Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್

ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯವಾಗಬೇಕು. ಆದರೆ ಸದ್ಯಕ್ಕೆ ಭಯದ ವಾತಾವರಣ ನಿವಾರಣೆಯಾಗುವ ಸನ್ನಿವೇಶ ಕಾಣೆ. ರಾಜ್ಯದಲ್ಲೂ, ದೇಶದಲ್ಲೂ ರಾಜಕೀಯವಾಗಿ ಪ್ರಸ್ತುತ ದಿವಾಳಿಯೆದ್ದಿದ್ದೇವೆ. ಯಾರನ್ನೂ ಯಾವ ಪಕ್ಷವನ್ನೂ ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ. ಹಾಗಿದ್ದ ಮೇಲೆ ಬರುವ ವರ್ಷ ಏನಾದರೂ ಬದಲಾವಣೆ ಸಾಧ್ಯ ಎಂದು ನಿರೀಕ್ಷಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್
ಕತೆಗಾರ ಎಸ್​.ಸುರೇಂದ್ರನಾಥ್
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 11:03 PM

ಹೊಸ ವರ್ಷದಲ್ಲಿ ಒಂದಿಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುವ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎನ್ನುವುದನ್ನು ಕತೆಗಾರ, ರಂಗ ನಿರ್ದೇಶಕ ಎಸ್.ಸುರೇಂದ್ರನಾಥ್ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದು ಹೀಗೆ..

ವೈಯಕ್ತಿಕವಾಗಿ ನಾನು ಹೀಗೆ ಬದಲಾಗಬೇಕು ಅಂದುಕೊಂಡಿದ್ದೇನೆ ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ. ಬದಲಾವಣೆಗಳನ್ನು ನಿರೀಕ್ಷಿಸುವ ವಯಸ್ಸು ನನ್ನದಲ್ಲ. ಆದರೆ, ನನ್ನಿಂದ ‘ಏನಾದರೂ’ ಸಾಧ್ಯವಾಗುತ್ತದೆ ಎನ್ನುವುದಾದಲ್ಲಿ ಖಂಡಿತಾ ಆ ಮಟ್ಟಿಗೆ ಆ ದಿಕ್ಕಿನಲ್ಲಿ ಬದಲಾಗಲು ಪ್ರಯತ್ನಿಸುತ್ತೇನೆ. ಈ ವರ್ಷದ ಪಿಡುಗಿನಿಂದ ಆವರಿಸಿದ ಖಿನ್ನತೆ, ಅನಿಶ್ಚಿತತೆ ಮುಂದುವರೆದರೂ ನಗಲು ಸಾಧ್ಯವಾಗಬೇಕು ಅನಿಸುತ್ತದೆ.

ಸಮಾಜ, ರಾಜ್ಯ ಅಥವಾ ದೇಶದಲ್ಲಿ ಇಂಥ ಬದಲಾವಣೆ ಆಗಬೇಕು ಎಂದು ನಿರೀಕ್ಷಿಸುತ್ತೇನೆ ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯವಾಗಬೇಕು. ಸದ್ಯದ ಭಯಭೀತ ವಾತಾವರಣ ಇದೆಯಲ್ಲಾ.. ಅದು ಸಾಮಾಜಿಕವಾಗಿರಬಹುದು, ವೈಯಕ್ತಿಕವಾಗಿರಬಹುದು – ಅದು ಇಲ್ಲವಾಗಬೇಕು. ಆದರೆ ಸದ್ಯಕ್ಕೆ ಅದು ಸಾಧ್ಯವಾಗುವ ಸನ್ನಿವೇಶ ಕಾಣೆ. ರಾಜ್ಯದಲ್ಲೂ, ದೇಶದಲ್ಲೂ ರಾಜಕೀಯವಾಗಿ ಪ್ರಸ್ತುತ ದಿವಾಳಿಯೆದ್ದಿದ್ದೇವೆ. ಯಾರನ್ನೂ ಯಾವ ಪಕ್ಷವನ್ನೂ ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ. ಹಾಗಿದ್ದ ಮೇಲೆ ಬರುವ ವರ್ಷ ಏನಾದರೂ ಬದಲಾವಣೆ ಸಾಧ್ಯ ಎಂದು ನಿರೀಕ್ಷಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ನಂಬಿಕೆಯಿಲ್ಲದೇ ಹೋದಲ್ಲಿ ಬದುಕು ದುರ್ಬರವಾಗುತ್ತದಲ್ಲವಾ? ಹಾಗಾಗಿ ಬದಲಾಗುತ್ತದೆ ಏನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ಗೆಳೆಯರಲ್ಲಿ ನಂಬಿಕೆ ಇದೆ. ಆತ್ಮೀಯರಲ್ಲಿ ನಂಬಿಕೆ ಇದೆ. ಅಂದುಕೊಂಡಿದ್ದು ಸಿಗಬಹುದೇನೋ..

ಅಂಥ ಬದಲಾವಣೆ ಸಮಾಜದಲ್ಲಿ ಕಾಣಲು ನಾನು ಏನು ಮಾಡಬಲ್ಲೆ? ಬರೆಯಬೇಕು. ನಾಟಕ ಮಾಡಬೇಕು. ಆ ಮೂಲಕ ಒಂದೈದಾರು ಜನಕ್ಕಾದರೂ ಸರಿಯೇ, ಹೇಳಬೇಕು. ಅವರನ್ನು ಮುಟ್ಟಬೇಕು. ಅಷ್ಟೇ…ಆದರೂ ‘ನಾನು’ ಅನ್ನುವುದಕ್ಕಿಂತಾ ‘ನಾವು’ ಅನ್ನುವುದೇ ಮೇಲು.