ರಸ್ತೆ ಅಪಘಾತದ ಬಳಿಕ ಸುನೇತ್ರಾ ಪಂಡಿತ್​ ಆರೋಗ್ಯ ಸ್ಥಿತಿ ಹೇಗಿದೆ? ಮಾಹಿತಿ ಹಂಚಿಕೊಂಡ ಪುತ್ರಿ ಶ್ರೇಯಾ

ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್​ ಹಾಕಿದ್ದರಿಂದ ನಟಿ ಸುನೇತ್ರಾ ಪಂಡಿತ್​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಅವರ ಪುತ್ರಿ ಶ್ರೇಯಾ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

May 08, 2022 | 11:07 AM

ಬೆಂಗಳೂರಿನಲ್ಲಿ ಶನಿವಾರ (ಮೇ 7) ರಾತ್ರಿ ನಡೆದ ಅಪಘಾತದಲ್ಲಿ ನಟಿ ಸುನೇತ್ರಾ ಪಂಡಿತ್​ (Sunetra Pandit) ಅವರಿಗೆ ಪೆಟ್ಟಾಗಿದೆ. ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕ್ಸಿಡೆಂಟ್​ (Sunetra Pandit Accident) ವಿಷಯ ತಿಳಿದು ಅವರ ಕುಟುಂಬದವರಲ್ಲಿ ಆತಂಕ ಮೂಡಿತ್ತು. ಎನ್​.ಆರ್​. ಕಾಲೋನಿಯ 9ನೇ ಅಡ್ಡ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋದಾಗ ಈ ಅಪಘಡ ಸಂಭವಿಸಿತು. ಈಗ ಅವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಮನೆಯವರ ಜೊತೆ ಮಾತನಾಡುತ್ತಿದ್ದಾರೆ. ಈ ಕುರಿತು ಸುನೇತ್ರಾ ಪಂಡಿತ್​ ಅವರ ಪುತ್ರಿ ಶ್ರೇಯಾ (Sunetra Pandit daughter Shreya) ಮಾಹಿತಿ ಹಂಚಿಕೊಂಡಿದ್ದಾರೆ. ‘ಗುಂಡಿ ತಪ್ಪಿಸಲು ಹೋಗಿ ಈ ಅಪಘಾತ ಆಗಿದೆ. ಹೆಲ್ಮೆಟ್​ ಹಾಕಿದ್ದರಿಂದ ಪ್ರಾಣಕ್ಕೆ ಅಪಾಯ ಆಗಿಲ್ಲ. ಮೂಗಿಗೆ ಹೆಚ್ಚು ಏಟಾಗಿದೆ. ಎಕ್ಸ್​ರೇ ನೋಡಿದ ಬಳಿಕ ಇಂಟರ್​ನಲ್​ ಇಂಜ್ಯುರಿ ಬಗ್ಗೆ ತಿಳಿಯಬೇಕಿದೆ’ ಎಂದು ಶ್ರೇಯಾ ಪ್ರತಿಕ್ರಿಯೆ ನೀಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್​ ಆಗಿರುವ ಸುನೇತ್ರಾ ಪಂಡಿತ್​ ಅವರು ಕಂಠದಾನ ಕಲಾವಿದೆ ಆಗಿಯೂ ಸಕ್ರಿಯರಾಗಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada