AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rangashankara: ರಂಗಶಂಕರದಲ್ಲಿ ಏ.2ರಂದು ರಂಗಯುಗಾದಿ ‘ಪದ್ಯಕಾಲ‘

Ugadi : ಕಾಮನಬಿಲ್ಲಿನ ರಂಗನ್ನೆಲ್ಲಾ ಹೀರಿದ ಮರಗಳು ಬೀದಿಬೀದಿಗಳಲ್ಲಿ ಹೂಸುರಿಸಿ ಭುವಿಗೆ ಶರಣಾಗಿ ನಿಂತಿವೆ. ಆಕಾಶರಾಯ ಕೆಂಡವನ್ನೇ ನುಂಗಿ ಕುಳಿತಿದ್ದರೂ ಆಗಾಗ ನೆನಪಿಸಿಕೊಂಡು ತಂಗಾಳಿ ತೋರುವಷ್ಟು ಜಾಣನಾಗಿದ್ದಾನೆ. ಹೀಗಿರುವಾಗ ಇದು ಪದ್ಯಕಾಲವಲ್ಲದೆ ಇನ್ನೇನು? 

Rangashankara: ರಂಗಶಂಕರದಲ್ಲಿ ಏ.2ರಂದು ರಂಗಯುಗಾದಿ ‘ಪದ್ಯಕಾಲ‘
ಎಸ್. ಸುರೇಂದ್ರನಾಥ, ಜಯಂತ ಕಾಯ್ಕಿಣಿ, ಭಾರತಿ ಹೆಗಡೆ, ಶ್ರೀಪಾದ ಭಟ್, ಗಿರೀಶ್ ಹಂದಲಗೆರೆ, ಶುಭಾ ಎ ಆರ್
ಶ್ರೀದೇವಿ ಕಳಸದ
|

Updated on:Mar 31, 2022 | 11:42 AM

Share

ರಂಗಯುಗಾದಿ | Rangayugadi : ಪ್ರತೀ ವರ್ಷ ಯುಗಾದಿಯನ್ನು ರಂಗಶಂಕರ ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಕಾವ್ಯವನ್ನು ಸಂಭ್ರಮಿಸುತ್ತಾ ಬಂದಿದೆ. ಆದರೆ ಎರಡು ವರ್ಷಗಳಿಂದ ಕೋವಿಡ್‌ ಹಾವಳಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿಲ್ಲ. ಈ ವರ್ಷದ ಏಪ್ರಿಲ್ 2ರಂದು, ಅಂದರೆ ಯುಗಾದಿಯಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಆದಿ ಕಾವ್ಯ, ಜಾನಪದ ಕಾವ್ಯ ಮತ್ತು ಆಧುನಿಕ ಕಾವ್ಯವೆಂದು ಮೂರು ಭಾಗಗಳಲ್ಲಿ ನಡೆಸಲಾಗುತ್ತದೆ. ನಾಡಿನ ಕವಿಗಳು, ಲೇಖಕರು, ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಕಥೆಗಾರ, ಕವಿ ಜಯಂತ ಕಾಯ್ಕಿಣಿ (Jayanth Kaikini) ಅವರ ಉಪಸ್ಥಿತಿ ನಡೆಯುವ ಈ ಕಾರ್ಯಕ್ರಮದ ಪರಿಕಲ್ಪನೆ, ನಿರೂಪಣೆ ನಾಟಕಕಾರ ಸುರೇಂದ್ರನಾಥ್‌ ಎಸ್‌ (Surendranath S) ಅವರದು. ಒಂದು ಕಾರ್ಯಕ್ರಮಕ್ಕೆ ರೂ. 100 ಪ್ರವೇಶ ದರ. ದಿನದ ಮೂರು ಕಾರ್ಯಕ್ರಮಗಳಿಗೆ ರೂ. 300. ಟಿಕೆಟ್​ ರಂಗಶಂಕರದ ಕೌಂಟರಿನಲ್ಲಿಯೇ ದೊರೆಯುತ್ತವೆ.

ಈ ಎರಡು ವರ್ಷಗಳಲ್ಲಿ ಏನಾಯಿತೋ ಹೋಯಿತೋ, ಎಲ್ಲ ಅರೆಮಂಪರಿನಲ್ಲಿ ನಡೆದಂತೆ. ಹೋದದ್ದು ಮರಳೀತೇ? ಮರಳಿದ್ದು ಮೊದಲಿದ್ದ ಹಾಗೆ ಇದ್ದೀತೇ? ಇದ್ದಿದ್ದು ಹೀಗೇ ಇದ್ದೀತೇ? ಅಂತೂ ಮತ್ತೊಂದು ಯುಗಾದಿ ಬಂದಿದೆ. ಕೋಗಿಲೆ ಕೂಗಿ ಕೂಗಿ ಹೇಳುತ್ತಿದೆ. ಬೇವು ನಕ್ಷತ್ರಮೊಗ್ಗುಗಳಂಥ ಹೂಗಳನ್ನರಳಿಸಿ ತೋಳುಚಾಚುತ್ತಿದೆ. ಗಾಣದಲ್ಲಿ ಬೆಲ್ಲ ಬೇಯುತ್ತಿದೆ. ಹೊಂಗೆ ಹೂ ಹಾಸಿದೆ. ಕಾಮನಬಿಲ್ಲಿನ ರಂಗನ್ನೆಲ್ಲಾ ಹೀರಿದ ಮರಗಳು ಬೀದಿಬೀದಿಗಳಲ್ಲಿ ಹೂಸುರಿಸಿ ಭುವಿಗೆ ಶರಣಾಗಿ ನಿಂತಿವೆ. ಆಕಾಶರಾಯ ಕೆಂಡವನ್ನೇ ನುಂಗಿ ಕುಳಿತಿದ್ದರೂ ಆಗಾಗ ನೆನಪಿಸಿಕೊಂಡು ತಂಗಾಳಿ ತೋರುವಷ್ಟು ಜಾಣನಾಗಿದ್ದಾನೆ. ಹೀಗಿರುವಾಗ ಇದು ಪದ್ಯಕಾಲವಲ್ಲದೆ ಇನ್ನೇನು? ನಾದಲಯದ ವಿನಾ ನಾವು ಅರಳಿದ್ದಿದೆಯೇ? ಸಾಕಲ್ಲವಾ ಮುದುಡಿದ್ದು? ಹಾಗಿದ್ದರೆ ಏಪ್ರಿಲ್ 2ಕ್ಕೆ ಬೆಂಗಳೂರಿನ ರಂಗಶಂಕರಕ್ಕೆ ಬಂದುಬಿಡಿ.

ಕಾರ್ಯಕ್ರಮದ ವಿವರ

ಬೆಳಿಗ್ಗೆ 11.00 ಆದಿ ಕಾವ್ಯ ಚೈತ್ರಚೂತ ಲಕ್ಷ್ಮೀಶನ ಜೈಮಿನಿ ಭಾರತದ ಆಯ್ದ ಭಾಗಗಳು ವಾಚನ: ಡಾ .ಶ್ರೀಪಾದ ಭಟ್‌, ಉಷಾ ಮಣಿಪಾಲ ವ್ಯಾಖ್ಯಾನ: ಡಾ ಎಂ. ಜಿ. ಹೆಗಡೆ

ಮಧ್ಯಾಹ್ನ 3.30 ಜಾನಪದ ಕಾವ್ಯ ಮಾಯಾಜಿಂಕೆ ಪಾರ್ತಿ ಸುಬ್ಬ ವಿರಚಿತ ಯಕ್ಷಗಾನ ಪ್ರಸಂಗದ ಕೆಲವು ಹಾಡುಗಳು ಭಾಗವತರು: ಏ ಪಿ ಫಾಟಕ್‌ ಮದ್ದಳೆ: ಚಿನ್ಮಯ ಅಂಬಾರಗೋಡು ಅರ್ಥಗಾರಿಕೆ: ವಿದ್ವಾನ್ ಉಮಾಕಾಂತ ಭಟ್‌

ಸಂಜೆ 7.30 ಪದ್ಯ ಓದು ಕನ್ನಡ ಕಾವ್ಯ ವಾಚನ ಓದುವವರು: ವಸುಂಧರ ಕೆ. ಎಮ್, ನಂದಿನಿ ಹೆದ್ದುರ್ಗ, ಫಾಲ್ಗುಣ ಗೌಡ, ರಾಜಶೇಖರ ಕಂಬಾರ, ರೇಣುಕಾ ರಮಾನಂದ, ರಾಜೇಂದ್ರ ಪ್ರಸಾದ್, ದಾದಾಪೀರ್‌ ಜೈಮನ್‌, ಮೌಲ್ಯ ಸ್ವಾಮಿ, ಭಾರತಿ ಹೆಗಡೆ, ಶುಭಾ ಎ. ಆರ್‌, ವಿದ್ಯಾರಶ್ಮಿ ಪೆಲತ್ತಡ್ಕ, ಆಕರ್ಷ ರಮೇಶ್‌ ಕಮಲ, ಅಮೂಲ್ಯ ಬಿ, ಗಿರೀಶ್‌ ಹಂದಲಗೆರೆ, ಭಾಗ್ಯಜ್ಯೋತಿ ಹಿರೇಮಠ್‌.

ಇದನ್ನೂ ಓದಿ : New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್

ಇದನ್ನೂ ಓದಿ : Poetry ; ಅವಿತ ಕವಿತೆ : ಅಡಿಗೆ ಆಟದ ಕಲ್ಲು ಎಲೆಚೂರು ಹೂವಿನ ಚಟ್ನಿ ಇಂದೇ ನಿಮ್ಮ ಅಂಗೈಯಲ್ಲಿ

Published On - 11:38 am, Thu, 31 March 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ