IPL 2022: ಮೆಗಾ ಹರಾಜಿಗಾಗಿ ಯಾವ ತಂಡದ ಬಳಿ ಎಷ್ಟು ಮೊತ್ತವಿದೆ?
IPL 2022 Auction Purse Balance: ಇಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಒಟ್ಟು ಹರಾಜು ಮೊತ್ತದಿಂದ 42 ಕೋಟಿಗೂ ಅಧಿಕ ಮೊತ್ತ ಕಡಿತ ಮಾಡಲಾಗುತ್ತದೆ. ಅಂದರೆ ಉಳಿಸಿಕೊಂಡ ಆಟಗಾರರಿಗೆ ನೀಡಲಾದ ಮೊತ್ತವನ್ನು ಒಟ್ಟು ಹರಾಜು ಮೊತ್ತ 90 ಕೋಟಿಯಿಂದ ಮೈನಸ್ ಮಾಡಲಾಗುತ್ತದೆ.
Updated on: Nov 30, 2021 | 11:19 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ ನಾಲ್ವರನ್ನು ಉಳಿಸಿಕೊಂಡಿದೆ.

ಇಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಒಟ್ಟು ಹರಾಜು ಮೊತ್ತದಿಂದ 42 ಕೋಟಿಗೂ ಅಧಿಕ ಮೊತ್ತ ಕಡಿತ ಮಾಡಲಾಗುತ್ತದೆ. ಅಂದರೆ ಉಳಿಸಿಕೊಂಡ ಆಟಗಾರರಿಗೆ ನೀಡಲಾದ ಮೊತ್ತವನ್ನು ಒಟ್ಟು ಹರಾಜು ಮೊತ್ತ 90 ಕೋಟಿಯಿಂದ ಕಡಿತ ಮಾಡಲಾಗುತ್ತದೆ. ಅದರಂತೆ ಇದೀಗ ಮೆಗಾ ಹರಾಜಿಗಾಗಿ ಯಾವ ತಂಡದ ಬಳಿ ಎಷ್ಟು ಮೊತ್ತವಿದೆ ನೋಡೋಣ.

ಮುಂಬೈ ಇಂಡಿಯನ್ಸ್: ನಾಲ್ವರು ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದ ಬಳಿ 48 ಕೋಟಿ ಉಳಿದಿದೆ.

ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ಕೂಡ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಂತೆ 48 ಕೋಟಿ ರೂ. ಉಳಿದಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: ನಾಲ್ವರು ಆಟಗಾರರನ್ನು ಉಳಿಸಿಕೊಂಡಿರುವ ಕೆಕೆಆರ್ ಬಳಿ ಕೂಡ 48 ಕೋಟಿ ರೂ. ಉಳಿದಿದೆ.

ಡೆಲ್ಲಿ ಕ್ಯಾಪಿಟಲ್ಸ್: ನಾಲ್ವರು ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 47.5 ಕೋಟಿ ಹರಾಜು ಮೊತ್ತ ಬಾಕಿಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಮೂರು ಆಟಗಾರರನ್ನು ಉಳಿಸಿಕೊಂಡಿರುವ ಆರ್ಸಿಬಿ ಬಳಿ 57 ಕೋಟಿ ಉಳಿದಿದೆ.

ಸನ್ರೈಸರ್ಸ್ ಹೈದರಾಬಾದ್: ಇಬ್ಬರು ಅನ್ಕ್ಯಾಪ್ಡ್ ಆಟಗಾರರು ಸೇರಿ ಮೂರು ಆಟಗಾರರನ್ನು ಉಳಿಸಿಕೊಂಡಿರುವ ಎಸ್ಆರ್ಹೆಚ್ ಬಳಿ 68 ಕೋಟಿ ಉಳಿದಿದೆ.

ರಾಜಸ್ಥಾನ್ ರಾಯಲ್ಸ್: ಮೂರು ಆಟಗಾರರನ್ನು ಉಳಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಬಳಿ 62 ಕೋಟಿ ಹರಾಜು ಮೊತ್ತ ಬಾಕಿಯಿದೆ.

ಪಂಜಾಬ್ ಕಿಂಗ್ಸ್: ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ಬಳಿ ಒಟ್ಟು 72 ಕೋಟಿ ಹರಾಜು ಮೊತ್ತವಿದೆ.



















