ಶಾಸಕರೇ ರಸ್ತೆ ಉದ್ಘಾಟನೆ ಮಾಡಬೇಕೆಂದು ರಸ್ತೆಗೆ ಬೀಗ ಜಡಿದ ಭೂಪರು

ಶಾಸಕರೇ ರಸ್ತೆ ಉದ್ಘಾಟನೆ ಮಾಡಬೇಕೆಂದು ರಸ್ತೆಗೆ ಬೀಗ ಜಡಿದ ಭೂಪರು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 17, 2022 | 12:10 PM

ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ರಸ್ತೆ ಬದಿ ವ್ಯಾಪಾರಿಯೊಬ್ಬ ನಗರಸಭೆ ಅಧಿಕಾರಿಗಳ ಎದುರು ಗಾಡಿಗೆ ಬೆಂಕಿ ಹಚ್ಚಿರುವಂತಹ ಘಟನೆ ನಗರದ ಮಲ್ಲಂದೂರು ರಸ್ತೆಯಲ್ಲಿ ಸಂಭವಿಸಿದೆ.

ಚಿಕ್ಕಮಗಳೂರು: ಶಾಸಕರೇ ರಸ್ತೆ ಉದ್ಘಾಟನೆ ಮಾಡಬೇಕೆಂದು ಬಿಜೆಪಿ ಸದಸ್ಯರು ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿರುವಂತಹ ಘಟನೆ ಜಿಲ್ಲೆ ಕಳಸ ತಾಲೂಕಿನ ಮಾವಿನ ಹೊಲ ಮಣ್ಣಿನಪಾಲ್ ಗ್ರಾಮದಲ್ಲಿ ನಡೆದಿದೆ. ಉದ್ಘಾಟನೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿಯೇ ಬರಬೇಕೆಂದು ರಸ್ತೆ ಮೇಲೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಜೋಡಿಸಿ ಬೀಗ ಜಡಿಯಲಾಗಿದೆ. ಜೆಸಿಬಿ ತರಿಸಿ ರಸ್ತೆ ಮೇಲೆ ಬೃಹತ್ ಕಲ್ಲು ಇರಿಸಿದ ಮಹಾನುಭಾವರು. 3.20 ಕೋಟಿ ಕಾಮಗಾರಿ ಮುಗಿದು ಒಂದು ತಿಂಗಳು ಕಳೆದಿದೆ. ಮಾವಿನಹೊಲ, ಮಣ್ಣಿನಪಾಲ್ ಗ್ರಾಮ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ರಸ್ತೆಗೆ ಬೀಗ ಹಾಕಿಸಿದ್ದರಿಂದ ಓಡಾಡಲು ಜನಸಾಮಾನ್ಯರ ಪರದಾಟುವಂತ್ತಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳಿಂದ ಕಿರುಕುಳ?

ಚಿಕ್ಕಮಗಳೂರು: ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ರಸ್ತೆ ಬದಿ ವ್ಯಾಪಾರಿಯೊಬ್ಬ ನಗರಸಭೆ ಅಧಿಕಾರಿಗಳ ಎದುರು ಗಾಡಿಗೆ ಬೆಂಕಿ ಹಚ್ಚಿರುವಂತಹ ಘಟನೆ ನಗರದ ಮಲ್ಲಂದೂರು ರಸ್ತೆಯಲ್ಲಿ ಸಂಭವಿಸಿದೆ. ಹಣ್ಣು ತರಕಾರಿಗಳನ್ನ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಬಡ ವ್ಯಾಪಾರಿಗಳಿಗೆ ನಗರಸಭೆ ನಿತ್ಯ ಕಿರುಕುಳ ನೀಡುತ್ತಿದೆ ಎನ್ನಲಾಗುತ್ತಿದೆ. ಗಾಡಿಯನ್ನ ಹೊತ್ತೊಯ್ಯಲು ಬಂದಿದ್ದ ನಗರಸಭೆ ಸಿಬ್ಬಂದಿಗಳಿಗೆ ನಮ್ಮಹೊಟ್ಟೆ ಮೇಲೆ ಹೋಡೀತಿದ್ದೀರಾ, ನಾನೇ ಬೆಂಕಿ ಹಾಕ್ತೀನಿ. 500-1000 ದುಡ್ ಕೇಳ್ತಾರೆ, ಎಲ್ಲಿಂದ ತಂದು ಕೊಡ್ಲಿ. ಫೈನಾನ್ಸ್​ಗೆ ದುಡ್ಡು ಕಟ್ಟೋದೆ ಕಷ್ಟ, ಇವರಿಗೆ ಹೇಗೆ ಕೊಡೋದುಎಂದು ಚಿಕ್ಕಮಗಳೂರು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.