Gyanvapi Mosque row ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೊ ಚಿತ್ರೀಕರಣದ ವರದಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್

ಬುಧವಾರ ಸಂಜೆ 4.30ಕ್ಕೆ ಅಜಯ್ ಮಿಶ್ರಾ (ಮಾಜಿ ನ್ಯಾಯಾಲಯದ ಕಮಿಷನರ್) ಹಿಂದಿನ ಎರಡು ದಿನಗಳ ವರದಿಯನ್ನು ಸಲ್ಲಿಸಿದರು. ಗುರುವಾರ ಬೆಳಗ್ಗೆ 10.30 ಗಂಟೆಗೆ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರು 3 ದಿನಗಳ ಸಮೀಕ್ಷೆಯ ವಿವರಗಳೊಂದಿಗೆ ತಮ್ಮ ವರದಿಯನ್ನು ಸಲ್ಲಿಸಿದರು.

Gyanvapi Mosque row ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೊ ಚಿತ್ರೀಕರಣದ ವರದಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್
ಕಾಶಿಯ ಜ್ಞಾನವಾಪಿ ಮಸೀದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 19, 2022 | 2:56 PM

ದೆಹಲಿ:  ಕೋರ್ಟ್ ಕಮಿಷನರ್ ವಿಶಾಲ್ ಸಿಂಗ್ ಅವರು ಜ್ಞಾನವಾಪಿ ಮಸೀದಿ (Gyanvapi mosque) ಪ್ರಕರಣದ ವಿಡಿಯೊ ಚಿತ್ರೀಕರಣದ ಸಮೀಕ್ಷಾ(Videographic survey)  ವರದಿಯನ್ನು ವಾರಣಾಸಿ  (Varanasi) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಚ್ಚಿದ ಕವರ್‌ನಲ್ಲಿ ವರದಿಯನ್ನು ನ್ಯಾಯಮೂರ್ತಿ ರವಿಕುಮಾರ್ ದಿವಾಕರ್ ಮುಂದೆ ಹಾಜರುಪಡಿಸಲಾಗಿದೆ. ಏತನ್ಮಧ್ಯೆ, ವರದಿಯಲ್ಲಿ ‘ಹಿಂದೂ ಕೆತ್ತನೆಗಳು, ವಿಗ್ರಹಗಳು ಮತ್ತು ಚಿಹ್ನೆಗಳು’ ಮಸೀದಿಯಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ವೇಳೆ ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ. ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡಿದೆ. ಅಂದರೆ ವಾರಣಾಸಿ ನ್ಯಾಯಾಲಯವು ಅಧಿಕೃತ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ ನಂತರ ಇಂದು ವಿಚಾರಣೆ ನಡೆಸಬೇಕಾಗಿತ್ತು. ಆದರೆ ಇಂದು ಪ್ರಕರಣದ ವಿಚಾರಣೆಯನ್ನು ನಡೆಸುವುದಿಲ್ಲ.ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಮೇ 14, 15 ಮತ್ತು 16 ರಂದು ನಡೆದ ಸಮೀಕ್ಷೆ ವರದಿಯನ್ನು ವಿಶೇಷ ವಕೀಲ ವಿಶಾಲ್ ಸಿಂಗ್ ಸಲ್ಲಿಸಿದ್ದಾರೆ ಎಂದು ಪ್ರಕರಣದಲ್ಲಿ ಹಿಂದೂ ಪರವಾಗಿ ವಕಾಲತ್ತು ವಹಿಸಿರುವ ವಕೀಲ ಮದನ್ ಮೋಹನ್ ಯಾದವ್ ಹೇಳಿದರು. ಅಲ್ಲದೆ, ಅಡ್ವೊಕೇಟ್ ಕಮಿಷನರ್ ಹುದ್ದೆಯಿಂದ ವಜಾಗೊಂಡಿರುವ ಅಜಯ್ ಮಿಶ್ರಾ ಅವರು ಮೇ 6 ಮತ್ತು 7 ರಂದು ನಡೆಸಿದ ಸಮೀಕ್ಷೆಯ ಕುರಿತು ಬುಧವಾರ ಸಂಜೆ ವರದಿ ಸಲ್ಲಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

ಮಂಗಳವಾರ ಮಿಶ್ರಾ ಅವರನ್ನು ಪದಚ್ಯುತಗೊಳಿಸಿದ ನ್ಯಾಯಾಲಯವು ವಿಶಾಲ್ ಸಿಂಗ್ ಅವರನ್ನು ವಿಶೇಷ ಅಡ್ವೊಕೇಟ್ ಕಮಿಷನರ್ ಆಗಿ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರನ್ನು ಸಹಾಯಕ ಅಡ್ವೊಕೇಟ್ ಕಮಿಷನರ್ ಆಗಿ ನೇಮಿಸಿತ್ತು. ಮರು ರಚನೆಯಾದ ಆಯೋಗವು ಮೇ 14, 15 ಮತ್ತು 16ರಂದು ಸಮೀಕ್ಷೆ ನಡೆಸಿತ್ತು.

ಇದನ್ನೂ ಓದಿ: SSLC Supplementary Exam 2022: ಮೇ 27ರಿಂದ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ: ಬಿಸಿ ನಾಗೇಶ್

ಇದನ್ನೂ ಓದಿ
Image
Gyanvapi mosque survey ನ್ಯಾಯಾಲಯದ ಗೌಪ್ಯತೆಯನ್ನು ಉಲ್ಲಂಘಿಸಿದ ಆರೋಪ ನಿರಾಕರಿಸಿದ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ
Image
Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ
Image
Gyanvapi Masjid Survey ಅಡ್ವೊಕೇಟ್-ಕಮಿಷನರ್ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಿದ ವಾರಣಾಸಿ ಕೋರ್ಟ್
Image
Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್​ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ

ಜ್ಞಾನವಾಪಿ ಮಸೀದಿ ವಿಡಿಯೊ ಚಿತ್ರೀಕರಣ ಸಮೀಕ್ಷೆ ಬುಧವಾರ ಸಂಜೆ 4.30ಕ್ಕೆ ಅಜಯ್ ಮಿಶ್ರಾ (ಮಾಜಿ ನ್ಯಾಯಾಲಯದ ಕಮಿಷನರ್) ಹಿಂದಿನ ಎರಡು ದಿನಗಳ ವರದಿಯನ್ನು ಸಲ್ಲಿಸಿದರು. ಗುರುವಾರ ಬೆಳಗ್ಗೆ 10.30 ಗಂಟೆಗೆ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರು 3 ದಿನಗಳ ಸಮೀಕ್ಷೆಯ ವಿವರಗಳೊಂದಿಗೆ ತಮ್ಮ ವರದಿಯನ್ನು ಸಲ್ಲಿಸಿದರು ಎಂದು ವಾರಣಾಸಿಯ ವಕೀಲ ನಿತ್ಯಾನಂದ ರಾಯ್ ಹೇಳಿದ್ದಾರೆ. ಅವರು ಫೋಟೊ ಮತ್ತು ವಿಡಿಯೊಗಳಿರುವ ಚಿಪ್ ನ್ನು ಸಲ್ಲಿಸಿದ್ದೆ. ಇದರ ಪ್ರತಿಯನ್ನು ಪ್ರತಿವಾದಿಗಳಿಗೂ ಲಭಿಸುವಂತೆ ಮಾಡಲಾಗಿದೆ. ಆ ಪ್ರತಿ ಅವರಿಗೆ ಸಿಕ್ಕಿದ ನಂತರ ನ್ಯಾಯಾಲಯ ಪ್ರತಿವಾದಿಗಳ ಅಹವಾಲು ಆಲಿಸಲಿದೆ.ಇದನ್ನು ಆಲಿಸಿದ ನಂತರ ನ್ಯಾಯಾಲಯ ಅಂತಿಮ ತೀರ್ಪು ನೀಡಲಿದೆ ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಶಿವಲಿಂಗ- ವುಜು ವಿವಾದದ ಬಗ್ಗೆಯೂ ಅರ್ಜಿ ಇತ್ತು ಸಂಬಂಧಪಟ್ಟ ಕಕ್ಷಿದಾರರು ಸಲ್ಲಿಸಿದ ಬಹು ಅರ್ಜಿಗಳ ಬಗ್ಗೆ ನ್ಯಾಯಾಲಯವು ನಿರ್ಧರಿಸುತ್ತದೆ. ಅವುಗಳಲ್ಲಿ ಈ ಕೆಳಗಿನ ವಿಷಯಕ್ಕೆಸಂಬಂಧಪಟ್ಟ ಅರ್ಜಿಗಳಿತ್ತು. ಜ್ಞಾನವಾಪಿಯಲ್ಲಿ ನಮಾಜ್ ಗೆ ಬರುವ ಮುಸ್ಲಿಮರಮರಿಗೆ ವುಜು ಮತ್ತು ಇನ್ನಿತರ ಸೌಲಭ್ಯಗಳು ಒದಗಿಸುವಂತೆ ಖಾತ್ರಿ ಪಡಿಸಬೇಕು ಎಂದು ಡಿಜಿಸಿ ಅರ್ಜಿ ಸಲ್ಲಿಸಿದೆ. ಶಿವಲಿಂಗ ಕಂಡುಬಂದಿದೆ ಎಂದು ಹಿಂದೂಗಳು ಪ್ರತಿಪಾದಿಸಿದ ವುಜು ಕೊಳದ ಪ್ರದೇಶವನ್ನು ನಿರ್ಬಂಧಿಸುವ ಆದೇಶ ಮರುಪರಿಶೀಲಿಸುವಂತೆ ಅರ್ಜಿಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಇಬ್ಬರು ಸಾಧ್ವಿಗಳು ಮನವಿ ಸಲ್ಲಿಸಿದ್ದಾರೆ. ಕಬ್ಬಿಣದ ಗ್ರಿಲ್‌ನ ಎದುರು ಇರುವ ನಂದಿಯ ಮುಂಭಾಗದಲ್ಲಿರುವ ಗೋಡೆ ಮತ್ತು ಅವಶೇಷಗಳನ್ನು ಸ್ವಚ್ಛ ಮಾಡ, ಇದರಿಂದ ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಬಹುದು ಎಂದುಹೇಳಿದೆ .

ಶಿವಲಿಂಗ ಪತ್ತೆಯಾಗಿರುವ ಸ್ಥಳದಲ್ಲಿ ಪೂಜೆ ಮಾಡಬೇಕು-ಕೇಂದ್ರ ಸಚಿವ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ಪೂಜೆ ಶುರು ಮಾಡಬೇಕು ಎಂದು ಕೇಂದ್ರ ಸಚಿವ ಕೌಶಲ್ ಕಿಶೋರ್ ಹೇಳಿದ್ದಾರೆ.ಶಿವಲಿಂಗ ಪತ್ತೆಯಾಗಿರುವ ಕಾರಣ ಅಲ್ಲಿ ದೇವಾಲಯ ಇತ್ತು ಎಂಬುದು ಸತ್ಯವಲ್ಲವೇ ಎಂದು ಅವರು ಹೇಳಿದ್ದಾರೆ.

Published On - 1:19 pm, Thu, 19 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ