Sidhu Road rage Case ವಿಳಂಬವಾದರೂ ನಮಗೆ ನ್ಯಾಯ ಸಿಕ್ಕಿದೆ: ಗುರ್ನಾಮ್ ಸಿಂಗ್ ಕುಟುಂಬ
ಘಟನೆ ನಡೆದಾಗ ಸಿಧು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರು. ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಮತ್ತು ಅವರು ಕಾರ್ ಪಾರ್ಕಿಂಗ್ ಬಗ್ಗೆ ಜಗಳ ಮಾಡಿ ಗುರ್ನಾಮ್ ಸಿಂಗ್ ಅವರನ್ನು ಥಳಿಸಿದ್ದಾರೆ.
ಪಟಿಯಾಲದಲ್ಲಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu)ಅವರೊಂದಿಗಿನ ರಸ್ತೆ ಜಗಳ ಘಟನೆಯಲ್ಲಿ 34 ವರ್ಷಗಳ ಹಿಂದೆ ಪ್ರಾಣ ಕಳೆದುಕೊಂಡ ಗುರ್ನಾಮ್ ಸಿಂಗ್ (65) ಅವರ ಕುಟುಂಬ ಸದಸ್ಯರು ಸುಪ್ರೀಂಕೋರ್ಟ್ ತಮ್ಮ ಪರ ಆದೇಶ ನೀಡಿದಕ್ಕಾಗಿ ಸರ್ವಶಕ್ತನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. 34 ವರ್ಷಗಳ ನಂತರ ನ್ಯಾಯ ದೊರಕಿದೆ, ನಾನು ದೇವರ ಮುಂದೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದೀರ್ಘ ಕಾನೂನು ಹೋರಾಟ ಕೊನೆಗೊಂಡ ನಂತರ ಗುರ್ನಾಮ್ ಸಿಂಗ್ (Gurnam Singh)ಅವರ ಮಗ ನರ್ವೇದಿಂದರ್ ಸಿಂಗ್ ಹೇಳಿದ್ದಾರೆ. 2018ರಲ್ಲಿ ಸುಪ್ರೀಂಕೋರ್ಟ್ (Supreme Court) ಕೇವಲ ₹ 1,000 ದಂಡವನ್ನು ವಿಧಿಸುವ ಮೂಲಕ ಸಿಧುವನ್ನು ಬಿಡುಗಡೆ ಮಾಡಿದಾಗ ನನಗೆ ನಿರಾಶೆಯಾಗಿದೆ ಎಂದಿದ್ದಾರೆ ನರ್ವೇದಿಂದರ್. ಆದರೆ ಕುಟುಂಬವು ಈ ನಿರ್ಧಾರವನ್ನು ದೇವರ ನಿರ್ಧಾರವೆಂದು ಒಪ್ಪಿಕೊಂಡಿದೆ ಎಂದಿದ್ದರು. ನಂತರ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, “ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ” ಎಂದು ಹೇಳಿದರು. ಗುರುವಾರ ಇದೇ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನವಜೋತ್ ಸಿಂಗ್ ಸಿಧುಗೆ ಜೈಲು ಶಿಕ್ಷೆ ವಿಧಿಸಿದೆ. ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಗುರ್ನಾಮ್ ಸಿಂಗ್ ಅವರ ಮೊಮ್ಮಗ ಸಾಬ್ಬಿ, “ವಿಳಂಬವಾಗಬಹುದು ಆದರೆ ದೇವರು ಯಾವಾಗಲೂ ನ್ಯಾಯವನ್ನು ನೀಡುತ್ತಾನೆ. ನಾವು ದೇವರಿಗೆ ಮಾತ್ರವಲ್ಲದೆ ನಮ್ಮ ಸುದೀರ್ಘ ಕಾನೂನು ಹೋರಾಟದಲ್ಲಿ ನಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ನಾವು ಧನ್ಯವಾದ ಹೇಳುತ್ತೇವೆ. ಈ ಸಮಯದಲ್ಲಿ ನಾವು ಅನೇಕ ಒತ್ತಡಗಳನ್ನು ಅನುಭವಿಸಿದ್ದೇವೆ ಎಂದಿದ್ದಾರೆ. ಆರೋಪ ಮುಕ್ತರಾದಾಗ ಸಿಧು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ನಾವು ದೇವರಿಗೆ ಕೃತಜ್ಞರಾಗಿರುತ್ತೇವೆ ಎಂದು ಮಾತ್ರ ಹೇಳಬಹುದು ಎಂದಿದ್ದಾರೆ ಸಾಬ್ಬಿ.
ತೀರ್ಪಿನ ಒಂದು ದಿನ ಮೊದಲು ಕುಟುಂಬವು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿತ್ತು ಎಂದು ಅವರು ಹೇಳಿದರು. ಗುರ್ನಾಮ್ ಸಿಂಗ್ ಅವರ ಸೊಸೆ ಪರ್ವೀನ್ ಕೌರ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಘಟನೆ ನಡೆದಾಗ ಸಿಧು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರು. ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಮತ್ತು ಅವರು ಕಾರ್ ಪಾರ್ಕಿಂಗ್ ಬಗ್ಗೆ ಜಗಳ ಮಾಡಿ ಗುರ್ನಾಮ್ ಸಿಂಗ್ ಅವರನ್ನು ಥಳಿಸಿದ್ದಾರೆ. ಗುರ್ನಾಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಿಧು ಮತ್ತು ಸಂಧು ವಿರುದ್ಧ ಇತರ ಆರೋಪಗಳ ಜೊತೆಗೆ ಅಪರಾಧಿ ನರಹತ್ಯೆಗಾಗಿ ಪ್ರಕರಣ ದಾಖಲಿಸಲಾಗಿದೆ. ಸಂಧು ಅವರನ್ನು ಸುಪ್ರೀಂಕೋರ್ಟ್ ಖುಲಾಸೆಗೊಳಿಸಿದೆ.
ಸಿಧು ಮತ್ತು ಅಕಾಲಿಗಳ ನಡುವಿನ ರಾಜಕೀಯ ಯುದ್ಧವು ತೀವ್ರಗೊಂಡ ಸಮಯದಲ್ಲಿಯೂ ಸಹ, ನರ್ವೇದಿಂದರ್ ಅವರು ರಾಜಕೀಯದಿಂದ ದೂರವೇ ಉಳಿದಿದ್ದು ಮಾಧ್ಯಮಗಳೊಂದಿಗೆ ಸಂವಹನ ನಡೆಸುವುದಕ್ಕೆ ನಿರಾಕರಿಸಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:54 pm, Thu, 19 May 22