ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ದ್ರಾಕ್ಷಿ ಚಪ್ಪರ: ಲಕ್ಷಾಂತರ ರೂ. ಹಾನಿ
ನಗರದಲ್ಲಿ ಮಳೆ ಅವಾಂತರ ಮುಂದುವರೆದಿದೆ. ನಿರಂತರ ಮಳೆ ಹಿನ್ನೆಲೆ ಮೋರಿಯ ಸೇತುವೆ ಕುಸಿದು ಬಿದ್ದಿದೆ. ನಗರದ ಬೋಗಾದಿಯಲ್ಲಿ ಘಟನೆ ನಡೆದಿದೆ. ಮಳೆಯಿಂದ ಮೋರಿಗಳು ತುಂಬಿ ಹರಿಯುತ್ತಿವೆ. ಮನೆ ಆವರಣಕ್ಕೂ ಮಳೆ ನೀರು ನುಗ್ಗಿದೆ.
ಚಿಕ್ಕಬಳ್ಳಾಪುರ: ರಾತ್ರಿ ಸುರಿದ ಧಾರಾಕಾರ ಮಳೆಗೆ ದ್ರಾಕ್ಷಿ ಚಪ್ಪರ ಕುಸಿದು ಬಿದ್ದಿದೆ. ಚಿಕ್ಕಬಳ್ಳಾಪುರ ತಾಲೂಕೀನ ಚೀಡಚಿಕ್ಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಒಂದು ವರೆ ಎಕರೆ ದ್ರಾಕ್ಷಿ ಚಪ್ಪರ ಬಿದ್ದು ಹಾಳಾಗಿದೆ. ಗ್ರಾಮದ ರೈತ ವೆಂಕಟರೆಡ್ಡಿಗೆ ಸೇರಿದ ದ್ರಾಕ್ಷಿ ಚಪ್ಪರವಾಗಿದ್ದು, ಕಟಾವಿಗೆ ಸಿದ್ದವಾಗಿದ್ದ ದ್ರಾಕ್ಷಿ ಫಸಲು ಮಣ್ಣು ಪಾಲಾಗಿತ್ತು. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಮಳೆಯಿಂದಾಗಿ ಕುಸಿದು ಬಿದ್ದ ಸೇರುವೆ:
ಮೈಸೂರು: ನಗರದಲ್ಲಿ ಮಳೆ ಅವಾಂತರ ಮುಂದುವರೆದಿದೆ. ನಿರಂತರ ಮಳೆ ಹಿನ್ನೆಲೆ ಮೋರಿಯ ಸೇತುವೆ ಕುಸಿದು ಬಿದ್ದಿದೆ. ನಗರದ ಬೋಗಾದಿಯಲ್ಲಿ ಘಟನೆ ನಡೆದಿದೆ. ಮಳೆಯಿಂದ ಮೋರಿಗಳು ತುಂಬಿ ಹರಿಯುತ್ತಿವೆ. ಮನೆ ಆವರಣಕ್ಕೂ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ಜನರು ಹೈರಾಣಾಗಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos