ಭಾರಿ ಮಳೆಯಿಂದ ಹೈರಾಣಾದ ಹೊರಮಾವಿನ ಸಾಯಿ ಲೇಔಟ್ ಜನ: ಶಾಶ್ವತ ಪರಹಾರ ನೀಡುವಂತೆ ಆಗ್ರಹ

ಮಳೆಯಿಂದಾಗಿ ಮನೆಯ ಶೀಟ್​ ಕುಸಿದಿದ್ದು, ವೃದ್ಧ ದಂಪತಿಯ ಬದುಕು ಕಸಿದುಕೊಂಡ ಮಳೆರಾಯ, ಮಳೆ ನಿಂತರು ಜನರ ಕಣ್ಣೀರು ಮಾತ್ರ ನಿಂತಿಲ್ಲ. ಚೂರು ಯಾಮಾರಿದ್ರು ದಂಪತಿ ಪ್ರಾಣ ಪಕ್ಷಿ ಹಾರಿ ಹೋಗ್ತಿತ್ತು. ಕುತ್ತಿಗೆ ವರೆಗೆ ನೀರು ತುಂಬಿಕೊಂಡಿದ್ದು, ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ.

ಭಾರಿ ಮಳೆಯಿಂದ ಹೈರಾಣಾದ ಹೊರಮಾವಿನ ಸಾಯಿ ಲೇಔಟ್ ಜನ: ಶಾಶ್ವತ ಪರಹಾರ ನೀಡುವಂತೆ ಆಗ್ರಹ
ಮಳೆಯಿಂದ ಹೈರಾಣಾದ ಹೊರಮಾವಿನ ಸಾಯಿ ಲೇಔಟ್ ಜನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 19, 2022 | 12:17 PM

ಬೆಂಗಳೂರು: ನಗರದಲ್ಲಿ ಭಾರಿ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಹೊರಮಾವಿನಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯಿಂದ ಹೊರಗೆ ಬರಲಾಗದ ಹಿನ್ನೆಲೆ ಜನರಿಗೆ ಬಿಬಿಎಂಪಿ ಅಧಿಕಾರಿಗಳು ಫುಡ್​ ಸಪ್ಲೈ ಮಾಡಿದ್ದಾರೆ. ಹೊರಮಾವಿನ ಸಾಯಿ ಲೇಔಟ್​ನಲ್ಲಿ ಮಳೆ ನಿಂತರು ನೀರು ಮಾತ್ರ ಕಮ್ಮಿ ಆಗಿಲ್ಲ. ಮೊನ್ನೆ ಸುರಿದ ಮಳೆಯಿಂದ ನೀರು ತುಂಬಿಕೊಂಡಿದೆ. ಇನ್ನೂ ಎರಡು ಅಡಿಯಷ್ಟು ನೀರು ನಿಂತುಕೊಂಡಿದ್ದು, ನೀರು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಮನೆಯ ನೀರಿನ ಸಂಪ್​ನಲ್ಲಿ ತುಂಬಾ ಕೊಳಚೆ ನೀರು ತುಂಬಿಕೊಂಡಿದೆ. ಬಳಕೆ ಮಾಡಲು, ಕುಡಿಯಲು ನೀರಿಲ್ಲ. ಐದು ಜನಕ್ಕೆ ಒಂದು ಬಾಟಲ್ ನೀರು ಕೊಟ್ಟಿದ್ದಾರೆ. ಯಾವುದೇ ರೀತಿಯ ವ್ಯವಸ್ಥೆ ಮಾಡಿಲ್ಲ ಎಂದು ಸಾಯಿ ಲೇಔಟ್ ನಿವಾಸಿಗಳು ಹೇಳಿದ್ದಾರೆ.

ಮಳೆಯಿಂದಾಗಿ ಮನೆಯ ಶೀಟ್​ ಕುಸಿದಿದ್ದು, ವೃದ್ಧ ದಂಪತಿಯ ಬದುಕು ಕಸಿದುಕೊಂಡ ಮಳೆರಾಯ, ಮಳೆ ನಿಂತರು ಜನರ ಕಣ್ಣೀರು ಮಾತ್ರ ನಿಂತಿಲ್ಲ. ಚೂರು ಯಾಮಾರಿದ್ರು ದಂಪತಿ ಪ್ರಾಣ ಪಕ್ಷಿ ಹಾರಿ ಹೋಗ್ತಿತ್ತು. ಕುತ್ತಿಗೆ ವರೆಗೆ ನೀರು ತುಂಬಿಕೊಂಡಿದ್ದು, ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ. ಮನೆಯ ಶೀಟ್ ಮತ್ತು ಗೋಡೆ ಕುಸಿದು ನಿರಾಶ್ರಿತರಾಗಿದ್ದಾರೆ. ಪಕ್ಕದ ಮನೆಯಲ್ಲಿ ದಂಪತಿಗಳು ವಾಸವಾಗಿದ್ದು, ರಾತ್ರಿಯಿಡೀ ಊಟ ನೀರು ಇಲ್ಲದೆ ಪರದಾಡಿದ್ದಾರೆ. ಕೇವಲ ಮನುಷ್ಯರಷ್ಟೆ ಅಲ್ಲದೆ  ಮೂಕ ಪ್ರಾಣಿಗಳ ವೇದನೆ ಕೇಳೋರಿಲ್ಲ. ಬೀದಿ ನಾಯಿಗಳಿಗೆ ಕಳೆದ 2 ದಿನಗಳಿಂದ ಊಟ ಮತ್ತು ಮಲಗಲು ಸ್ಥಳ ಇಲ್ಲ. ರಸ್ತೆಗೆ ಬಂದ್ರೆ ನೀರು ಪಾಲಾಗುವ ಭಯದಿಂದ ಶೀಟ್ ಮನೆಯ ಮೇಲೆ ಹತ್ತಿವೆ. ಸುಮಾರು 10 ರಿಂದ 20 ನಾಯಿಗಳು ಮೂಕ ವೇದನೆ ಅನುಭವಿಸಿವೆ. ಜನರಿಗೆ ಊಟ ಹಂಚುತ್ತಿದ್ದಂತೆ ನಮಗೂ ಊಟ ಬೇಕು ಎನ್ನುವಂತೆ ನಾಯಿಗಳು ಜೋರಾಗಿ ಬೊಗಳಿವೆ.

ಇದನ್ನೂ ಓದಿ: ದೇಶದ ಭದ್ರತೆಗೆ ಆತಂಕ: ಆರೋಗ್ಯ ಇಲಾಖೆಯ ಟೆಂಡರ್ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

ಇದನ್ನೂ ಓದಿ
Image
ಇಂದು ಭಾರಿ ಮಳೆ ಸಾಧ್ಯತೆ; ದಕ್ಷಿಣ ಕನ್ನಡ, ಮಂಡ್ಯ, ಮೈಸೂರು ಶಾಲೆಗಳಿಗೆ ರಜೆ ಘೋಷಣೆ
Image
ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ; ಕೆಲವೆಡೆ ಮನೆಗಳು ಜಲಾವೃತ
Image
Karnataka Rain: ಬೆಂಗಳೂರಿನಲ್ಲಿ ನಿಲ್ಲದ ಮಳೆಯ ಅಬ್ಬರ; ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ
Image
Rain Updates: ಅಸ್ಸಾಂನಲ್ಲಿ ಭಾರೀ ಮಳೆಯಿಂದ 8 ಜನ ಸಾವು; ದಕ್ಷಿಣ ಭಾರತದಲ್ಲಿ ರೆಡ್ ಅಲರ್ಟ್​ ಘೋಷಣೆ

ಸಾಯಿ ಲೇಔಟ್​ನ ಮತ್ತೋರ್ವ ನಿವಾಸಿ ಮಾತನಾಡಿದ್ದು, ಒಳಗೆ ಏನು ಸಪ್ಲೈ ಮಾಡುತ್ತಿಲ್ಲ ಸಣ್ಣ ಮಕ್ಕಳು ಇದ್ದಾರೆ. ಕುಡಿಯಲು ಹಾಲಿಲ್ಲ, ನೀರಿಲ್ಲ ತಿಂಡಿ ಇಲ್ಲ. ಪ್ರತಿ ಬಾರಿ ಮಳೆಯಲ್ಲಿ ಇದೆ ಪರಿಸ್ಥಿತಿ ಇರುತ್ತದೆ ಇಲ್ಲಿ. ಕಳೆದ ವರ್ಷ ಮಳೆಗೆ ಲಕ್ಷಾಂತರ ರುಪಾಯಿ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿತ್ತು. ನಮ್ಮ ಮನೆಯಲ್ಲಿ ಈಗಾಗಲೇ ಫುಲ್ ನೀರು ತುಂಬಿಕೊಂಡಿದೆ. ಪಕ್ಕದ ಮನೆಯಲ್ಲಿ ಬಂದು ವಾಸವಾಗಿದ್ದೆವೆ. ಸಣ್ಣ ಸಣ್ಣ ಮಕ್ಕಳಿದ್ದಾರೆ ತುಂಬಾ ಕಷ್ಟ ಆಗುತ್ತಿದೆ. ಹಾವುಗಳು ಬರ್ತಿದೆ ಹೊರಗೆ ಬರಲು ಭಯ ಆಗ್ತಿದೆ. ನೀರು ಹೋಗಲು ಯಾವುದೇ ವ್ಯವಸ್ಥೆ ಮಾಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರಿನಲ್ಲಿ ಮುಳುಗಿ ಬೈಕ್​ಗಳೆಲ್ಲ ಕೆಟ್ಟು ಹೋಗಿದೆ. ಅಡುಗೆ ಮಾಡಿಕೊಳ್ಳಕ್ಕು ಕಷ್ಟ ಆಗುತ್ತಿದೆ. ತಿಂಡಿ, ಊಟ ನೀರು ಕೊಡ್ತಿದ್ದಾರೆ. ಆದರೆ ಹಾಲು ಹಾಗೂ ಮಕ್ಕಳಿಗೆ ಬೇಕಾಗೊ ಆಹಾರ ತರಲು ನಾವೇ ಹೋಗ್ಬೇಕು. ನೀರಲ್ಲೇ ಹೊರಗೆ ಹೋಗಬೇಕು. ಕೆಟ್ಟು ನಿಂತಿರೊ ಬೈಕ್ ರೆಡಿ ಮಾಡಿಸ್ಬೇಕು. ತುಂಬನೇ ಕಷ್ಟ ಆಗ್ತಿದೆ, ಶಾಶ್ವತ ಪರಹಾರ ಬೇಕು ಎಂದು ಹೊರಮಾವು ಶ್ರೀ ಸಾಯಿ ಬಡಾವಣೆ ನಿವಾಸಿ ಅಮೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ