Gyanvapi mosque survey ನ್ಯಾಯಾಲಯದ ಗೌಪ್ಯತೆಯನ್ನು ಉಲ್ಲಂಘಿಸಿದ ಆರೋಪ ನಿರಾಕರಿಸಿದ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ
ಸಮೀಕ್ಷೆಯಲ್ಲಿ 'ಶಿವಲಿಂಗ' ಕಂಡುಬಂದಿದೆ ಎಂದು ಹೇಳಲಾದ ಮಸೀದಿಯೊಳಗಿನ ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸುಪ್ರೀಂಕೋರ್ಟ್ ಹೇಳಿದೆ. ಅದೇ ವೇಳೆ ಮುಸ್ಲಿಮರಿಗೆ 'ನಮಾಜ್' ಮತ್ತು "ಧಾರ್ಮಿಕ ಆಚರಣೆಗಳನ್ನು" ಮಾಡಲು ಅವಕಾಶ ನೀಡಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಸಮೀಕ್ಷೆ (Gyanvapi mosque survey) ನಡೆಸಲು ನಿಯೋಜಿಸಲಾದ ಸಮಿತಿಯಲ್ಲಿ ತಮ್ಮ ಸ್ಥಾನದಿಂದ ವಜಾಗೊಂಡಿರುವ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ (Ajay Mishra), ಸ್ಥಳೀಯ ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಹೇಳಿದರು. ಇದಕ್ಕೆಲ್ಲ ಕಾರಣ ವಿಶೇಷ ವಕೀಲ ವಿಶಾಲ್ ಸಿಂಗ್ ಎಂದು ಅವರು ದೂರಿದ್ದಾರೆ. ವಿಷಯದ ರಹಸ್ಯವನ್ನು ಬಹಿರಂಗಪಡಿಸುವ ಯಾವುದನ್ನೂ ನಾನು ಮಾಡಿಲ್ಲ. ವಕೀಲ ವಿಶಾಲ್ ಸಿಂಗ್ ಅವರ ಆರೋಪಗಳ ಕಾರಣದಿಂದ ನನ್ನನ್ನು ತೆಗೆದುಹಾಕಲಾಗಿದೆ. ಏನೇ ಆಗಿದ್ದರೂ ಇದೆಲ್ಲ ಆಗಿರುವುದು ಅವರಿಂದ ಎಂದು ಮಿಶ್ರಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಸಿಂಗ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ರವಿಕುಮಾರ್ ದಿವಾಕರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ನ್ಯಾಯಾಲಯ ನೇಮಿಸಿದ ಆಯೋಗದ ಪ್ರಕ್ರಿಯೆಗಳಿಗೆ ಮಿಶ್ರಾ ಅವರು ಸಂಪೂರ್ಣವಾಗಿ ಸಹಕರಿಸುತ್ತಿಲ್ಲ. ಅದರ ಬಗ್ಗೆ ಅವರು ಆಸಕ್ತಿ ವಹಿಸುತ್ತಿಲ್ಲ ಎಂದು ವಿಶೇಷ ವಕೀಲ ಕಮಿಷನರ್ ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ. ಮಿಶ್ರಾ ಅವರ ಜೊತೆಗಿದ್ದ ಕ್ಯಾಮರಾಮ್ಯಾನ್ ಸಮೀಕ್ಷೆಯ ಪ್ರಕ್ರಿಯೆಗಳನ್ನು ಮಾಧ್ಯಮಗಳಲ್ಲಿ ಸೋರಿಕೆ ಮಾಡಿದ್ದರಿಂದ ಅವರನ್ನು ತೆಗೆದುಹಾಕಲಾಯಿತು. ಮೇ 19 ರಂದು ವರದಿ ಸಲ್ಲಿಸುವ ಸಂದರ್ಭದಲ್ಲಿ ಸಹಾಯಕ ವಕೀಲ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಈಗ ಸಿಂಗ್ ಅವರೊಂದಿಗೆ ಬರಲಿದ್ದಾರೆ.ವಾರಣಾಸಿಯ (Varanasi) ಮಸೀದಿಯ ಮೂರು ದಿನಗಳ ಸಮೀಕ್ಷೆಯನ್ನು ಸೋಮವಾರ ಮುಕ್ತಾಯಗೊಳಿಸಿದ ಆಯೋಗವು, ಅಂತಿಮ ವರದಿಯನ್ನು ಇನ್ನೂ ಸಂಗ್ರಹಿಸಬೇಕಾಗಿರುವುದರಿಂದ ಸ್ಥಳೀಯ ನ್ಯಾಯಾಲಯದಿಂದ ಹೆಚ್ಚುವರಿ ಸಮಯ ಕೇಳಿದೆ. ಮಂಗಳವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು.
Varanasi, UP | I’ve not done anything that reveals the secrecy of the matter. I was removed because of the allegations of Advocate Vishal Singh. I will respect the Court order. Whatever has happened is only because of Vishal: Ajay Mishra, Former Court Commissioner on his removal pic.twitter.com/jIyo7eqMjL
ಇದನ್ನೂ ಓದಿ— ANI UP/Uttarakhand (@ANINewsUP) May 17, 2022
ಏತನ್ಮಧ್ಯೆ, ಸಮೀಕ್ಷೆಯಲ್ಲಿ ‘ಶಿವಲಿಂಗ’ ಕಂಡುಬಂದಿದೆ ಎಂದು ಹೇಳಲಾದ ಮಸೀದಿಯೊಳಗಿನ ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸುಪ್ರೀಂಕೋರ್ಟ್ ಹೇಳಿದೆ. ಅದೇ ವೇಳೆ ಮುಸ್ಲಿಮರಿಗೆ ‘ನಮಾಜ್’ ಮತ್ತು “ಧಾರ್ಮಿಕ ಆಚರಣೆಗಳನ್ನು” ಮಾಡಲು ಅವಕಾಶ ನೀಡಿದೆ.
ಆದಾಗ್ಯೂ, ಸ್ಥಳೀಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ ಮುಂದೆ ಮುಂದಿನ ವಿಚಾರಣೆಗೆ ತಡೆ ನೀಡುವ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸೋಮವಾರ ಕೆಳ ನ್ಯಾಯಾಲಯವು ಮಸೀದಿ ಸಂಕೀರ್ಣದೊಳಗಿನ ಪ್ರದೇಶವನ್ನು ನಿರ್ಬಂಧಿಸಲು ಆದೇಶಿಸಿತ್ತು. ಆದಾಗ್ಯೂ, ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರು, ‘ಶಿವಲಿಂಗ’ ಎಂದು ಹೇಳಿಕೊಳ್ಳುತ್ತಿರುವ ರಚನೆಯು ವಾಸ್ತವವಾಗಿ ಮಸೀದಿಯೊಳಗಿನ ಕಾರಂಜಿಯಾಗಿದೆ ಎಂದು ಹೇಳಿದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:16 pm, Tue, 17 May 22