ಕನ್ನಡ ಕಿರುತೆರೆಯ ಖ್ಯಾತ ಪೋಷಕ ನಟಿ ಸುನೇತ್ರಾ ಪಂಡಿತ್ (Sunetra Pandit) ಅವರಿಗೆ ರಸ್ತೆ ಅಪಘಾತವಾಗಿದ್ದು, ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ (ಮೇ 7) ರಾತ್ರಿ ಸಂಭವಿಸಿದ ಅಪಘಾತದಲ್ಲಿ ಅವರ ತೆಲೆಗೆ ಪೆಟ್ಟಾಯಿತು. ಕೂಡಲೆ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಘಟನೆ (Sunetra Pandit Accident) ನಡೆದ ಬಳಿಕ ಸ್ಥಳಕ್ಕೆ ಬಂದ ಸ್ಥಳೀಯರು ಅಲ್ಲಿನ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ವಿಪರೀತವಾಗಿರುವ ರಸ್ತೆ ಗುಂಡಿಗಳಿಂದಲೇ ಈ ರೀತಿಯ ಆ್ಯಕ್ಸಿಡೆಂಟ್ ಸಂಭವಿಸಿವೆ. ಅದೇ ಸ್ಥಳದಲ್ಲಿ ಈ ಮೊದಲು ಕೂಡ ಅನೇಕ ಬಾರಿ ಅಪಘಾತಗಳು (Bengaluru Accident) ಆದ ಉದಾಹರಣೆ ಇದೆ. ಈ ಬಗ್ಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.