Kavya Gowda: ಮದುವೆ ಪೂರ್ವ ಶಾಸ್ತ್ರಗಳಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ
ಮದುವೆ ತಯಾರಿ ಫೋಟೋಗಳನ್ನು ಕಾವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ.
Updated on:Dec 01, 2021 | 7:00 PM

ಕೊರೊನಾ ಎರಡನೇ ಅಲೆ ಕಡಿಮೆ ಆದ ಬೆನ್ನಲ್ಲೇ ದೊಡ್ಡ ಬಜೆಟ್ ಸಿನಿಮಾಗಳು ತೆರೆಗೆ ಬರುತ್ತಿವೆ. ಇದರ ಜತೆಜತೆಗೆ ಸೆಲೆಬ್ರಿಟಿಗಳು ಹಸೆಮಣೆ ಏರುತ್ತಿದ್ದಾರೆ. ಕೊವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿವಾಹ ಕಾರ್ಯಕ್ರಮಗಳು ಈಗ ಅದ್ದೂರಿಯಾಗಿ ನಡೆಯುತ್ತಿವೆ.

‘ರಾಧಾ ರಮಣ’ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಕಾವ್ಯಾ ಗೌಡ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಿದೆ. ಡಿಸೆಂಬರ್ 2ರಂದು ಕಾವ್ಯಾ ಅವರು ಸೋಮಶೇಖರ್ ಜತೆ ವಿವಾಹವಾಗುತ್ತಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್ ಅವರನ್ನು ಕಾವ್ಯಾ ಗೌಡ ಮದುವೆ ಆಗುತ್ತಿದ್ದಾರೆ. ಮೇ 13ರಂದು ಈ ಜೋಡಿ ಬೆಂಗಳೂರಿನಲ್ಲಿ ಹಸೆಮಣೆ ಏರಬೇಕಿತ್ತು.

ಬೆಂಗಳೂರಿನಲ್ಲಿ ಇಬ್ಬರೂ ಸಿಂಪಲ್ ಆಗಿ ಮದುವೆ ಆಗಲು ನಿರ್ಧರಿಸಿದ್ದರು. ಆ ನಂತರ ಮದುವೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಮೆಹಂದಿ ಹಾಗೂ ಇತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದ್ದು, ಡಿಸೆಂಬರ್ 2ರಂದು ಮದುವೆ ನಡೆಯುತ್ತಿದೆ.

ಮದುವೆ ತಯಾರಿ ಫೋಟೋಗಳನ್ನು ಕಾವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ.

ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ಗುರುವಾರ ಈ ದಂಪತಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

2015ರಲ್ಲಿ ತೆರೆಕಂಡ ‘ಶುಭ ವಿವಾಹ’ ಧಾರಾವಾಹಿ ಮೂಲಕ ಕಾವ್ಯಾ ಗೌಡ ತಮ್ಮ ಕಿರುತೆರೆ ಪಯಣ ಆರಂಭಿಸಿದರು. ನಂತರ ರಾಧಾ ರಮಣದಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ಗಾಂಧಾರಿ ಧಾರಾವಾಹಿಯಲ್ಲೂ ಕಾವ್ಯಾ ನಟಿಸಿದ್ದರು. 2018ರಲ್ಲಿ ತೆರೆಕಂಡ ಬಕಾಸುರ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು.
Published On - 6:41 pm, Wed, 1 December 21




