AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್​ ಕುಮಾರ್​ ಅವರನ್ನು ಇನ್ಮುಂದೆ ಈ ರೀತಿ ಕರೆಯುವಂತಿಲ್ಲ; ನಟನ ಕಟ್ಟಾಜ್ಞೆ

ತಮಿಳು ಚಿತ್ರರಂಗದಲ್ಲಿ ಅಜಿತ್​ ದೊಡ್ಡ ಹೆಸರು ಹೊಂದಿದ್ದಾರೆ. ಅವರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತದೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ತಾಲಾ’ ಅಜಿತ್​ ಎಂದು ಕರೆಯುತ್ತಾರೆ. ಆದರೆ, ಇನ್ನುಮುಂದೆ ಈ ರೀತಿ ಕರೆಯುವಂತಿಲ್ಲ!

ಅಜಿತ್​ ಕುಮಾರ್​ ಅವರನ್ನು ಇನ್ಮುಂದೆ ಈ ರೀತಿ ಕರೆಯುವಂತಿಲ್ಲ; ನಟನ ಕಟ್ಟಾಜ್ಞೆ
ಅಜಿತ್​ ಕುಮಾರ್​
TV9 Web
| Edited By: |

Updated on: Dec 01, 2021 | 9:00 PM

Share

ಸ್ಟಾರ್​ ನಟರನ್ನು ಅಭಿಮಾನಿಗಳು ಪ್ರೀತಿಯಿಂದ ಬೇರೆಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಅವರಿಗೆ ಹಿಟ್​ ಕೊಟ್ಟ ಸಿನಿಮಾಗಳ ಹೆಸರಿನಿಂದಲೇ ನಟರನ್ನು ಕರೆಯುವುದುಂಟು. ಕೆಲವರನ್ನು ವಿಶೇಷ ಬಿರುದಿನಿಂದ ಕರೆಯಲಾಗುತ್ತದೆ. ‘ಕಿಚ್ಚ ಸುದೀಪ್​’, ‘ದುನಿಯಾ’ ವಿಜಯ್​, ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಕೆಲ ಸ್ಟಾರ್​ಗಳಿಗೆ ಇದು ಇಷ್ಟವಾಗುವುದಿಲ್ಲ. ಈ ವಿಚಾರವನ್ನು ಅವರು ನೇರವಾಗಿಯೇ ಹೇಳಿದ ಉದಾಹರಣೆಯೂ ಇದೆ. ಈಗ ಕಾಲಿವುಡ್​ ಸ್ಟಾರ್​ ನಟ ಅಜಿತ್​ ಕೂಡ ಹೀಗೊಂದು ಪ್ರಕಟಣೆ ಹೊರಡಿಸಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಅಜಿತ್​ ದೊಡ್ಡ ಹೆಸರು ಹೊಂದಿದ್ದಾರೆ. ಅವರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತದೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ತಾಲಾ’ ಅಜಿತ್​ ಎಂದು ಕರೆಯುತ್ತಾರೆ. ಆದರೆ, ಇನ್ನುಮುಂದೆ ಈ ರೀತಿ ಕರೆಯುವಂತಿಲ್ಲ! ಹೀಗೊಂದು ಪ್ರಕಟಣೆಯನ್ನು ಅವರೇ ಹೊರಡಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ, ಇನ್ನುಮುಂದೆ ಅವರ ಹೆಸರ ಹಿಂದೆ ಯಾವ ಬಿರುದನ್ನೂ ಸೇರಿಸುವಂತಿಲ್ಲ.

‘ಮಾಧ್ಯಮ, ಸಾರ್ವಜನಿಕರು ಹಾಗೂ ನನ್ನ ಅಭಿಮಾನಿಗಳಲ್ಲಿ ಒಂದು ವಿನಂತಿ. ನನ್ನನ್ನು ಅಜಿತ್​, ಅಜಿತ್​ ಕುಮಾರ್​ ಅಥವಾ ಎಕೆ ಎಂದು ಮಾತ್ರ ಕರೆಯಬೇಕು. ನನ್ನನ್ನು ತಾಲಾ ಎಂದು ಯಾರೂ ಕರೆಯಬಾರದು. ನನ್ನ ಹೆಸರ ಹಿಂದೆ ಈ ಶಬ್ದವನ್ನು ಬಳಸುವಂತಿಲ್ಲ. ಎಲ್ಲರಿಗೂ ಆರೋಗ್ಯ, ಸಂತೋಷ, ಯಶಸ್ಸು, ಮನಃಶಾಂತಿ ಸಿಗಲಿ’ ಎಂದು ಅಜಿತ್ ಬರೆದುಕೊಂಡಿದ್ದಾರೆ.  ಸಾಮಾನ್ಯವಾಗಿ ಈ ರೀತಿಯ ಮನವಿಗಳನ್ನು ಮಾಡಿಕೊಳ್ಳುವಾಗ ನಟರು ಅದಕ್ಕೆ ಕಾರಣವನ್ನು ತಿಳಿಸುತ್ತಾರೆ. ಆದರೆ, ಅಜಿತ್​ ಈ ರೀತಿಯ ಯಾವುದೇ ಕಾರಣವನ್ನು ವಿವರಿಸಿಲ್ಲ.

2019ರ ಆಗಸ್ಟ್​ನಲ್ಲಿ ಬಿಡುಗಡೆಯಾದ ‘ನೇರ್ಕೊಂಡ ಪಾರ್ವೈ’ ಬಳಿಕ ಅಜಿತ್​ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅವರ ನಟನೆಯ ‘ವಲಿಮೈ’ ಚಿತ್ರ ಜನವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ‘ನೇರ್ಕೊಂಡ ಪಾರ್ವೈ’ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದ ಎಚ್​. ವಿನೋದ್​ ಅವರೇ ‘ವಲಿಮೈ’ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಬೋನಿ ಕಪೂರ್​ ಬಂಡವಾಳ ಹೂಡಿದ್ದಾರೆ. ಹಾಗಾಗಿ ಈ ಕಾಂಬಿನೇಷನ್​ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ.

ಇದನ್ನೂ ಓದಿ: Valimai: ಬೈಕ್​ ಸ್ಟಂಟ್​ ಮಾಡುತ್ತ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ಅಜಿತ್​; ಹೇಗಿದೆ ಗೊತ್ತಾ ‘ವಲಿಮೈ’ ಝಲಕ್​​?

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ