ಎರಡು ವರ್ಷಗಳ ನಂತರ ಶಾಲೆಗೆ ಬಂದ ಮಕ್ಕಳು ಮತ್ತವರ ಪೋಷಕರನ್ನು ಮೈಸೂರಿನ ಶಾಲೆಯೊಂದು ವಿಶಿಷ್ಟವಾಗಿ ಸ್ವಾಗತಿಸಿತು!

ಎರಡು ವರ್ಷಗಳ ನಂತರ ಶಾಲೆಗೆ ಬಂದ ಮಕ್ಕಳು ಮತ್ತವರ ಪೋಷಕರನ್ನು ಮೈಸೂರಿನ ಶಾಲೆಯೊಂದು ವಿಶಿಷ್ಟವಾಗಿ ಸ್ವಾಗತಿಸಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 16, 2022 | 9:31 PM

ಮೈಸೂರಿನ ಸರಸ್ವತೀಪುರಂನಲ್ಲಿರುವ ವಿಜಯ ವಿಟ್ಠಲ ವಿದ್ಯಾವರ್ಧಕ ಶಾಲೆ ಆಡಳಿತ ಮಂಡಳಿಯು ಶಾಲಾ ಅವರಣವನ್ನೂ ತಳಿರು ತೋರಣಗಳೊಂದಿಗೆ ಸಿಂಗರಿಸಿ ಹಬ್ಬದ ವಾತಾವರಣ ಸೃಷ್ಟಿಮಾಡಿತ್ತು.

Mysuru:  ಕೋವಿಡ್ ಮಹಾಮಾರಿಯ (pandemic) ಹಿನ್ನೆಲೆಯಲ್ಲಿ ಹಲವು ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ಶಾಲೆಗಳು ರಾಜ್ಯಾದ್ಯಂತ ಮೇ 16 ಅಂದರೆ ಸೋಮವಾರದಿಂದ ಆರಂಭಗೊಂಡವು. ಹಾಗೆ ನೋಡಿದರೆ ಮಕ್ಕಳಿಗೆ ಶಾಲೆ ಮರೆತೇ ಹೋಗಿತ್ತು. ಪರಿಸ್ಥಿತಿ ಹೀಗಿರುವಾಗ ಶಾಲೆ ಹೋಗಲು ಹಟ ಮಾಡದಿರುತ್ತಾರೆಯೇ? ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಮೈಸೂರಿನ ಸರಸ್ವತೀಪುರಂನಲ್ಲಿರುವ ವಿಜಯ ವಿಟ್ಠಲ ವಿದ್ಯಾವರ್ಧಕ ಶಾಲೆ (Vijaya Vitthala Vidyavardhaka School) ಆಡಳಿತ ಮಂಡಳಿಯು ಶಾಲಾ ಅವರಣವನ್ನೂ ತಳಿರು ತೋರಣಗಳೊಂದಿಗೆ ಸಿಂಗರಿಸಿ ಹಬ್ಬದ ವಾತಾವರಣ (festive environment) ಸೃಷ್ಟಿಮಾಡಿತ್ತು. ಕೆಲ ಮಕ್ಕಳಿಗೆ ವಿಘ್ನ ನಿವಾರಕ ವಿಘ್ನೇಶ್ವರ ಹಾಗೆ ವೇಷಭೂಷಣ ತೊಡಿಸಿ ಮಕ್ಕಳು ಮತ್ತು ಪೋಷಕರನ್ನು ಸ್ವಾಗತಿಸಲು ಶಾಲಾ ಸಿಬ್ಬಂದಿಯೊಂದಿಗೆ ನಿಲ್ಲಿಸಲಾಗಿತ್ತು. ಶಾಲೆಗೆ ಆಗಮಿಸಿದ ಮಕ್ಕಳ ಟೆಂಪರೇಚರ್ ಪರೀಕ್ಷಿಸಿ ಅವರ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್ ಅವರು ಶಾಲೆಯ ಪ್ರಿನ್ಸಿಪಾಲ್ ಮತ್ತು ಪೋಷಕರನ್ನು ಮಾತಾಡಿಸಿದ್ದಾರೆ.

ಶಾಲೆಯಲ್ಲಿನ ಸಿದ್ಧತೆಗಳ ಬಗ್ಗೆ ಪ್ರಿನ್ಸಿಪಾಲ್ ಮಂಗಳಾ ಅವರು ಬಹಳ ಉತ್ಸಾಹದಿಂದ ಮಾತಾಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ. ಅವರ ಸುರಕ್ಷತೆ ಮತ್ತು ಕೋವಿಡ್ ಸೋಂಕು ಶಾಲಾ ಅವರಣವನ್ನು ಪ್ರವೇಶಿಸದ ಹಾಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪ್ರತಿಯೊಂದು ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಹೇಳಿದರು.

ಒಬ್ಬ ಮಹಿಳಾ ಪೋಷಕರು ಮಾತಾಡಿ, ಶಾಲಾ ಆಡಳಿತ ಮಂಡಳಿ ತೆಗೆದುಕೊಂಡಿರುವ ಕ್ರಮಗಳನ್ನು ನೋಡಿ ಮನದಲ್ಲಿದ್ದ ಆತಂಕವೆಲ್ಲ ದೂರವಾಗಿದೆ. ನಮಗೆ ಸಂತೋಷವಾಗಿರುವ ಹಾಗೆ ಮಕ್ಕಳಿಗೂ ಅಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ:    ಮತ್ತೆ ಆಪರೇಷನ್ ಕಮಲಕ್ಕೆ ಸಾಕ್ಷಿಯಾಗುತ್ತಾ ಹಳೇ ಮೈಸೂರು? ಆಪರೇಷನ್​ ಕಮಲದ ಸುಳಿವು ನೀಡಿದ್ದ ಸಚಿವ ಸೋಮಶೇಖರ್