PSI Recruitment Scam: ಪರೀಕ್ಷಾ ಹಗರಣದಲ್ಲಿ ಬ್ರೋಕರ್​​ಗಳಿಗೂ ಹರಿದಿದೆ ಹಣದ ಹೊಳೆ

ಅಭ್ಯರ್ಥಿಗಳು, ಬ್ರೋಕರ್​ಗಳು, ನೇಮಕಾತಿ ವಿಭಾಗದ ಅಧಿಕಾರಿಗಳನ್ನು ಸಿಐಡಿ ಎಲ್ಲರ ಮ್ಯಾಪಿಂಗ್ ಮಾಡುತ್ತಿದ್ದಾರೆ. ಎಷ್ಟೋ ಭಾರಿ ಓರ್ವ ಬ್ರೋಕರ್​ಗೆ ಯಾವ ಅಭ್ಯರ್ಥಿಗೆ ಕೆಲಸ ಮಾಡಿದ್ದಿನಿ ಅನ್ನೊದೆ ಗೊತ್ತಿಲ್ಲಾ. 

PSI Recruitment Scam: ಪರೀಕ್ಷಾ ಹಗರಣದಲ್ಲಿ ಬ್ರೋಕರ್​​ಗಳಿಗೂ ಹರಿದಿದೆ ಹಣದ ಹೊಳೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 19, 2022 | 11:31 AM

ಬೆಂಗಳೂರು: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment Scam) ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿದೆ. ಓರ್ವ ಪಿಎಸ್​ಐ ಅಭ್ಯರ್ಥಿ ನೇಮಕಾತಿ ಆಗ ಬೇಕು ಅಂದ್ರೆ ಕನಿಷ್ಠ ಮೂವರು ನಾಲ್ವರು ಬ್ರೋಕರ್​ಗಳ ಮೂಲಕ ಕೆಲಸ ಆಗ್ತಿತ್ತು. ಪ್ರತಿ ಬ್ರೋಕರ್​ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತ ರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್​ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗ್ತಿತ್ತು. ಅಷ್ಟೂ ಬ್ರೋಕರ್​ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರ್ತಿತ್ತು. ನಂತರ ಒಎಂಆರ್ ಶೀಟ್ ತಿದ್ದುವುದು ಹಾಗೂ ಹೊಸ ಒಎಂಆರ್ ಶೀಟ್ ಇಡುವ ಮೂಲಕ ಕೃತ್ಯ ಎಸಗುತಿದ್ದರು. ಅಭ್ಯರ್ಥಿಗಳಿಂದ ನೇಮಕಾತಿ ವಿಭಾಗದಲ್ಲಿ ಕೆಲಸ ಆಗುವವರೆಗೆ ಹಲವರ ಕೈ ಬದಲಾವಣೆ ಆಗಿದೆ. ಹೀಗಾಗಿ ಅಭ್ಯರ್ಥಿಗಳು, ಬ್ರೋಕರ್​ಗಳು, ನೇಮಕಾತಿ ವಿಭಾಗದ ಅಧಿಕಾರಿಗಳನ್ನು ಸಿಐಡಿ ಎಲ್ಲರ ಮ್ಯಾಪಿಂಗ್ ಮಾಡುತ್ತಿದ್ದಾರೆ. ಎಷ್ಟೋ ಭಾರಿ ಓರ್ವ ಬ್ರೋಕರ್​ಗೆ ಯಾವ ಅಭ್ಯರ್ಥಿಗೆ ಕೆಲಸ ಮಾಡಿದ್ದಿನಿ ಅನ್ನೊದೆ ಗೊತ್ತಿಲ್ಲಾ.

8 ಜನ ಅರೆಸ್ಟ್, ಎಸ್ಕೇಪ್ ಆದವರಿಗಾಗಿ ತಲಾಶ್

ರಾಜ್ಯದಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮವಾಗಿದೆ ಅನ್ನೋ ಆರೋಪ ಕೇಳಿ ಬರ್ತಿದ್ದಂತೆ ಸರ್ಕಾರ ಪ್ರಕರಣವನ್ನ ಸಿಐಡಿಗೆ ವಹಿಸಿದೆ. ಕೇಸ್‌ ದಾಖಲಿಸಿಕೊಂಡು ಅಖಾಡಕ್ಕಿಳಿದ ಸಿಐಡಿ ತಂಡ, ಈ ಅಕ್ರಮದ ಕೇಂದ್ರ ಬಿಂದು ಕಲಬುರಗಿ ಅನ್ನೋದನ್ನ ಕನ್‌ಫರ್ಮ್‌ ಮಾಡಿಕೊಂಡಿತ್ತು. ಆ ಬಳಿಕ ಪರೀಕ್ಷಾ ಅಕ್ರಮ ಎಸಗಿದ್ದ ನಾಲ್ವರು ಹಾಗೂ ಮೂವರು ಪರೀಕ್ಷಾ ಮೇಲ್ವಿಚಾರಕಿಯರು ಸೇರಿದಂತೆ 8 ಮಂದಿಯನ್ನ ಅರೆಸ್ಟ್‌ ಮಾಡಿತ್ತು. ಇದ್ರ ನಡುವೆ ಪಿಎಸ್‌ಐ ಪರೀಕ್ಷಾ ಅಕ್ರಮ ನಡೆದಿರೋದು ಕಲಬುರಗಿ ನಗರದ ಗೋಕುಲ ನಗರದಲ್ಲಿರೋ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಅನ್ನೋದು ಗೊತ್ತಾಗಿದೆ. ಹೀಗಾಗಿ ಬಂಧಿತರನ್ನ ಇವತ್ತು ಜ್ಞಾನಜ್ಯೋತಿ ಶಾಲೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಲಾಯ್ತು. ಶಾಲೆಗೆ ಆಗಮಿಸಿದ ಸಿಐಡಿ ತಂಡ, ಶಾಲೆಯಲ್ಲಿನ ಕಂಪ್ಯೂಟರ್, ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿತು. ಜೊತೆಗೆ ಸಿಸಿಟಿವಿಯ ಡಿವಿಆರ್‌ನ್ನ ಕೂಡಾ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ,ಸಿಐಡಿ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ
Image
PSI Recruitment Scam: ಜ್ಞಾನಜ್ಯೋತಿ ಶಾಲೆ ಪುನರಾರಂಭ, ಶ್ರೀಧರ್ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆ
Image
PSI Recruitment Scam: ರಸ್ತೆಯಲ್ಲೇ ಡೀಲ್, ರಸ್ತೆಯಲ್ಲೇ ಅಕ್ರಮದ ಪ್ಲ್ಯಾನ್: ವಿಚಾರಣೆ ವೇಳೆ ಡೀಲ್ ರಹಸ್ಯ ಬಿಚ್ಚಿಟ್ಟ ಆರೊಪಿಗಳು
Image
PSI Recruitment Scam: ಇಲ್ಲಿವರಗೂ ಬಂಧಿಸಿದ್ದ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ: ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ ಜೈಲು ಭಾಗ್ಯ ಫಿಕ್ಸ್​!
Image
PSI Recruitment Scam: ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಕೈದಿಯಾಗಿ ಪತಿ ಮಹಾಶಯ ಎಂಟ್ರಿ! ಆದರೆ ಕಾನೂನು ಏನು ಹೇಳುತ್ತದೆ ಗೊತ್ತಾ?

ಇದನ್ನೂ ಓದಿ: Trending: ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಗಂಡುಮಕ್ಕಳಿಗೆ ಜನ್ಮನೀಡಿದ ಅವಳಿ ಸಹೋದರಿಯರು!

ಅಕ್ರಮ ನಡೆದಿರುವ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ, ಬಿಜೆಪಿ ಮುಖಂಡೆ, ದಿವ್ಯಾ ಹಾಗರಗಿಗೆ ಸೇರಿದೆ. ಈ ಅಕ್ರಮದಲ್ಲಿ ದಿವ್ಯಾ ಹಾಗರಗಿ ಕೈವಾಡದ ಶಂಕೆ ಕೂಡಾ ಇದೆ. ಹೀಗಾಗಿ ಈ ಹಿಂದೆ ದಿವ್ಯಾ ಅವರ ವಿಚಾರಣೆಯೂ ನಡೆದಿತ್ತು. ಈ ವೇಳೆ ತನಿಖೆಗೆ ಸಹಕರಿಸ್ತೀನಿ ಅಂತಾ ಹೇಳಿದ್ದ ದಿವ್ಯಾ, ಯಾವಾಗ ತಮ್ಮದೇ ಶಾಲೆಯ ಮೇಲ್ವಿಚಾರಕಿಯರು ಅರೆಸ್ಟ್‌ ಆಗ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಇದೇ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಹಾಗೂ ಇನ್ನಿಬ್ಬರು ಸಿಬ್ಬಂದಿ ಕೂಡಾ ಎಸ್ಕೇಪ್‌ ಆಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ