‘ಬೇರೆ ಭಾಷೆಯಲ್ಲಿ ನಟಿಸೋ ಆಸೆ ಇಲ್ಲ, ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ದೇಶಾದ್ಯಂತ ರೀಚ್​ ಆಗತ್ತೆ’: ರಕ್ಷಿತ್​ ಶೆಟ್ಟಿ

‘ಬೇರೆ ಭಾಷೆಯಲ್ಲಿ ನಟಿಸೋ ಆಸೆ ಇಲ್ಲ, ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ದೇಶಾದ್ಯಂತ ರೀಚ್​ ಆಗತ್ತೆ’: ರಕ್ಷಿತ್​ ಶೆಟ್ಟಿ

TV9 Web
| Updated By: ಮದನ್​ ಕುಮಾರ್​

Updated on: May 17, 2022 | 7:30 AM

777 Charlie | Rakshit Shetty: ನಟ ರಕ್ಷಿತ್​ ಶೆಟ್ಟಿ ಅವರು ಹೀರೋ ಆಗಿ ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈಗ ‘777 ಚಾರ್ಲಿ’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಕರುನಾಡಿನ ಜನರ ಪ್ರೋತ್ಸಾಹದ ಬಗ್ಗೆ ಅವರು ಮಾತನಾಡಿದ್ದಾರೆ.

ಕನ್ನಡದ ನಟರು ಬೇರೆ ಭಾಷೆಯ ಚಿತ್ರರಂಗಕ್ಕೆ ಹೋಗಿ ನಟಿಸುವ ಟ್ರೆಂಡ್​ ಮೊದಲಿನಿಂದಲೂ ಇದೆ. ಆದರೆ ಎಲ್ಲ ಕಲಾವಿದರೂ ಈ ಟ್ರೆಂಡ್​ ಪಾಲಿಸುವುದಿಲ್ಲ. ಈ ವಿಚಾರದಲ್ಲಿ ರಕ್ಷಿತ್​ ಶೆಟ್ಟಿ (Rakshit Shetty) ಅವರು ತಮ್ಮದೇ ಆದ ನಿಯಮ ಅನುಸರಿಸುತ್ತಾರೆ. ಏನೇ ಮಾಡಿದರೂ ಕನ್ನಡದಲ್ಲಿಯೇ ಮಾಡಬೇಕು ಎಂಬ ಉದ್ದೇಶ ಅವರದ್ದು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಟ ಎಂಬುದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ಫಿಲ್ಮ್​ ಮೇಕರ್​. ಬೇರೆ ಭಾಷೆಯಲ್ಲಿ ಹೋಗಿ ನಟಿಸಬೇಕು ಎಂಬ ಆಸೆ ನನಗೆ ಇಲ್ಲ. ಕನ್ನಡದಲ್ಲಿ (Sandalwood) ಒಳ್ಳೆಯ ಸಿನಿಮಾ ಮಾಡಿದರೆ ಅದು ಭಾರತದಾದ್ಯಂತ ರೀಚ್​ ಆಗುತ್ತದೆ. ನಾನು ಚಿತ್ರರಂಗಕ್ಕೆ ಬಂದು 10 ವರ್ಷ ಆಯ್ತು. ನಾನು ರೆಗ್ಯುಲರ್​ ಸಿನಿಮಾ ಮಾಡುತ್ತ ಬಂದಿಲ್ಲ. ಆದರೂ ಕೂಡ ಕರ್ನಾಟಕದ ಜನತೆ ನನಗೆ ಕೊಟ್ಟಿರುವ ಪ್ರೋತ್ಸಾಹ ದೊಡ್ಡದು’ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ. ಅವರು ನಟಿಸಿರುವ ‘777 ಚಾರ್ಲಿ’ (777 Charlie Movie) ಸಿನಿಮಾ ಜೂನ್​ 10ರಂದು ರಿಲೀಸ್​ ಆಗುತ್ತಿದೆ. ಟ್ರೇಲರ್​ ಮೂಲಕ ಈ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.