Kavya Gowda: ಮದುವೆ ಪೂರ್ವ ಶಾಸ್ತ್ರಗಳಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ

TV9 Digital Desk

| Edited By: Rajesh Duggumane

Updated on:Dec 01, 2021 | 7:00 PM

ಮದುವೆ ತಯಾರಿ ಫೋಟೋಗಳನ್ನು ಕಾವ್ಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

Dec 01, 2021 | 7:00 PM
ಕೊರೊನಾ ಎರಡನೇ ಅಲೆ ಕಡಿಮೆ ಆದ ಬೆನ್ನಲ್ಲೇ ದೊಡ್ಡ ಬಜೆಟ್​ ಸಿನಿಮಾಗಳು ತೆರೆಗೆ ಬರುತ್ತಿವೆ. ಇದರ ಜತೆಜತೆಗೆ ಸೆಲೆಬ್ರಿಟಿಗಳು ಹಸೆಮಣೆ ಏರುತ್ತಿದ್ದಾರೆ. ಕೊವಿಡ್​ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿವಾಹ ಕಾರ್ಯಕ್ರಮಗಳು ಈಗ ಅದ್ದೂರಿಯಾಗಿ ನಡೆಯುತ್ತಿವೆ.

1 / 7
‘ರಾಧಾ ರಮಣ’ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಕಾವ್ಯಾ ಗೌಡ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಿದೆ. ಡಿಸೆಂಬರ್​ 2ರಂದು ಕಾವ್ಯಾ ಅವರು ಸೋಮಶೇಖರ್​ ಜತೆ ವಿವಾಹವಾಗುತ್ತಿದ್ದಾರೆ.

2 / 7
ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್​ ಅವರನ್ನು ಕಾವ್ಯಾ ಗೌಡ ಮದುವೆ ಆಗುತ್ತಿದ್ದಾರೆ. ಮೇ 13ರಂದು ಈ ಜೋಡಿ ಬೆಂಗಳೂರಿನಲ್ಲಿ ಹಸೆಮಣೆ ಏರಬೇಕಿತ್ತು.

3 / 7
ಬೆಂಗಳೂರಿನಲ್ಲಿ ಇಬ್ಬರೂ ಸಿಂಪಲ್​ ಆಗಿ ಮದುವೆ ಆಗಲು ನಿರ್ಧರಿಸಿದ್ದರು. ಆ ನಂತರ ಮದುವೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಮೆಹಂದಿ ಹಾಗೂ​ ಇತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದ್ದು, ಡಿಸೆಂಬರ್ 2ರಂದು ಮದುವೆ ನಡೆಯುತ್ತಿದೆ.

4 / 7
ಮದುವೆ ತಯಾರಿ ಫೋಟೋಗಳನ್ನು ಕಾವ್ಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

ಮದುವೆ ತಯಾರಿ ಫೋಟೋಗಳನ್ನು ಕಾವ್ಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

5 / 7
ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ಗುರುವಾರ ಈ ದಂಪತಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

6 / 7
2015ರಲ್ಲಿ ತೆರೆಕಂಡ ‘ಶುಭ ವಿವಾಹ’ ಧಾರಾವಾಹಿ ಮೂಲಕ ಕಾವ್ಯಾ ಗೌಡ ತಮ್ಮ ಕಿರುತೆರೆ ಪಯಣ ಆರಂಭಿಸಿದರು. ನಂತರ ರಾಧಾ ರಮಣದಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ಗಾಂಧಾರಿ ಧಾರಾವಾಹಿಯಲ್ಲೂ ಕಾವ್ಯಾ ನಟಿಸಿದ್ದರು. 2018ರಲ್ಲಿ ತೆರೆಕಂಡ ಬಕಾಸುರ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು.

7 / 7

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada