Updated on: Dec 01, 2021 | 10:45 PM
ಐಪಿಎಲ್ 2022ರಲ್ಲಿ 8 ಫ್ರಾಂಚೈಸಿ ತಂಡಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ. ಆದರೆ, ಕೆಲ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನೇ ಕೈಬಿಟ್ಟು ಅಚ್ಚರಿ ಮೂಡಿಸಿದೆ. ಇದೀಗ ಇಂತಹ ಆಟಗಾರರನ್ನು ವಿಶೇಷ ಆಯ್ಕೆಯ ಮೂಲಕ ತನ್ನ ಸೆಳೆಯಲು ಲಕ್ನೋ ಮತ್ತು ಅಹಮದಾಬಾದ್ ಮುಂದಾಗಿದೆ.
ಆದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಅಬುಧಾಭಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಟಿ10 ಲೀಗ್ನ 27ನೇ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಹಾಗೂ ಡೆಕ್ಕನ್ ಗ್ಲಾಡಿಯೇಟರ್ಸ್ ಮುಖಾಮುಖಿಯಾಗಿತ್ತು.
ಮೊದಲು ಬ್ಯಾಟ್ ಮಾಡಿದ ಗ್ಲಾಡಿಯೇಟರ್ಸ್ 10 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ಟೈಗರ್ಸ್ ವನಿಂದು ಹಸರಂಗ ನೀಡಿದ ಶಾಕ್ನಿಂದ ಚೇತರಿಸಿಕೊಳ್ಳಲೇ ಆಗಲಿಲ್ಲ. ಏಕೆಂದರೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಹಸರಂಗ ಬಾಂಗ್ಲಾ ಟೈಗರ್ಸ್ ತಂಡವನ್ನು ಕೇವಲ 78 ರನ್ಗಳಿಗೆ ಆಲೌಟ್ ಮಾಡಿದ್ದರು. ಅದರಲ್ಲೂ ಎರಡು ಓವರ್ ಎಸೆದ ಹಸರಂಗ 5 ವಿಕೆಟ್ ಉರುಳಿಸಿದ್ದರು.
ಮೊದಲ ಓವರ್ನ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದ ಹಸರಂಗ ಎರಡನೇ ಎಸೆತದಲ್ಲಿ ಸಿಕ್ಸ್ ಚಚ್ಚಿಕೊಂಡಿದ್ದರು. ಆದರೆ ಮರು ಎಸೆತದಲ್ಲೇ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಬೌಲ್ಡ್ ಮಾಡಿ ಮತ್ತೊಂದು ಯಶಸ್ಸು ಪಡೆದರು. ಕೊನೆಯ ಎರಡು ಎಸೆತಗಳಲ್ಲಿ 2 ರನ್ ನೀಡಿದರು.
ಇನ್ನು 2ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದರು. ಬಳಿಕ ಮೂರು ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ. 6ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಈ ಮೂಲಕ ಕೇವಲ 8 ರನ್ ನೀಡಿ 5 ವಿಕೆಟ್ ಉರುಳಿಸಿದರು.
ಅಂದರೆ ಹಸರಂಗ ಎರಡು ಎಸೆತಗಳಲ್ಲಿ 8 ರನ್ ನೀಡಿದ ಬಳಿಕ ಯಾವುದೇ ರನ್ ನೀಡದೇ 5 ವಿಕೆಟ್ ಪಡೆದಿರುವುದು ವಿಶೇಷ. ಸದ್ಯ ಟಿ10 ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿರುವ ಹಸರಂಗ 10 ಪಂದ್ಯಗಳಿಂದ 20 ವಿಕೆಟ್ ಪಡೆದಿದ್ದಾರೆ.