ಮನೆಗೆ ನಡಕೊಂಡೇ ಹೋದ ಕಮಲ್‌ ಪಂತ್‌: ಹಲವು ಅನುಮಾನಗಳಿಗೆ ಕಾರಣ

ಮನೆಗೆ ನಡಕೊಂಡೇ ಹೋದ ಕಮಲ್‌ ಪಂತ್‌: ಹಲವು ಅನುಮಾನಗಳಿಗೆ ಕಾರಣ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 17, 2022 | 7:32 AM

ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಬಿಟ್ ಕಾಯಿನ್ ಕೇಸ್‌ನ ಕುರಿತು ಯಾವುದೇ ಗೊಂದಲವಿರಲಿಲ್ಲ. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ. ನಾನು ಸಂಪೂರ್ಣ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ.

ಬೆಂಗಳೂರು: ರಾಜ್ಯ ಸರ್ಕಾರ ಆರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್(Kamal Pant) ವರ್ಗಾವಣೆಯಾಗಿದ್ದು, ನೂತನ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ(CH Pratap Reddy) ನೇಮಕಗೊಂಡಿದ್ದಾರೆ. ಪ್ರತಾಪ್‌ರೆಡ್ಡಿ ಅವರು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು. ಸದ್ಯ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಆದ್ರೆ ಕೊನೆಯಲ್ಲಿ ಮನೆಗೆ ನಡೆದುಕೊಂಡೇ ಹೋಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಕಮಲ್‌ ಪಂತ್‌, ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ಡಿಜಿಯಾದ ಬಳಿಕವೂ ಒಂದು ವರ್ಷಕಾಲ ಮುಂದುವರೆಯಲು ಅವಕಾಶ ನೀಡಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಬೆಂಗಳೂರಿನ ಜನತೆ, ಮಾಧ್ಯಮಗಳ ಸಹಕಾರಕ್ಕೂ ವಂದನೆಗಳನ್ನ ಸಲ್ಲಿಸುತ್ತೇನೆ ಎಂದು ನಿರ್ಗಮಿತ ಕಮಿಷನರ್ ಕಮಲ್ ಪಂತ್ ಹೇಳಿದರು.

ಇನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಕುರಿತು ಮಾತನಾಡಿದ ಕಮಲ್ ಪಂತ್, ನಾನು ಈವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಭರವಸೆಯಿದೆ. ರೌಡಿ ಚಟುವಟಿಕೆ, ಡ್ರಗ್ಸ್‌ ದಂಧೆ ನಿಯಂತ್ರಣಕ್ಕೆ ಬಂದಿದೆ. ಸೈಬರ್ ಕ್ರೈಂ ತಡೆಗೆ ಸಿಐಆರ್ ಮಾದರಿ ಜಾರಿಗೆ ತಂದಿದ್ದೇವೆ. ಸಿಐಆರ್ ಮಾದರಿಯನ್ನು ದೇಶಾದ್ಯಂತ ಅನುಸರಿಸುತ್ತಿದ್ದಾರೆ. ಕೊವಿಡ್‌ ವೇಳೆ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಬಿಟ್ ಕಾಯಿನ್ ಕೇಸ್‌ನ ಕುರಿತು ಯಾವುದೇ ಗೊಂದಲವಿರಲಿಲ್ಲ. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ. ನಾನು ಸಂಪೂರ್ಣ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ. ಇದು ನನ್ನ ಜೀವನದ ಗರಿಷ್ಠ ತೃಪ್ತಿ ಎಂದೇ ಹೇಳಬಹುದು. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ ಎಂದು ಗೃಹ ಸಚಿವರಿಗೆ ಕಮಲ್‌ ಪಂತ್ ಧನ್ಯವಾದ ತಿಳಿಸಿದ್ದಾರೆ. ಸಿ.ಹೆಚ್‌.ಪ್ರತಾಪ್‌ ರೆಡ್ಡಿ ದಕ್ಷ ಹಾಗೂ ಸಮರ್ಥ ಅಧಿಕಾರಿ ಎಂದರು.

ಇನ್ನು ಕೆಎಸ್‌ಆರ್‌ಪಿ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ರನ್ನು ಲಾ & ಆರ್ಡರ್ ಎಡಿಜಿಪಿಯಾಗಿ ವರ್ಗಾಹಿಸಲಾಗಿದೆ. ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಆರ್.ಹಿತೇಂದ್ರರನ್ನ ವರ್ಗಾವಣೆ ಮಾಡಲಾಗಿದ್ದು ಸಿಐಡಿ ಎಸ್‌ಪಿಯಾಗಿ ಎಂ.ಎನ್.ಅನುಚೇತ್ ವರ್ಗಾವಣೆಯಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿಯಾಗಿ ವೆಂಕಟೇಶ್ ವರ್ಗಾವಣೆಯಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.