PSI Recruitment Scam: ಇಲ್ಲಿವರಗೂ ಬಂಧಿಸಿದ್ದ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ: ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ ಜೈಲು ಭಾಗ್ಯ ಫಿಕ್ಸ್​!

PSI Recruitment Scam: ಇಲ್ಲಿವರಗೂ ಬಂಧಿಸಿದ್ದ 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯ: ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ ಜೈಲು ಭಾಗ್ಯ ಫಿಕ್ಸ್​!
ಸಾಂದರ್ಭಿಕ ಚಿತ್ರ

ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 14, 2022 | 7:53 AM

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿತ್ತು. 32 ಜನರ ವಿಚಾರಣೆ ನಿನ್ನೆಗೆ ಮುಕ್ತಾಯವಾಗಿದೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್​! ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಗೆ ಸಿಐಡಿ ಸಿಬ್ಬಂದಿ ಬಿಟ್ಟಿದ್ದು, ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿ, ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.

ದಿವ್ಯಾ ಹಾಗರಗಿ ಮಾತು ಕೇಳಿ ಜೈಲು ಪಾಲಾದ ಶಿಕ್ಷಕಿರು

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಕಿಂಗ್​ಪಿನ್ ಕಾಶಿನಾಥ ಮತ್ತು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾತು ನಂಬಿ ಅಕ್ರಮಕ್ಕೆ ನೆರವಾಗಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಶಿಕ್ಷಕಿಯರು ಪ್ರಸ್ತುತ ಕಲಬುರ್ಗಿ ಜಿಲ್ಲಾ ಕಾರಾಗೃಹದಲ್ಲಿ ಪರದಾಡುತ್ತಿದ್ದಾರೆ. ಪಿಎಸ್ಐ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯರರಾಗಿ ಕೆಲಸ ಮಾಡಿದ್ದ ಸುಮಾ, ಸಿದ್ದಮ್ಮ, ಅರ್ಚನಾ, ಸುನಿತಾ ಅವರನ್ನು ಬಂಧಿಸಲಾಗಿದೆ. ತಿಂಗಳಿಗೆ ಐದರಿಂದ ಎಂಟು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದರು. ಸಿಬ್ಬಂದಿ ಮೂಲಕವೇ ಒಎಂಆರ್ ಶೀಟ್​ನಲ್ಲಿ ಕಾಶಿನಾಥ ಉತ್ತರ ತುಂಬಿಸಿದ್ದ. ಇವರ ಮಾತು ಕೇಳಿ ಅಕ್ರಮಕ್ಕೆ ನೆರವಾಗಿದ್ದ ಶಿಕ್ಷಕಕಿಯರು ಇದೀಗ ಜೈಲು ಪಾಲಾಗಿದ್ದಾರೆ.

ಅಕ್ರಮದಲ್ಲಿ ಸಿಕ್ಕು ಬಿದ್ದು ಜೈಲು ಸೇರಿದ ಕಾರಣಕ್ಕೆ ಒಬ್ಬ ಶಿಕ್ಷಕಿಯ ಮದುವೆಯೇ ಮುರಿದು ಬಿದ್ದಿದೆ. ನಿಶ್ಚಿತಾರ್ಥದ ನಂತರ ಜೈಲು ಸೇರಿದ ಕಾರಣ ವರ ಮದುವೆ ರದ್ದುಪಡಿಸಿದ್ದಾನೆ. ಗಂಡನಿಂದ ದೂರವಾಗಿ 13 ವರ್ಷದ ಮಗನೊಂದಿಗೆ ಜೀವಿಸುತ್ತಿದ್ದ ಇನ್ನೊಬ್ಬ ಶಿಕ್ಷಕಿ ಪರದಾಡುತ್ತಿದ್ದಾರೆ. ಬಂಧಿತರಾದವರಲ್ಲಿ ಬಹುತೇಕರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶಿಕ್ಷಕಿ ಸಿದ್ದಮ್ಮಗೆ ಜಾಮೀನು ಸಲ್ಲಿಸುವವರು ಯಾರೂ ಇಲ್ಲ. ಸ್ಕೂಲ್​ಗೆ ಹೋಗಿ ಸಂಜೆ ಬರ್ತಿನಿ ಎಂದು ಮಗನಿಗೆ ಹೇಳಿ ಬಂದ ಸಿದ್ದಮ್ಮ ಜೈಲು ಸೇರಿ ಒಂದು ತಿಂಗಳಾಗಿದೆ. ನಿತ್ಯವೂ ಮಗನ ನೆನೆದು ಜೈಲಿನಲ್ಲಿ ಶಿಕ್ಷಕಿ‌ ಕಣ್ಣೀರಿಡುತ್ತಿದ್ದಾರೆ. ಇವರಿಗೆ ಕಾನೂನು ನೆರವು ಒದಗಿಸಲು, ಜಾಮೀನು ಕೊಡಿಸಲೂ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada