Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​

Chetana Raj: ನಟಿ ಚೇತನಾ ರಾಜ್ ಸಾವಿಗೆ ಕಾರಣ ಮತ್ತು ಸಾವಿನ ಸಮಯದ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​
ಚೇತನಾ ರಾಜ್, ದೊಡ್ಡಪ್ಪ ರಾಜಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: May 17, 2022 | 1:47 PM

ಕನ್ನಡ ಕಿರುತೆರೆ ಲೋಕಕ್ಕೆ ಇದು ಬ್ಯಾಡ್​ ನ್ಯೂಸ್​. ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚೇತನಾ ರಾಜ್​ (Chetana Raj) ಅವರು ಮೃತರಾಗಿದ್ದಾರೆ. ಫ್ಯಾಟ್​ ಕರಗಿಸುವ ಸಲುವಾಗಿ ಸರ್ಜರಿಗೆ ಒಳಗಾಗಿದ್ದ ಅವರು ನಿಧನರಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೋಷಕರ ಅನುಮತಿ ಪಡೆಯದೆಯೇ ವೈದ್ಯರು ಈ ಸರ್ಜರಿ (Fat Surgery) ಮಾಡಿದ್ದಾರೆ. ಫ್ಯಾಟ್​ ತೆಗೆಸಿಕೊಳ್ಳಬೇಕು ಎಂಬುದು ಚೇತನಾ ರಾಜ್​ ಅವರು ಉದ್ದೇಶ ಆಗಿತ್ತು. ಅದಕ್ಕಾಗಿ ಅವರು ಆಸ್ಪತ್ರೆಗೆ ಕಟ್ಟಲು ಲಕ್ಷಾಂತರ ರೂಪಾಯಿ ಹಣ ಹೊಂದಿಸಿದ್ದರು ಎಂಬುದು ಈಗ ತಿಳಿದು ಬಂದಿದೆ. ಸರ್ಜರಿ ವೈಫಲ್ಯದಿಂದಾಗಿ ಚೇತನಾ ರಾಜ್ ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿತ್ತು. ಅದರ ಪರಿಣಾಮವಾಗಿ ಅವರು ನಿಧನರಾದರು (Chetana Raj Death) ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಚೇತನಾ ರಾಜ್​ ಅವರು ಆಸ್ಪತ್ರೆಗೆ ಕಟ್ಟಿದ ಹಣದ ಬಗ್ಗೆ ಅವರ ದೊಡ್ಡಪ್ಪ ರಾಜಣ್ಣ ಮಾಹಿತಿ ನೀಡಿದ್ದಾರೆ. ಫ್ಯಾಟ್​ ಸರ್ಜರಿಗೆ ಶೆಟ್ಟಿ’ಸ್​ ಆಸ್ಪತ್ರೆಯವರು 1.6 ಲಕ್ಷ ರೂಪಾಯಿ ಆಗುತ್ತದೆ ಎಂದು ಹೇಳಿದ್ದರು. ಆಪರೇಷನ್​ ಆಗುವುದಕ್ಕೂ ಮುನ್ನ ಚೇತನಾ ರಾಜ್​ 92 ಸಾವಿರ ರೂಪಾಯಿ ಹಣ ಕಟ್ಟಿದ್ದರು. ಸರ್ಜರಿ ಮಾಡುವಾಗಲೇ ಚೇತನಾ ರಾಜ್​ಗೆ ಕಾರ್ಡಿಯಕ್​ ಅರೆಸ್ಟ್​ ಆಯಿತು. ಶೆಟ್ಟಿ’ಸ್​ ಆಸ್ಪತ್ರೆಯಲ್ಲಿ ಐಸಿಯು ಸೌಲಭ್ಯ ಇಲ್ಲದ ಕಾರಣ ಅವರನ್ನು ಕಾಡೆ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು.

ಚೇತನಾ ರಾಜ್ ಸಾವು ಹೇಗೆ ಮತ್ತು ಯಾವಾಗ ಸಂಭವಿಸಿತು ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೇತನಾ ರಾಜ್​ ಸಾವಿನ ಬಗ್ಗೆ ತನಿಖೆ ಆರಂಭ ಆಗಿದೆ. ತಮ್ಮ ಆಸ್ಪತ್ರೆಗೆ ಕರೆತರುವಾಗಲೇ ಚೇತನಾ ರಾಜ್​ ನಿಧನರಾಗಿದ್ದರು ಎಂದು ಈಗ ಕಾಡೆ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಹಾಗಿದ್ದರೂ ಕೂಡ ಚೇತನಾ ಪೋಷಕರಿಂದ 19 ಸಾವಿರ ರೂಪಾಯಿ ಬಿಲ್​ ಕಟ್ಟುವಂತೆ ಹೇಳಿದ್ದರು. ಸೋಮವಾರ (ಮೇ 16) 9 ಸಾವಿರ ಬಿಲ್​ ಪಾವತಿಸಲಾಯಿತು. ಇಂದು (ಮೇ 17) ಪೋಷಕರು ಪ್ರಶ್ನಿಸಿದ ಬಳಿಕ ಇನ್ನುಳಿದ ಹತ್ತು ಸಾವಿರವನ್ನು ಆಸ್ಪತ್ರೆಯವರು ಕಟ್ಟಿಸಿಕೊಂಡಿಲ್ಲ ಎಂದು ಚೇತನಾ ರಾಜ್​ ದೊಡ್ಡಪ್ಪ ರಾಜಣ್ಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ
Image
ನಟಿ ಚೇತನಾ ರಾಜ್​ ನಿಧನ: ‘ತಾಳ್ಮೆ ಇಲ್ಲದವರು ಈ ಕ್ಷೇತ್ರಕ್ಕೆ ಬರಲೇಬೇಡಿ’; ರೂಪಿಕಾ ಕಿವಿಮಾತು
Image
ಫ್ಯಾಟ್​ ಕರಗಿಸಲು ಹೋಗಿ ಜೀವ ಕಳೆದುಕೊಂಡ ಕನ್ನಡದ ನಟಿ; 22ರ ಪ್ರಾಯದ ಪುತ್ರಿ ನಿಧನಕ್ಕೆ ಕಣ್ಣೀರಿಡುತ್ತಿರುವ ತಂದೆ
Image
Chetana Raj Death: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು
Image
Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ

ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳುವ ಬಗ್ಗೆ ಈ ಹಿಂದೆ ಕೂಡ ಚೇತನಾ ರಾಜ್​ ಅವರು ಪೋಷಕರ ಅನುಮತಿ ಕೇಳಿದ್ದರು. ಆದರೆ ಕುಟುಂಬದವರು ಒಪ್ಪಿಗೆ ನೀಡಿರಲಿಲ್ಲ. ಈ ಬಾರಿ ಮನೆಯವರಿಗೆ ಗೊತ್ತಾಗದಂತೆ, ಸ್ನೇಹಿತರ ಜೊತೆ ಸೇರಿಕೊಂಡು ಸರ್ಜರಿಗೆ ಒಳಗಾಗಲು ಅವರು ನಿರ್ಧರಿಸಿದರು. ಆ ತೀರ್ಮಾನವೇ ಅವರಿಗೆ ಮುಳುವಾಯಿತು. ಈಗ ಬಾರದ ಲೋಕಕ್ಕೆ ಚೇತನಾ ರಾಜ್​ ಪಯಣ ಬೆಳೆಸಿರುವುದು ನೋವಿನ ಸಂಗತಿ.

ನಿಜಕ್ಕೂ ಚೇತನಾ ರಾಜ್​ ಸಾವಿಗೆ ಕಾರಣವಾಗಿದ್ದು ಏನು? ವೈದ್ಯರು ಎಡವಿದ್ದು ಎಲ್ಲಿ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ಚೇತನಾ ರಾಜ್ ನಿಧನಕ್ಕೆ ಪ್ರೇಕ್ಷಕರು ಮತ್ತು ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ