AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್​ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ

SL Bhyrappa: ಜಗತ್ತಿನ ಅತಿಪುರಾತನ ನಗರಗಳಲ್ಲಿ ಒಂದು ಎನಿಸಿದ ಕಾಶಿಯನ್ನು ಒಂದು ಪಾತ್ರ ಎನ್ನುವಂತೆ, ಮೊಘಲರ ದಬ್ಬಾಳಿಕೆಗೆ ನಲುಗಿದ ಸಂಸ್ಕೃತಿಯಾಗಿ ಭೈರಪ್ಪ ಕಾಬಂದರಿಯಲ್ಲಿ ನಿರೂಪಿಸಿರುವುದು ವಿಶೇಷ.

Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್​ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ
ಆವರಣ ಕಾದಂಬರಿ ಮತ್ತು ಸಾಹಿತಿ ಎಸ್​.ಎಲ್.ಭೈರಪ್ಪ
TV9 Web
| Edited By: |

Updated on:May 17, 2022 | 12:52 PM

Share

ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಕೋರ್ಟ್ ನಿರ್ದೇಶನದಂತೆ ನಡೆದ ವಿಡಿಯೊ ಚಿತ್ರೀಕರಣ, ಸಮೀಕ್ಷೆಯ ವೇಳೆ ಅಲ್ಲಿನ ಕೊಳವೊಂದರಲ್ಲಿ ಇರುವ ಶಿವಲಿಂಗ ಪತ್ತೆಯಾದ ಬೆನ್ನಿಗೇ ಕರ್ನಾಕಟದಲ್ಲಿ ಎಸ್​.ಎಲ್.ಭೈರಪ್ಪ ಬರೆದಿರುವ ಆವರಣ ಕಾದಂಬರಿಯ ಸಾಲುಗಳು ಚರ್ಚೆಗೆ ಬಂದಿವೆ. ಸಾಕಷ್ಟು ವಾಟ್ಸ್ಯಾಪ್ ಗುಂಪುಗಳಲ್ಲಿ ಕಾದಂಬರಿಯ 184, 185, 186, 187ನೇ ಪುಟಗಳ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಜಗತ್ತಿನ ಅತಿಪುರಾತನ ನಗರಗಳಲ್ಲಿ ಒಂದು ಎನಿಸಿದ ಕಾಶಿಯನ್ನು ಒಂದು ಪಾತ್ರ ಎನ್ನುವಂತೆ, ಮೊಘಲರ ದಬ್ಬಾಳಿಕೆಗೆ ನಲುಗಿದ ಸಂಸ್ಕೃತಿಯಾಗಿ ಭೈರಪ್ಪ ಕಾಬಂದರಿಯಲ್ಲಿ ನಿರೂಪಿಸಿರುವುದು ವಿಶೇಷ. ಕಾಶಿಯ ಪ್ರಸ್ತಾಪ ಬರುವುದು ಕೆಲವೇ ಪುಟಗಳಲ್ಲಿ ಆದರೂ ಒಮ್ಮೆ ಓದಿದವರು ಮತ್ತೆಂದೂ ಮರೆಯಲಾಗದಷ್ಟು ಸಶಕ್ತವಾಗಿ ಕಾಶಿಯ ನಿರೂಪಣೆ ಈ ಕಾದಂಬರಿಯಲ್ಲಿದೆ. 2007ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಆವರಣ ಕಾದಂಬರಿಯು ಈವರೆಗೆ ಹತ್ತಾರುಬಾರಿ ಮುದ್ರಣ ಕಂಡಿದೆ.

ಚಿತ್ರರಂಗದಲ್ಲಿ ಕೆಲಸ ಮಾಡುವ ದಂಪತಿಗಳಾದ ರಝಿಯಾ ಉರುಫ್ ಲಕ್ಷ್ಮಿ ಮತ್ತು ಅವಳ ಗಂಡ ಶೌಹರ್ ಅಮೀರ ಈ ಕಾದಂಬರಿಯನ್ನು ಕಥೆಯನ್ನು ಮುನ್ನಡೆಸುತ್ತಾರೆ. ಹಿಂದೂ ಧರ್ಮದಲ್ಲಿ ಜನಿಸಿದ ಲಕ್ಷ್ಮಿ, ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಕೇವಲ ತೋರ್ಪಡಿಕೆಗಾಗಿ ಧರ್ಮ ಬದಲಾವಣೆಯೆಂದು ಅಮೀರ ಹೇಳಿದರೂ ಧರ್ಮವು ನೀಡುವ ಅಧಿಕಾರಗಳನ್ನು ಅವನು ಚಲಾಯಿಸದೆ ಬಿಡುವುದಿಲ್ಲ. ಕಥಾನಾಯಕಿಯ ಮೂಲಕ ಕಾದಂಬರಿಯೊಳಗೆ ಮತ್ತೊಂದು ಕಥೆಯನ್ನು ಸೃಷ್ಟಿಸಿ, ಭಾರತದಲ್ಲಿ ಮುಘಲರ ಆಳ್ವಿಕೆಯ ರೀತಿನೀತಿ ವಿವರಿಸಲು ಭೈರಪ್ಪ ಯತ್ನಿಸಿದ್ದಾರೆ. ಈ ಕಾದಂಬರಿ ಬರೆಯುವ ಮುನ್ನ ಭೈರಪ್ಪ ಇಸ್ಲಾಮ್ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ್ದರು, ಕೆಲ ಮುಸ್ಲಿಂ ಕುಟುಂಬಗಳೊಂದಿಗೆ ಒಂದಿಷ್ಟು ದಿನ ಉಳಿದುಕೊಂಡು ಅವರ ಬದುಕನ್ನು ಹತ್ತಿರದಿಂದ ಗಮನಿಸಿದ್ದರು.

ಕಾದಂಬರಿ ಪ್ರಕಟವಾದ ದಿನದಿಂದಲೇ ವಿವಾದಕ್ಕೂ ಈಡಾಗಿತ್ತು. “ಸಮಾಜದಲ್ಲಿ ಹಿಂದೂ-ಮುಸ್ಲಿಂ ಕಂದಕದ ಆಳ ಹೆಚ್ಚಿಸುವ ಅಪಾಯಕಾರಿ ಕೃತಿ ಇದು” ಎಂದು ಕಾದಂಬರಿಯನ್ನು ಪ್ರಗತಿಪರರು ಮತ್ತು ಕೆಲ ವಿಮರ್ಶಕರು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ “ಇತಿಹಾಸಕ್ಕೆ ಯಾವ ಧ್ಯೇಯವಿಲ್ಲ, ಇರಕೂಡದು. ಅದು ಕೇವಲ ಸತ್ಯಾನ್ವೇಷಣೆಯ ಹಾದಿಯಾಗಿರಬೇಕು. ಒಂದು ಧರ್ಮದ ಇತಿಹಾಸದಿಂದ ಆ ಧರ್ಮದ ಪ್ರಸ್ತುತ ಸ್ಥಾನಮಾನ ನಿರ್ಧಾರವಾಗುವುದಿಲ್ಲ. ಇತಿಹಾಸದ ಸತ್ಯವನ್ನು ತಿಳಿದು, ತಪ್ಪುಗಳನ್ನು ಅರಿತು, ತಿದ್ದಿ, ಮರುಕಳಿಸದಂತೆ ಸಾಗಬೇಕು” ಎಂದು ಈ ಕಾದಂಬರಿಯ ಕಥಾನಾಯಕಿ ರಝಿಯಾ ಹೇಳುತ್ತಾಳೆ. ಇಡೀ ಕಾದಂಬರಿಯ ಆಶಯ ಮತ್ತು ರಚನೆಯ ಮುಖ್ಯ ಉದ್ದೇಶವೂ ಇದೇ ಆಗಿದೆ ಎಂದು ಭೈರಪ್ಪ ಅವರ ನಿಲುವನ್ನು ಹಲವು ವಿಮರ್ಶಕರು ಸಮರ್ಥಿಸಿಕೊಂಡಿದ್ದರು.

ಪ್ರಾತಿನಿಧಿಕ ಸಾಲುಗಳು

ಆವರಣ ಪುಸ್ತಕದ 184 ಮತ್ತು 185ನೇ ಪುಟಗಳ ಕೆಲವು ಸಾಲುಗಳನ್ನು ಮಾತ್ರ ಪ್ರಾತಿನಿಧಿಕವಾಗಿ ಇಲ್ಲಿ ನೀಡಲಾಗಿದೆ. ಕಾಶಿಯ ಗ್ಯಾನವಾಪಿ ಮಸೀದಿಯ ಬಗ್ಗೆ ಭೈರಪ್ಪನವರು ನೀಡುವ ವಿವರಣೆ ತಿಳಿಯಲು ಕಾದಂಬರಿಯನ್ನು ಓದಬೇಕು. ಆವರಣ ಕಾದಂಬರಿಯಲ್ಲಿ ಜ್ಞಾನವಾಪಿ (ಗ್ಯಾನವಾಪಿ) ಮಸೀದಿ ಕುರಿತು ಪ್ರಸ್ತಾಪವಾಗಿರುವ ಉಲ್ಲೇಖಗಳ ಸಂಗ್ರಹ ರೂಪ ಇಲ್ಲಿದೆ…

ಯಾವುದು? ಯಾವುದು? ವಿಶಾಲಕ್ಷಿ ತಿಳಯದೆ ಕೇಳಿದಳು. ಸುಬ್ಬಣ್ಣಭಾವ ಕೂಡ ಯಾವುದು? ಎಂದರು. ಸಣ್ಣ ಮಂಟಪ. ಹಳ್ಳಿಯ ಬಡಭಕ್ತನು ತಿರುಪೆ ಮಾಡಿ ಊರ ಮುಂದೆ ಕಟ್ಟಿಸಿರುವಷ್ಟು ಕಿರುದು. ಮಂಟಪಕ್ಕೆ ಪ್ರದಕ್ಷಿಣೆ ಹಾಕುವ ಸಂದಣಿಗೆ ಸ್ಥಳವಿಲ್ಲ. ‘ಕಾಶಿ ವಿಶ್ವನಾಥ ಮಂದಿ ಅಂದರೆ ಇದೇನಾ?’ ವಿಶಾಲಾಕ್ಷಿ ಸುಬ್ಬಣ್ಣ ಇಬ್ಬರೂ ಒಂದೇ ಸಲ ಒಂದೇ ವಾಕ್ಯದಿಂದ ಉದ್ಗರಿಸಿದರು. ಇತಿಹಾಸವನ್ನು ಓದಿದ್ದ ಲಕ್ಷ್ಮಿ ಉದ್ಗರಿಸಲಿಲ್ಲ. ಆದರೆ ಅವಳ ಬುದ್ಧಿ ಕುಸಿದಂತಾಯಿತು.

‘ಇಲ್ಲಿ ಬನ್ನಿ ತೋರುಸ್ತೀನಿ’. ಜಾಗ ಬಿಡಿಸಿಕೊಂಡು ತುಸು ಓರೆಯಾಗಿ ನಡೆದು ಸರ್ಮಾ ಮೂವರನ್ನೂ ಒಂದು ಕಲ್ಲಿನ ಬಸವಣ್ಣನ ಹತ್ತಿರಕ್ಕೆ ಕರೆತಂದು ಹೇಳಿದ: ‘ಯಾವಾಗಲೂ ಈಶ್ವರನ ಗುಡಿಯ ಮುಂದೆ ತಾನೆ ನಂದಿ ಕೂತಿರೂದು. ಅದು ಧ್ಯಾನಿಸಿ ನೋಡುವುದು ಒಳಗಿರುವ ಲಿಂಗವನ್ನಲ್ಲವೆ? ಈ ನಂದಿ ಏನನ್ನ ನೋಡ್ತಿದೆ ನೋಡಿ ಅರ್ಥಮಾಡ್ಕಳಿ’.

ಲಕ್ಷ್ಮಿಗೆ ಥಟ್ಟನೆ ಅರ್ಥವಾಯಿತು. ಮುಘಲ್​ಸರಾಯಿಯಿಂದ ಬರುವಾಗ ಕಾಶಿಗೆ ಐದಾರು ಮೈಲಿ ದೂರದಲ್ಲೇ ಇಡೀ ಕಾಶಿಯನ್ನೇ ದಟ್ಟವಾಗಿ ಆವರಿಸಿ ಕಾಶಿಯ ಆಕಾಶವನ್ನು ದಟ್ಟವಾಗಿ ಕವಿದು; ವಿಶ್ವನಾಥನ ಸ್ಥಾನದ ಗೋಡೆ ತಳಹದಿಗಳ ಮೇಲೆ ಮದಿಸಿ ನಿಂತಿರುವ ಗ್ಯಾನವಾಪಿ ಮಸೀದಿ. ಔರಂಗಾಜೇಬನ ಧಾರ್ಮಿಕ ವಿಜೃಂಭಣೆ.

‘ಔರಂಗಾಜೇಬನು ವಿಶ್ವನಾಥ ಮಂದಿರವನ್ನು ಧ್ವಂಸಮಾಡಿ ಕಟ್ಟಿಸಿದ ಮಸೀದಿಯನ್ನು ಬಂದೂಕುಧಾರಿ ಸಿಪಾಯಿಗಳು ಬೇಲಿ ಕಟ್ಟಿಕೊಂಡು ರಕ್ಷಿಸುತ್ತಿದ್ದಾರೆ,’ ಸರ್ಮಾ ವಿವರಿಸಿದ.

ಮಂದಿರವನ್ನು ನಾಶ ಮಾಡುವಂತೆ ಔರಂಗಜೇಬನ ಹುಕುಂ ಬಂದಿದೆ. ಜನಗಳು ರೊಚ್ಚಿಗೇಳುತ್ತಾರೆಂಬ ಮುನ್ನೆಚ್ಚರಿಕೆಯಿಂದ ಸುಬೇದಾರನು ಗಲ್ಲಿಗಲ್ಲಿಗಳಿಗೂ ಮುಸ್ಲಿಂ ಸೈನಿಕರನ್ನು ನಿಯೋಜಿಸುತ್ತಿದ್ದಾನೆ. ಗುಡಿಯ ಪೂಜಾರಿಗಳಿಗೆ ವಾಸನೆ ಬಡಿಯಿತು. ಮಂದಿರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಬಹುದು. ವಿಗ್ರಹವನ್ನಾದರೂ. ರಾತ್ರೋರಾತ್ರಿ ಅರ್ಚಕರುಗಳೆಲ್ಲ ಸೇರಿ ಗರ್ಭಗುಡಿಯ ಲಿಂಗವನ್ನು ವಿಸರ್ಜಿಸಿ ಸಾಗಿಸಿ ಗುಡಿಯ ಪಕ್ಕದಲ್ಲಿದ್ದ ಗ್ಯಾನವಾಪಿ, ಜ್ಞಾನದ ಭಾವಿಗೆ ಇಳಿಸಿ ಗುರುತು ಸಿಕ್ಕದಂತೆ ಮಣ್ಣು ಮುಚ್ಚಿ ನೆಲವನ್ನು ಮಟ್ಟ ಮಾಡಿದರು. ಮರುದಿನ ಮಂದಿರವನ್ನು ಕೆಡವಿದವರಿಗೆ ಇದು ತಿಳಿಯಲಿಲ್ಲ. ಹಾಗಾಗಿ ಮೂಲ ವಿಶ್ವನಾಥ ಲಿಂಗಲೇ ಉಳಿಯಿತು.

ಪುಸ್ತಕ ವಿವರ ಪುಸ್ತಕದ ಹೆಸರು: ಆವರಣ, ಲೇಖಕರು: ಎಸ್.ಎಲ್.ಭೈರಪ್ಪ, ಪ್ರಕಾಶಕರು: ಸಾಹಿತ್ಯ ಭಂಡಾರ, ಬೆಲೆ ₹ 265, ಪುಟಗಳು: 280, ಸಂಪರ್ಕ ಸಂಖ್ಯೆ: 080 2287 7618, ವಿಳಾಸ: ಮಳಿಗೆ ಸಂಖ್ಯೆ 8, ಜೆಎಂ ಲೇನ್, ಬಳೆಪೇಟೆ, ಬೆಂಗಳೂರು – 560 053

Published On - 12:44 pm, Tue, 17 May 22

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ