ಕನಸುಗಳನ್ನು ಈಡೇರಿಸಿಕೊಳ್ಳಲು ಚೇತನಾ ಈ ರೀತಿ ಶಾರ್ಟ್​ಕಟ್​ ಬಳಸಬಾರದಿತ್ತು; ಸಹ ನಟನ ಬೇಸರ

ಚೇತನಾ ರಾಜ್​ (21) ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯ ಕಾರಣ ಎಂದು ಎಲ್ಲರೂ ದೂರುತ್ತಿದ್ದಾರೆ. ಯಾರು ಏನೇ ಮಾಡಿದರೂ ಹೋದ ಜೀವ ಮತ್ತೆ ಹಿಂದಿರುಗುವುದಿಲ್ಲ. ಚೇತನಾ ಸಾವಿನ ಬಗ್ಗೆ ಸಹ ನಟ ಪೃಥ್ವಿರಾಜ್ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

May 17, 2022 | 2:04 PM

ಫ್ಯಾಟ್​ ಸರ್ಜರಿಗೆ (Plastic Surgery) ಒಳಗಾಗಿದ್ದ ನಟಿ ಚೇತನಾ ರಾಜ್ (Chetana Raj)​ (21) ಮೃತಪಟ್ಟಿದ್ದಾರೆ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಅವರ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯ ಕಾರಣ ಎಂದು ಎಲ್ಲರೂ ದೂರುತ್ತಿದ್ದಾರೆ. ಯಾರು ಏನೇ ಮಾಡಿದರೂ ಹೋದ ಜೀವ ಮತ್ತೆ ಹಿಂದಿರುಗುವುದಿಲ್ಲ. ಚೇತನಾ ಸಾವಿನ ಬಗ್ಗೆ ಸಹ ನಟ ಪೃಥ್ವಿರಾಜ್ ಮಾತನಾಡಿದ್ದಾರೆ. ‘ಚೇತನಾ ಅಷ್ಟೊಂದು ದಪ್ಪ ಇರಲಿಲ್ಲ. ಸ್ವಲ್ಪ ಚಬ್ಬಿಚಬ್ಬಿ ಇದ್ದರು. ಆದರೆ, ಅವರು ಫ್ಯಾಟ್ ಆಗಿದ್ದಾರೆ ಎಂದು ನನಗೆ ಯಾವಾಗಲೂ ಅನಿಸಲಿಲ್ಲ. ಸಿನಿಮಾ ಆಫರ್ ಬರುತ್ತಿದೆ ಎಂದು ನನಗೆ ಅವರು ಅನೇಕ ಬಾರಿ ಹೇಳಿದ್ದರು. ಬಹುಶಃ ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ರೀತಿಯ ಶಾರ್ಟ್​​ಕಟ್ ಬಳಸಿದರು ಅನಿಸುತ್ತದೆ. ಅವರು ಈ ರೀತಿ ಮಾಡಬಾರದಿತ್ತು’ ಎಂದಿದ್ದಾರೆ ಪೃಥ್ವಿರಾಜ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada