Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ

Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ
ಆನೇಕಲ್ ಬಾಲರಾಜ್

Anekal Balaraj: ಬೆಂಗಳೂರಿನ ಜೆ.ಪಿ. ನಗರದಲ್ಲಿ ನಿರ್ಮಾಪಕ ಆನೇಕಲ್​ ಬಾಲರಾಜ್​ ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್​ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

TV9kannada Web Team

| Edited By: Madan Kumar

May 15, 2022 | 12:33 PM

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಆನೇಕಲ್​ ಬಾಲರಾಜ್​ (Anekal Balaraj) ಅವರು ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ‘ಕರಿಯ’ ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್​ ಅವರು ಯಶಸ್ಸು ಕಂಡಿದ್ದರು. ಅವರ ನಿಧನದ (Anekal Balaraj Death) ಸುದ್ದಿ ಕೇಳಿ ಸ್ಯಾಂಡಲ್​ವುಡ್​ನ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಭಾನುವಾರ (ಮೇ 15) ಬೆಳಗ್ಗೆ ಜೆ.ಪಿ. ನಗರದ ಅವರ ನಿವಾಸದ ಬಳಿ ವಾಕಿಂಗ್​ಗೆ ತೆರಳಿದ್ದಾಗ ಅಪಘಾತ (Bengaluru Accident) ಆಯಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆನೇಕಲ್​ ಬಾಲರಾಜ್ ಅವರಿಗೆ 58 ವರ್ಷ ವಯಸ್ಸಾಗಿತ್ತು.

ಆನೇಕಲ್​ ಬಾಲರಾಜ್​ ಅವರು ವಾಕಿಂಗ್​ ಮಾಡಲು ತೆರಳುತ್ತಿದ್ದಾಗ ಅವರಿಗೆ ವಾಹನವೊಂದು ಡಿಕ್ಕಿ ಹೊಡೆಯಿತು. ಫುಟ್​ ಪಾತ್​ ಮೇಲೆ ಬಿದ್ದ ಅವರಿಗೆ ಗಂಭೀರವಾಗಿ ಪೆಟ್ಟಾಯಿತು. ಇದರಿಂದ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಘಟನೆ ಬಗ್ಗೆ ತನಿಖೆ ಆಗಬೇಕಿದೆ. ಕನ್ನಡ ಚಿತ್ರರಂಗದಲ್ಲಿ ಅನೇಕಲ್​ ಬಾಲರಾಜ್​ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಪ್ರೇಮ್​ ನಿರ್ದೇಶನದ ‘ಕರಿಯಾ’, ಶ್ರೀನಿವಾಸ್​ ಪ್ರಭು ನಿರ್ದೇಶನ ಮಾಡಿದ್ದ ‘ಕರಿಯಾ 2’, ‘ಗಣಪ’ ಸೇರಿದಂತೆ ಅನೇಕ ಸಿನಿಮಾಗಳನ್ನು ಆನೇಕಲ್​ ಬಾಲರಾಜ್​ ಅವರು ನಿರ್ಮಾಣ ಮಾಡಿದ್ದರು.

ಪುತ್ರನ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಆನೇಕಲ್​ ಬಾಲರಾಜ್​:

‘ಕರಿಯ’ ಸಿನಿಮಾದಿಂದ ಗೆಲುವು ಕಂಡ ಆನೇಕಲ್​ ಬಾಲರಾಜ್​ ಅವರು ನಂತರ ಅನೇಕ ಸಿನಿಮಾಗಳಿಗೆ ಬಂಡವಾಳ ಹೂಡಿದರು. ಅವರ ಪುತ್ರ ಸಂತೋಷ್​ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಂತೋಷ್​ ನಟಿಸಿದ್ದ ‘ಕರಿಯ 2’ ಮತ್ತು ‘ಗಣಪ’ ಸಿನಿಮಾಗಳನ್ನು ಅನೇಕಲ್​ ಬಾಲರಾಜ್​ ನಿರ್ಮಾಣ ಮಾಡಿದರು. ಈ ಎರಡೂ ಸಿನಿಮಾಗಳು ಉತ್ತಮ ವಿಮರ್ಶೆ ಪಡೆದುಕೊಂಡಿದ್ದವು. ಇನ್ನೂ ಅನೇಕ ಚಿತ್ರಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಅವರ ಅಗಲಿಕೆಗೆ ಸ್ಯಾಂಡಲ್​ವುಡ್​ ಕಲಾವಿದರು ಮತ್ತು ತಂತ್ರಜ್ಞರು ಕಂಬಿನಿ ಮಿಡಿಯುತ್ತಿದ್ದಾರೆ.

ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada