AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಪ್ರಕಟ: ಐವರು ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ, 10 ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿ

Karnataka sahitya academy award ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆ ಪರಿಗಣಿಸಿ 5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗಿದೆ. ಗೌರವ ಪ್ರಶಸ್ತಿ ಪುರಸ್ಕೃತರು ಜಿನದತ್ತ ದೇಸಾಯಿ, ಡಾ. ನಾ. ಮೊಗಸಾಲೆ ,ಡಾ. ಸರಸ್ವತಿ ಚಿಮ್ಮಲಗಿ,ಪ್ರೊ.ಬಸವರಾಜ ಕಲ್ಗುಡಿ, ಶ್ರೀ ಯಲ್ಲಪ್ಪ. ಕೆ.ಕೆ ಪುರ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಪ್ರಕಟ: ಐವರು ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ, 10 ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿ
ಡಾ. ನಾ. ಮೊಗಸಾಲೆ -ಶ್ರೀ ಜಿನದತ್ತ ದೇಸಾಯಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 31, 2022 | 7:08 PM

Share

ಬೆಂಗಳೂರು:  ಕರ್ನಾಟಕ ಸಾಹಿತ್ಯ ಅಕಾಡೆಮಿ (Karnataka sahitya academy award) 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆ ಪರಿಗಣಿಸಿ 5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗಿದೆ. ಗೌರವ ಪ್ರಶಸ್ತಿ ಪುರಸ್ಕೃತರು: ಜಿನದತ್ತ ದೇಸಾಯಿ, ಡಾ. ನಾ. ಮೊಗಸಾಲೆ , ಡಾ. ಸರಸ್ವತಿ ಚಿಮ್ಮಲಗಿ, ಪ್ರೊ.ಬಸವರಾಜ ಕಲ್ಗುಡಿ, ಶ್ರೀ ಯಲ್ಲಪ್ಪ. ಕೆ.ಕೆ ಪುರ.  10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021ನೇ ವರ್ಷದ ಸಾಹಿತ್ಯ ಶ್ರೀ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ವಿಜೇತರ ಹೆಸರುಗಳು ಇಂತಿವೆ. ಡಾ.ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್ ವೆಂಕಟೇಶ್,ಡಾ.ಚನ್ನ ಬಸವಯ್ಯ ಹಿರೇಮಠ, ಡಾ. ಮ. ರಾಮಕೃಷ್ಣ ,ಅಬ್ದುಲ್ ರಶೀದ್, ಡಾ. ವೈ.ಎಂ.ಭಜಂತ್ರಿ, ಜೋಗಿ (ಗಿರೀಶ್ ರಾವ್ ಹತ್ವಾರ್), ಮೈಸೂರು ಕೃಷ್ಣಮೂರ್ತಿ ,ಗಣೇಶ ಅಮೀನಗಡ ಮತ್ತು ಆಲೂರು ದೊಡ್ಡನಿಂಗಪ್ಪ.  ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ,ಶಾಲು, ಹಾರ ಮತ್ತು ಪ್ರಮಾಣ ಪತ್ರವನ್ನು ಹೊಂದಿರಲಿದೆ. ಈ ಬಾರಿ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿ, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಪ್ರಶಸ್ತಿ,ಸಾಹಿತ್ಯ ಪಾರಿಚಾರಿಕೆಗೆ 1 ಹಾಗೂ ಹೊರನಾಡಿನ ಸಾಧಕರಿಗೆ 1 ಪ್ರಶಸ್ತಿಯಂತೆ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಲಾಗಿದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25000 ನಗದು, ಫಲಕ,ಶಾಲು, ಹಾರ ಮತ್ತು ಪ್ರಮಾಣಪತ್ರವನ್ನು ಹೊಂದಿರಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ.

2020ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗಿದೆ. 2020ನೇ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

ಕೃತಿ ಲೇಖಕರು
ಕಾರುಣ್ಯದ ಮೋಹಕ ನವಿಲುಗಳೆ ಆರನಕಟ್ಟೆ  ರಂಗನಾಥ
ಗಾಯಗೊಂಡವರಿಗೆ ಮಂಜುಳಾ ಹಿರೇಮಠ
ಬಯಲೆಂಬೊ ಬಯಲು ಎಚ್.ಟಿ. ಪೋತೆ
ಬಂಡಲ್  ಕತೆಗಳು ಎಸ್.ಸುರೇಂದ್ರನಾಥ್
ಆರೋಹಿ ಮಂಗಳ ಟಿ.ಎಸ್
ನಿದ್ರಾಂಗನೆಯ ಸೆಳವಿನಲ್ಲಿ ಎನ್.ರಾಮನಾಥ್
ನಕ್ಷತ್ರಗಳ ಸುಟ್ಟ ನಾಡಿನಲ್ಲಿ ಭಾರತಿ ಬಿವಿ
ಗ್ರಾಮಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ  ಬಾಲಪ್ಪ ಬಿದರಿ ಕೃಷ್ಣ ಕೊಲ್ಹಾರ ಕುಲಕರ್ಣಿ
ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ ಬಸವರಾದ ಸಬರದ
ಲಿಂಗಣ್ಣ ಕವಿಯ ವರರಮ್ಯ  ರತ್ನಾಕರ ಕೆ.ರವೀಂದ್ರನಾಥ
ಮತ್ತೆ ಹೊಸಗೆಳೆಯರು ವೈ.ಜಿ. ಭಗವತಿ
ಆಧ್ಯಾತ್ಮಿಕ ಆರೋಗ್ಯ ದರ್ಶನ ಎಸ್ .ಪಿ. ಯೋಗಣ್ಣ
ಗಾಂಧೀಯ ಅರ್ಥಶಾಸ್ತ್ರ ಎಂ.ಎಂ.ಗುಪ್ತ
ಮ್ಯಾಸಬೇಡರ ಮೌಖಿಕ  ಕಥನಗಳು ಪಿ.ತಿಪ್ಪೇಸ್ವಾಮಿ ಚಳ್ಳಕೆರೆ
ದೈವಿಕ ಹೂವಿನ ಸುಗಂಧ ಕೇಶವ ಮಳಗಿ
ಶಿವಂಡೆ  ಕಡುಂತುಡಿ ಸುಧಾಕರನ್ ರಾಮಂತಳಿ
ಪದ ಸೋಪಾನ ನರಹಳ್ಳಿ ಬಾಲಸುಬ್ರಮಣ್ಯ
ಸುವರ್ಣ ಮುಖಿ ಸಿದ್ಧಗಂಗಯ್ಯ ಹೊಲತಾಳು
ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ  ಸಂಹಿತೆ ಎಸ್ ಬಿ. ಬಸೆಟ್ಟಿ

2020ನೇ ವರ್ಷದ 10 ದತ್ತಿನಿಧಿ ಬಹುಮಾನ ಪುರಸ್ಕೃತರು

ಪ್ರಕಾರ ಕೃತಿ ಲೇಖಕರು
ಕಾವ್ಯ- ಹಸ್ತ ಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ) ಬೆಳದಿಂಗಳ ಚೆಲುವು ಪದ್ಮಜಾ ಜಯತೀರ್ಥ ಉಮರ್ಜಿ
ಕಾದಂಬರಿ (ಚದುರಂಗದತ್ತಿ ನಿಧಿ ಬಹುಮಾನ) ದೊಡ್ಡತಾಯಿ ಎಂಎಸ್ ವೇದಾ
ಲಲಿತ ಪ್ರಬಂಧ (ವಿ.ಸೀತಾರಾಮಯ್ಯ ಸೋದರಿ ಇಂದಿರಾದತ್ತಿ ನಿಧಿ ಬಹುಮಾನ) ವಠಾರ ಮೀಮಾಂಸೆ ಆರತಿ ಘಟಿಕಾರ್
ಜೀವನ ಚರಿತ್ರೆ

(ಸಿಂಪಿ  ಲಿಂಗಣ್ಣ ದತ್ತಿನಿಧಿ ಬಹುಮಾನ)

ಕಾಗೆ ಮುಟ್ಟಿದ ನೀರು ಪುರುಷೋತ್ತಮ ಬಿಳಿಮಲೆ
ಸಾಹಿತ್ಯ ವಿಮರ್ಶಷೆ

(ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)

ಕುವೆಂಪು ಸ್ತ್ರೀಸಂವೇದನೆ ತಾರಿಣಿ ಶುಭದಾಯಿನಿ
ಅನುವಾದ-1 (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ) ಸೀತಾ ಪದ್ಮರಾಜ ದಂಡಾವತಿ
ಲೇಖಕರ ಮೊದಲ ಸ್ವತಂತ್ರಕೃತಿ

(ಮಧುರಚೆನ್ನ ದತ್ತಿ ನಿಧಿ ಬಹುಮಾನ )

ಕೂರ್ಗ್  ರೆಜಿಮೆಂಟ್ ಕುಶ್ವಂತ್  ಕೋಳಿಬೈಲು
ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) The Bride in the Rainy Mountains ಕೆ.ಎಂ.ಶ್ರೀನಿವಾಸ ಗೌಡ,ಜಿ.ಕೆ.ಶ್ರೀಕಂಠ ಮೂರ್ತಿ
ವೈಚಾರಿಕ/ಅಂಕಣ ಬರಹ

(ಬಿ.ವಿ. ವೀರಭದ್ರಪ್ಪ ದತ್ತಿನಿಧಿಬಹುಮಾನ)

ಸಮರಸದ  ದಾಂಪತ್ಯ ನಡಹಳ್ಳಿ ವಸಂತ
ದಾಸ ಸಾಹಿತ್ಯ (ಶ್ರೀಮತಿಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ನಿಧಿ  ಬಹುಮಾನ) ಪುರಂದರದಾಸರ ಬಂಡಾಯಪ್ರಜ್ಞೆ ಶ್ರೀನಿವಾಸ ಸಿರನೂರಕರ್

ಇದನ್ನೂ ಓದಿNew Book : ಅಚ್ಚಿಗೂ ಮೊದಲು : ‘ಧರ್ಮಯುದ್ಧ’ ಮೊಗಸಾಲೆಯವರ ಹೊಸ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ

Published On - 5:51 pm, Thu, 31 March 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ