ಮೆಟ್ರಿಕ್ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಪಾಸಾಗಿ ತೋರಿಸಿದ ಕೊಪ್ಪಳ ಹುಡುಗ ಖುಷಿಯಿಂದ ಮಳೆಯಲ್ಲಿ ಹುಚ್ಚೆದ್ದು ಕುಣಿದ

ಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಬರೀ ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ. ಅದನ್ನೆಲ್ಲ ಅವನು ಈ ಜನ್ಮದಲ್ಲಿ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಬಿಟ್ಟಿದ್ದಾನೆ.

ಮೆಟ್ರಿಕ್ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಪಾಸಾಗಿ ತೋರಿಸಿದ ಕೊಪ್ಪಳ ಹುಡುಗ ಖುಷಿಯಿಂದ ಮಳೆಯಲ್ಲಿ ಹುಚ್ಚೆದ್ದು ಕುಣಿದ
| Edited By: Arun Kumar Belly

Updated on: May 19, 2022 | 9:59 PM

Koppal: ಖುಷಿ ಅಂದ್ರೆ ಇದು ಮಾರಾಯ್ರೇ! 16-ವರ್ಷದ ಬಾಲಕ ಸಂತೋಷ ತಾಳಲಾರದೆ ಕುಣಿಯುತ್ತಿದ್ದಾನೆ. ಕಾರಣವೇನು ಗೊತ್ತಾ? ಅವನು ಎಸ್ ಎಸ್ ಎಲ್ ಸಿ (SSLC) ಪರೀಕ್ಷೆಯಲ್ಲಿ ಪಾಸಾಗಿದ್ದಾನೆ! ಬರೀ ಪಾಸಾಗಿದ್ದಕ್ಕೆ ಅಷ್ಟು ಸಂತೋಷವಾ ಅಂತ ಪ್ರಶ್ನಿಸಬೇಡಿ. ‘ನೀನು ಈ ಜನ್ಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗಲಾರೆ!’ ಅಂತ ಅವನ ಮನೆಯವರೆಲ್ಲ ಹೇಳುತ್ತಿದ್ದರಂತೆ. ಕೋವಿಡ್ ಪಿಡುಗಿನ (pandemic) ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಮಕ್ಕಳು ಹೇಗೆ ಓದತ್ತಿದ್ದಾರೆ, ಎಷ್ಟು ಓದುತ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ. ಅನೇಕ ಮಕ್ಕಳು ಈ ವರ್ಷ ಪಾಸಾಗಲಾರೆವು ಎಂಬ ಮನೋಭಾವದಂದಲೇ ಪರೀಕ್ಷೆಗಳಿಗೆ ಹಾಜರಾಗಿದ್ದರು. ಅಂಥವರಲ್ಲಿ ಈ ಹುಡುಗ ಕೊಪ್ಪಳ ಜಿಲ್ಲೆಯ ಕಾತರಕಿ ಗ್ರಾಮದ ಶಿವಕುಮಾರ (Shuvakumar) ಕೂಡ ಒಬ್ಬ.

ನಮಗೆ ಗೊತ್ತಿದೆ. ಕೆಲ ಮಕ್ಕಳು 625 ಕ್ಕೆ 620 ಅಂಕ ಪಡೆದರೂ ದುಃಖಿಸುತ್ತಾರೆ. ರ್ಯಾಂಕ್ ಕೈತಪ್ಪಿದ್ದಕ್ಕೆ ಪರಿತಪಿಸುತ್ತಾರೆ. ಕೆಲವರು ಡಿಸ್ಟಿಂಕ್ಷನ್ ಬರಲಿಲ್ಲ ಅಂತ ಗೋಳಾಡುತ್ತಾರೆ. ಪ್ರಥಮ ದರ್ಜೆಯಲ್ಲಿ ಪಾಸಾಗಲಿಲ್ಲ ತಮ್ಮನ್ನು ತಾವು ಶಪಿಸಿಕೊಳ್ಳುವವರೂ ಇದ್ದಾರೆ.

ಆದರೆ ನಮ್ಮ ಹೀರೋ ನೋಡಿ ಮಾರಾಯ್ರೇ. ಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಬರೀ ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ. ಅದನ್ನೆಲ್ಲ ಅವನು ಈ ಜನ್ಮದಲ್ಲಿ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಬಿಟ್ಟಿದ್ದಾನೆ.

ಅದೇನೆ ಇರಲಿ ಅವನ ಬದುಕಿನ ಧೋರಣೆ ಇಷ್ಟವಾಗುತ್ತದೆ. ನಮಗಿರುವಷ್ಟರಲ್ಲಿ ಸಂತೃಪ್ತಿ ಕಂಡುಕೊಳ್ಳುವ ಧೋರಣೆ. ಸುರಿಯುತ್ತಿರುವ ಮಳೆ ಲೆಕ್ಕಿಸದೆ ಮೈ ಮರೆತು ಕುಣಿಯುತ್ತಿರುವ ಶಿವಕುಮಾರನ ಮುಂದಿನ ಬಾಳು ಹಸನಾಗಲಿ.

ಇದನ್ನೂ ಓದಿ:    SSLC Result: ಬಡತನ ಮೆಟ್ಟಿನಿಂತು ಸಾಧನೆ ಮಾಡಿದ 1st Rank ಅಮಿತ್ ಮಾದರ: ಕಟ್ಟಿಕೊಂಡಿರುವ ಕನಸಾದರೂ ಏನು ಗೊತ್ತಾ?  

Follow us
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ
‘ನನ್ನ ವಿಚಾರಕ್ಕೆ ಬರಲೇಬೇಡಮ್ಮ’; ಸಂಗೀತಾ ವಿರುದ್ಧ ಸಿಡಿದೆದ್ದ ತುಕಾಲಿ
‘ನನ್ನ ವಿಚಾರಕ್ಕೆ ಬರಲೇಬೇಡಮ್ಮ’; ಸಂಗೀತಾ ವಿರುದ್ಧ ಸಿಡಿದೆದ್ದ ತುಕಾಲಿ
Bomb Threats to Schools; ಪೋಷಕರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು: ಅಶೋಕ
Bomb Threats to Schools; ಪೋಷಕರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು: ಅಶೋಕ