ತಲೆಕೂದಲು ದಾನ ಮಾಡಿದ ಸಂಜನಾ ಗಲ್ರಾನಿ; ಹೊಸ ಲುಕ್​ ನೋಡಿ ಅಚ್ಚರಿ ಹೊರಹಾಕಿದ ಫ್ಯಾನ್ಸ್

ತಲೆಕೂದಲು ದಾನ ಮಾಡಿದ ಸಂಜನಾ ಗಲ್ರಾನಿ; ಹೊಸ ಲುಕ್​ ನೋಡಿ ಅಚ್ಚರಿ ಹೊರಹಾಕಿದ ಫ್ಯಾನ್ಸ್
ಸಂಜನಾ

ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ. ಸದಾ ಗ್ಲಾಮರಸ್ ಆಗಿ ಫೋಟೋ ಹಾಕುವ ಅವರ ಈ ಹೊಸ ಲುಕ್​ ಹಲವರಿಗೆ ಶಾಕ್​ ತಂದಿದೆ.

TV9kannada Web Team

| Edited By: Rajesh Duggumane

Apr 04, 2022 | 5:37 PM

ಸೆಲೆಬ್ರಿಟಿಗಳು ತಾವು ಹೇಗೆ ಕಾಣಬೇಕು ಎಂಬುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಮುಖದ ಸೌಂದರ್ಯ ಹೆಚ್ಚಲು, ಕೂದಲ ಅಂದ ಹಾಳಾಗದಂತೆ ನೋಡಿಕಳ್ಳೊಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ನಟಿ ಸಂಜನಾ ಗಲ್ರಾನಿ (Sanjjanaa Galrani) ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಸಾಕಷ್ಟು ಬ್ಯೂಟಿ ಕಾನ್ಶಿಯಸ್​ ಹೊಂದಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಖಾತೆ ಓಪನ್ ಮಾಡಿದರೆ ಸಾಕು ಇದಕ್ಕೆ ಸಾಕ್ಷಿ ಒದಗಿಸುವ ಸಾಕಷ್ಟು ಫೋಟೋಗಳು ಸಿಗುತ್ತವೆ. ಆದರೆ, ಈಗ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ತಲೆ ಕೂದಲನ್ನು ದಾನ ಮಾಡಿದ್ದು, ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ.

ಸಂಜನಾ ಗಲ್ರಾನಿ ತಮ್ಮ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ, ಯಾವುದಕ್ಕೂ ಅವರು ಅಂಜಿಲ್ಲ. ಎಷ್ಟೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಈಗ ಅವರ ಬಾಳಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ನಡೆಯುತ್ತಿವೆ. ಸಂಜನಾ ಗರ್ಭಿಣಿ ಆಗಿದ್ದು, ಶೀಘ್ರವೇ ಅವರ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ. ಈ ಕಾರಣಕ್ಕೆ ಅವರು ಕೂದಲನ್ನು ದಾನ ಮಾಡಿದ್ದಾರೆ.

‘ಸೌಂದರ್ಯ ನೋಡುವವರ ದೃಷ್ಟಿಯಲ್ಲಿದೆ. ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣಮಾಡಲು ನನ್ನ ಕೂದಲನ್ನು ದಾನ ಮಾಡಿದ್ದೇನೆ.  ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ನಂತರದಲ್ಲಿ ಜೀವನವು ಮತ್ತೆ ಸುಂದರವಾಗುತ್ತಿದೆ. ಇದಕ್ಕಾಗಿ ನಾನು ದೇವರಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಲದು. ಜೈ ಶ್ರೀ ಕೃಷ್ಣ, ಅಹಮ್​ ಬ್ರಹ್ಮಾಸ್ಮಿ’ ಎಂದಿದ್ದಾರೆ ಅವರು.

ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ. ಸದಾ ಗ್ಲಾಮರಸ್ ಆಗಿ ಫೋಟೋ ಹಾಕುವ ಅವರ ಈ ಹೊಸ ಲುಕ್​ ಹಲವರಿಗೆ ಶಾಕ್​ ತಂದಿದೆ.

ಸಂಜನಾ ಸಹೋದರಿ ನಿಶ್ಚಿತಾರ್ಥ:

ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಪರಭಾಷೆಯಲ್ಲಿ ನಿಕ್ಕಿ ಹೆಚ್ಚು ಪರಿಚಿತರಾಗಿದ್ದಾರೆ. ಅವರು ಇತ್ತೀಚೆಗೆ ಸುದ್ದಿ ಆಗಿದ್ದರು.  ಖ್ಯಾತ ನಟ ಆದಿ ಪಿನಿಸೆಟ್ಟಿ ಜೊತೆಗೆ ಹೊಸ ಬಾಳು ಆರಂಭಿಸಲು ನಿಕ್ಕಿ ಸಿದ್ಧರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರ ಅಧಿಕೃತ ಮಾಡಿದ್ದರು.

ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್​ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ

ಖ್ಯಾತ ಹೀರೋ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ

Follow us on

Related Stories

Most Read Stories

Click on your DTH Provider to Add TV9 Kannada