ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ಗೆ ಮುಜುಗರ ಉಂಟು ಮಾಡಿದ ನವಜೋತ್ ಸಿಂಗ್ ಸಿಧು; ಏನಿದು ಟ್ವೀಟ್ ಅರ್ಥ?
ನವಜೋತ್ ಸಿಂಗ್ ಸಿಧು ಈ ಟ್ವೀಟ್ ಕಾಂಗ್ರೆಸ್ಗೆ ಸ್ವಲ್ಪ ಮುಜುಗರ ತಂದಿದೆ. ಇಲ್ಲಿ ಸಿಧು, ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್ ಮುನ್ನುಡಿ ಇಟ್ಟಿದ್ದಾರೆ ಎಂದು ಹೇಳಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನವಜೋತ್ ಸಿಂಗ್ ಸಿಧು ಆಪ್ ಮುಖ್ಯಮಂತ್ರಿ ಭಗವಂತ್ ಮಾನ್ರನ್ನು ಹೊಗಳಿದ್ದಾರೆ. ಪಂಜಾಬ್ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನವಜೋತ್ ಸಿಂಗ್ ಸಿಧು, ಇಲ್ಲಿನ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಆಪ್ ಪಕ್ಷವನ್ನು ಆಯ್ಕೆ ಮಾಡಿಕೊಂಡು, ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಜನರ ಇಚ್ಛೆಯೇ ದೇವರ ಇಚ್ಛೆ ಎಂದು ಹೇಳಿದ್ದರು. ಇದೀಗ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿದ್ದಾರೆ.
ಯಾರಿಂದಲೂ ಏನನ್ನೂ ನಿರೀಕ್ಷಿಸದ ವ್ಯಕ್ತಿ ಅತ್ಯಂತ ಸಂತೋಷವಾಗಿರುತ್ತಾನೆ. ಇದೀಗ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು ಪಂಜಾಬ್ನಲ್ಲಿ ಮಾಫಿಯಾ-ವಿರೋಧಿ ಯುಗದ ಅನಾವರಣ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ನಿರೀಕ್ಷೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ. ಜನಪರ ನೀತಿಗಳೊಂದಿಗೆ ಪಂಜಾಬ್ನ್ನು ಪುನರುಜ್ಜೀವನದ ಹಾದಿಗೆ ವಾಪಸ್ ತರುತ್ತಾರೆ ಎಂಬ ನಂಬಿಕೆಯಿದೆ ಎಂದು ಸಿಧು ಬರೆದುಕೊಂಡಿದ್ದಾರೆ.
The happiest man is the one from whom no one expects … Bhagwant Mann unfurls a new anti – Mafia era in Punjab with a mountain of expectations …hope he rises to the occasion , brings back Punjab on the revival path with pro – people policies … best always
— Navjot Singh Sidhu (@sherryontopp) March 17, 2022
ನವಜೋತ್ ಸಿಂಗ್ ಸಿಧು ಈ ಟ್ವೀಟ್ ಕಾಂಗ್ರೆಸ್ಗೆ ಸ್ವಲ್ಪ ಮುಜುಗರ ತಂದಿದೆ. ಇಲ್ಲಿ ಸಿಧು, ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್ ಮುನ್ನುಡಿ ಇಟ್ಟಿದ್ದಾರೆ ಎಂದು ಹೇಳಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಅವಧಿಯಲ್ಲಿ ಏನಾಗಿತ್ತು? ಅವರ್ಯಾಕೆ ಮಾಫಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ. ಈ ಟ್ವೀಟ್ಗೆ ಕಾಂಗ್ರೆಸ್ನಲ್ಲಿಯೇ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಿತ್ತಿಪತ್ರ ಹಿಡಿದು ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್; ಸದನದಲ್ಲಿ ಗಾಂಭೀರ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ