಿದೆ. ಥಿಯೇಟರ್ನಲ್ಲಿ ಅಜಿತ್ ಆ್ಯಕ್ಷನ್ ಮಿಸ್ ಮಾಡಿಕೊಂಡವರು ಈ ಸಿನಿಮಾವನ್ನು ಜೀ5 ಆ್ಯಪ್ನಲ್ಲಿ (Zee5 App) ಕಣ್ತುಂಬಿಕೊಳ್ಳಬಹುದು. ‘ವಲಿಮೈ’ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಡ್ರಗ್ಸ್ಗಾಗಿ ಯುವಕರು ಯಾವೆಲ್ಲಾ ಕೃತ್ಯಕ್ಕೆ ಇಳಿಯುತ್ತಾರೆ, ಅದನ್ನು ಹೀರೋ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎಂಬ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ವಿಶೇಷ ಎಂದರೆ, ಈ ಚಿತ್ರಕ್ಕಾಗಿ ಅಜಿತ್ ಡೂಪ್ ಬಳಸದೆ, ತಾವೇ ಬೈಕ್ ಸ್ಟಂಟ್ಸ್ ಮಾಡಿದ್ದಾರೆ. ಈ ದೃಶ್ಯಗಳು ಮೈನವಿರೇಳಿಸುವಂತಿದೆ. ಚಿತ್ರವನ್ನು ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ವೀಕ್ಷಿಸಬಹುದು.
ಸಿನಿಮಾ ಜೀ5ನಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ವಲಿಮೈ’ ಪೋಸ್ಟರ್ಅನ್ನು ಜೀ5 ಬಿಡುಗಡೆ ಮಾಡಿದೆ. ಈ ಮೂಲಕ ಸಿನಿಮಾಗೆ ಭರ್ಜರಿ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಸಿನಿಮಾ ಇತಿಹಾಸದಲ್ಲಿ ಇಲ್ಲಿಯವರೆಗೆ ಇಷ್ಟು ದೊಡ್ಡ ಪೋಸ್ಟರ್ಅನ್ನು ಯಾರೂ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.
The wait is over! It’s here ? Action, Style, Swag all gets updated on #ZEE5 on March 25th. #ValimaiOnZEE5 Don’t miss it!! ?? pic.twitter.com/5bFHCz1jST
— ZEE5 (@ZEE5India) March 20, 2022
Get ready to witness, in a few hours from now, one of the biggest announcements ever made ??#ZEE5 The BIGGEST REVEAL you are waiting for. pic.twitter.com/Yo98nG311b
— ZEE5 (@ZEE5India) March 20, 2022
ಕನ್ನಡದಲ್ಲೂ ಬರಲಿದೆ ಸಿನಿಮಾ
ಅಜಿತ್ ನಟನೆಯ ‘ವಲಿಮೈ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈಗ ಜೀ5 ನಲ್ಲಿ ಐದೂ ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ, ನೀವು ಕನ್ನಡದಲ್ಲೇ ಸಿನಿಮಾ ವೀಕ್ಷಿಸಬಹುದು.
‘ವಲಿಮೈ’ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಎಚ್. ವಿನೋದ್ ನಿರ್ದೇಶನ ಇದೆ. ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಸುಮಾರು 150 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಜಿತ್ ಜೊತೆಗೆ ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Box Office: ಗಳಿಕೆಯಲ್ಲಿ ಆಲಿಯಾ ಚಿತ್ರದ ಹೊಸ ಮೈಲಿಗಲ್ಲು; ‘ಏಕ್ ಲವ್ ಯಾ’, ‘ವಲಿಮೈ’, ‘ಭೀಮ್ಲಾ ನಾಯಕ್’ ಕಲೆಕ್ಷನ್ ಎಷ್ಟು?
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ‘ವಲಿಮೈ’; ಅಜಿತ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
Published On - 7:53 pm, Mon, 21 March 22