ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​

Girish Karnad Birth Anniversary: ನಟನಾಗಿ, ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ಗಿರೀಶ್​ ಕಾರ್ನಾಡ್​ ಅವರು ಸಕ್ರಿಯರಾಗಿದ್ದರು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​
ಗಿರೀಶ್ ಕಾರ್ನಾಡ್
Follow us
TV9 Web
| Updated By: ಮದನ್​ ಕುಮಾರ್​

Updated on: May 19, 2022 | 7:30 AM

ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್​ ಕಾರ್ನಾಡ್​ (Girish Karnad) ಅವರ ಸಾಧನೆ ಅಪಾರ. ತಮ್ಮ ನಾಟಕಗಳ ಮೂಲಕ ಅವರು ಮಹತ್ವದ ಚಿಂತನೆಗಳನ್ನು ಓದುಗರ ಹೃದಯದಲ್ಲಿ ಬಿತ್ತಿದರು. ಇಂದಿಗೂ ಅವರ ನಾಟಕಗಳು ಗಮನಾರ್ಹ ಕೃತಿಗಳಾಗಿ, ಪ್ರಸ್ತುತತೆ ಉಳಿಸಿಕೊಂಡಿವೆ. ಹಾಗಂತ ಗಿರೀಶ್​ ಕಾರ್ನಾಡ್​ ಅವರ ಪ್ರತಿಭೆ ಕೇವಲ ನಾಟಕಗಳ ಬರವಣಿಗೆಗೆ ಮಾತ್ರ ಸೀಮಿತವಲ್ಲ. ಸಿನಿಮಾ ಜಗತ್ತಿಗೂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ಅವರು ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದರು. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ ಮುಂತಾದ ಭಾಷೆಯ ಸಿನಿಮಾಗಳಲ್ಲಿ (Girish Karnad Movies) ನಟಿಸುವ ಮೂಲಕ ಜನಮೆಚ್ಚುಗೆ ಪಡೆದುಕೊಂಡರು. ಪೋಷಕ ಪಾತ್ರಗಳಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರು ಮರುಳಾದರು. ನೂರಾರು ಬಗೆಯ ಪಾತ್ರಗಳಿಗೆ ಗಿರೀಶ್​ ಕಾರ್ನಾಡ್​ ಜೀವ ತುಂಬಿದರು. ಕಲಾತ್ಮಕ, ಕಮರ್ಷಿಯಲ್​ ಎಂಬ ತಾರತಮ್ಯವಿಲ್ಲದೇ ಎಲ್ಲ ರೀತಿಯ ಸಿನಿಮಾಗಳಲ್ಲೂ ಅವರು ನಟಿಸಿದರು. 1970ರಿಂದ ಶುರುವಾದ ಅವರ ಸಿನಿಮಾ ಪಯಣ 2019ರವರೆಗೂ ನಡೆದುಬಂತು. ಅನೇಕ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅವರು​ ಕೆಲಸ ಮಾಡಿದರು. ನಟನೆಗಾಗಿ ಹಲವು ಪ್ರಶಸ್ತಿಗಳು ಅವರನ್ನು ಅರಸಿಬಂದವು. ಇಂದು (ಮೇ 19) ಗಿರೀಶ್​ ಕಾರ್ನಾಡ್ ಅವರ ಜನ್ಮದಿನದ (Girish Karnad Birthday) ಪ್ರಯುಕ್ತ, 5 ದಶಕಗಳ ಸಿನಿಮಾ ಜರ್ನಿಯ ಮೆಲುಕು ಇಲ್ಲಿದೆ..

‘ಸಂಸ್ಕಾರ’ದಿಂದ ಆರಂಭ… ಎಷ್ಟೋ ನಟರಿಗೆ, ನಿರ್ದೇಶಕರಿಗೆ ಗಿರೀಶ್​ ಕಾರ್ನಾಡ್​ ಸ್ಫೂರ್ತಿ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರಿಗೆ ಅಭಿನಯ ಕರಗತವಾಗಿತ್ತು. ನಾಟಕಗಳನ್ನು ಬರೆದು ಪ್ರಸಿದ್ಧಿ ಪಡೆದ್ದಿದ್ದ ಅವರಿಗೆ ಚಿತ್ರಕಥೆ ಬರವಣಿಗೆಯ ಕಲೆ ಕೂಡ ಸಿದ್ಧಿಸಿತ್ತು. ಒಂದಕ್ಕಿಂತ ಒಂದು ಗಮನಾರ್ಹ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಅವರು ಯಶಸ್ವಿಯಾದರು. ನಿರ್ದೇಶನ ಮತ್ತು ನಟನೆಯಲ್ಲಿ ಅವರು ತೊಡಗಿಕೊಂಡರು. ಅವರು ನಟಿಸಿದ ಮೊದಲ ಸಿನಿಮಾ ‘ಸಂಸ್ಕಾರ’ 1970ರಲ್ಲಿ ತೆರೆಕಂಡಿತು. ಯು.ಆರ್​. ಅನಂತಮೂರ್ತಿ ಅವರು ಕೃತಿ ಆಧರಿಸಿದ ಆ ಚಿತ್ರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. 5 ದಶಕಗಳ ಅವಧಿಯಲ್ಲಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದರು. ಹಲವಾರು ಸ್ಟಾರ್​ ಹೀರೋಗಳ ಜತೆ ಅವರು ತೆರೆಹಂಚಿಕೊಂಡರು.

ಮೇರು ಕೃತಿಗಳಿಗೆ ಸಿನಿಮಾ ರೂಪ ನೀಡಿದ ನಿರ್ದೇಶಕ: ಸಾಹಿತ್ಯ ಕೃತಿಗಳನ್ನು ಆಧರಿಸಿ ಗಿರೀಶ್ ಕಾರ್ನಾಡ್​ ಅವರು ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಎಸ್​.ಎಲ್​. ಭೈರಪ್ಪನವರ ‘ವಂಶ ವೃಕ್ಷ’ ಕೃತಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡುವ ಮೂಲಕ ನಿರ್ದೇಶಕನಾಗಿ ಗಿರೀಶ್​ ಕಾರ್ನಾಡ್​ ಕಾರ್ಯಾರಂಭ ಮಾಡಿದರು. ‘ಗೋಧೂಳಿ’, ‘ತಬ್ಬಲಿಯು ನೀನಾದೆ ಮಗನೆ’ ಸಿನಿಮಾಗಳು ಕೂಡ ಎಸ್​.ಎಲ್​. ಭೈರಪ್ಪ ಅವರ ಕೃತಿಯನ್ನೇ ಆಧರಿಸಿದ್ದವು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಯನ್ನು ಗಿರೀಶ್​ ಕಾರ್ನಾಡ್​ ಬೆಳ್ಳಿತೆರೆಗೆ ತಂದರು.

ಇದನ್ನೂ ಓದಿ
Image
ಶಂಕರ್ ​ನಾಗ್​ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ಗೆ ಸಾಧ್ಯವಾಗಲಿಲ್ಲ; ಕಾರಣ ಏನು?
Image
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಪ್ರಕಟ: ಐವರು ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ, 10 ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿ
Image
ಶಂಕರ್‌ನಾಗ್​ಗೆ ಆ್ಯಕ್ಸಿಡೆಂಟ್​ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್‌ ಶೂಟ್​ ಮಾಡಿದ್ವಿ; ದೊಡ್ಡಣ್ಣ
Image
National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್​ಕುಮಾರ್​​ಗೂ ಇದೆ ಸಂಬಂಧ!

ಶಂಕರ್​ನಾಗ್​, ವಿಷ್ಣುವರ್ಧನ್​ಗೆ ಮೊದಲ ಬಾರಿ ಆ್ಯಕ್ಷನ್​-ಕಟ್​: ಕನ್ನಡ ಚಿತ್ರರಂಗದಲ್ಲಿ ಶಂಕರ್​ನಾಗ್​ ಮತ್ತು ವಿಷ್ಣುವರ್ಧನ್​ ಅವರು ಅಪಾರ ಜನಪ್ರಿಯತೆ ಪಡೆದ ಹೀರೋಗಳು. ಅವರಿಗೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇ ಗಿರೀಶ್​ ಕಾರ್ನಾಡ್​. ಅವರ ನಿರ್ದೇಶನದಲ್ಲಿ ಮೂಡಿಬಂದ ‘ವಂಶ ವೃಕ್ಷ’ ಸಿನಿಮಾ ಮೂಲಕ ವಿಷ್ಣುವರ್ಧನ್​ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರು. ಶಂಕರ್​ನಾಗ್​ ಮೊದಲು ನಟಿಸಿದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾಗೆ ಗಿರೀಶ್​ ಕಾರ್ನಾಡ್​ ನಿರ್ದೇಶನ ಮಾಡಿದರು.

ಒಲಿದು ಬಂದವು ಹಲವಾರು ಪ್ರಶಸ್ತಿಗಳು: ಗಿರೀಶ್​ ಕಾರ್ನಾಡ್​ ನಿರ್ದೇಶನ ಮಾಡಿದ ಎಲ್ಲ ಸಿನಿಮಾಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ‘ವಂಶವೃಕ್ಷ’, ‘ಕಾಡು’, ‘ಒಂದಾನೊಂದು ಕಾಲದಲ್ಲಿ’ ಚಿತ್ರಗಳಿಗೆ ‘ಅತ್ಯುತ್ತಮ ಸಿನಿಮಾ’ ಫಿಲ್ಮ್​ಫೇರ್​ ಪ್ರಶಸ್ತಿ ಬಂತು. ‘ಆನಂದ ಭೈರವಿ’ ಚಿತ್ರದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತು. 10 ಬಾರಿ ರಾಷ್ಟ್ರ ಪ್ರಶಸ್ತಿ, 6 ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಹೆಗ್ಗಳಿಕೆ ಗಿರೀಶ್​ ಕಾರ್ನಾಡ್​ ಅವರಿಗೆ ಸಲ್ಲುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ