ಫ್ಯಾಟ್​ ಕರಗಿಸಲು ಹೋಗಿ ಜೀವ ಕಳೆದುಕೊಂಡ ಕನ್ನಡದ ನಟಿ; 22ರ ಪ್ರಾಯದ ಪುತ್ರಿ ನಿಧನಕ್ಕೆ ಕಣ್ಣೀರಿಡುತ್ತಿರುವ ತಂದೆ

Chetana Raj Death: ಕಿರುತೆರೆ ನಟಿ ಚೇತನಾ ರಾಜ್ ನಿಧನದಿಂದ ಅವರ ಕುಟುಂಬದವರಿಗೆ ತೀವ್ರ ಆಘಾತ ಆಗಿದೆ. ಮಗಳು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಚೇತನಾ ರಾಜ್​ ತಂದೆ ಆರೋಪಿಸಿದ್ದಾರೆ.

TV9kannada Web Team

| Edited By: Madan Kumar

May 17, 2022 | 11:21 AM

ದೇಹದ ಫಿಟ್ನೆಸ್​ ಕಾಪಾಡಿಕೊಳ್ಳಬೇಕು ಎಂಬ ಗುರಿ ನಟ-ನಟಿಯರಿಗೆ ಇರುವುದು ಸಹಜ. ಆದರೆ ಅದನ್ನು ಸಾಧಿಸಲು ಸೂಕ್ತವಲ್ಲದ ಮಾರ್ಗ ಅನುಸರಿಸಿದರೆ ಪ್ರಾಣಕ್ಕೆ ಅಪಾಯ ಆಗುವುದು ಗ್ಯಾರಂಟಿ. ಕನ್ನಡ ಕಿರುತೆರೆ ನಟಿ ಚೇತನಾ ರಾಜ್​ (Chetana Raj) ಅವರಿಗೆ ಅಂಥ ದುಸ್ಥಿತಿ ಬಂದಿದೆ. ಸೊಂಟದ ಫ್ಯಾಟ್ ಕರಗಿಸಲು ಹೋಗಿ ಅವರು ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಶೆಟ್ಟಿ’ಸ್ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್​ ಸರ್ಜರಿಗೆ ಭ ಒಳಗಾದ 22ರ ಪ್ರಾಯದ ಚೇತನಾ ರಾಜ್​ ಅವರು ನಿಧನರಾಗಿದ್ದಾರೆ. ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಇಡುತ್ತಿದ್ದಾರೆ. ತುಂಬ ಆರೋಗ್ಯವಾಗಿದ್ದ ಮಗಳು, ಈ ಸರ್ಜರಿಗೆ ಒಳಗಾದ ಬಳಿಕ ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಚೇತನಾ ರಾಜ್​ ಸಾವಿನ (Chetana Raj Death) ದುಃಖದಲ್ಲಿ ಅವರ ತಂದೆ ವರದರಾಜ್​ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada