Kulfi Recipes:ಬೇಸಿಗೆಯಲ್ಲಿ ದಾಹ ನೀಗಿಸಲು 30 ನಿಮಿಷದಲ್ಲಿ ತಯಾರಿಸಬಹುದಾದ ಕುಲ್ಫಿಗಳ ರೆಸಿಪಿ ಇಲ್ಲಿದೆ

Kulfi Recipe: ಬೇಸಿಗೆ( Summer)ಯಲ್ಲಿ ನೀರಿನ ದಾಹ ನೀಗಿಸಲು ನೀವು ಮನೆಯಲ್ಲಿಯೇ ಸಿದ್ಧಪಡಿಸಬಹುದಾದ ಐದು ಕುಲ್ಫಿ(Kulfi)ಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ. ಹೆಚ್ಚಿಗೆ ಸಾಮಾಗ್ರಿಗಳೂ ಬೇಕಾಗಿಲ್ಲ. ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ಮಾಡಬಹುದು. ಮಕ್ಕಳಿಗೂ ಇಷ್ಟ ವಾಗುತ್ತದೆ. ಹೆಲ್ತಿ ಇದು ಆರೋಗ್ಯಕ್ಕೂ ಒಳ್ಳೆಯದು.

Kulfi Recipes:ಬೇಸಿಗೆಯಲ್ಲಿ ದಾಹ ನೀಗಿಸಲು 30 ನಿಮಿಷದಲ್ಲಿ ತಯಾರಿಸಬಹುದಾದ ಕುಲ್ಫಿಗಳ ರೆಸಿಪಿ ಇಲ್ಲಿದೆ
Kulfi
Follow us
TV9 Web
| Updated By: ನಯನಾ ರಾಜೀವ್

Updated on: May 19, 2022 | 8:00 AM

ಬೇಸಿಗೆ( Summer)ಯಲ್ಲಿ ನೀರಿನ ದಾಹ ನೀಗಿಸಲು ನೀವು ಮನೆಯಲ್ಲಿಯೇ ಸಿದ್ಧಪಡಿಸಬಹುದಾದ ಐದು ಕುಲ್ಫಿ(Kulfi)ಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ. ಹೆಚ್ಚಿಗೆ ಸಾಮಾಗ್ರಿಗಳೂ ಬೇಕಾಗಿಲ್ಲ. ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ಮಾಡಬಹುದು. ಮಕ್ಕಳಿಗೂ ಇಷ್ಟ ವಾಗುತ್ತದೆ. ಹೆಲ್ತಿ ಇದು ಆರೋಗ್ಯಕ್ಕೂ ಒಳ್ಳೆಯದು.

ಅರಿಶಿನ ಕುಲ್ಫಿ -1.5 ಲೀಟರ್ ಕೆನೆಯುಕ್ತ ಹಾಲು – 20 ಗ್ರಾಂ ತಾಜಾ ಅರಿಶಿನ – 300 ಗ್ರಾಂ ಸಕ್ಕರೆ

ವಿಧಾನ ಹೇಗಿದೆ? ಹಾಲನ್ನು ಚೆನ್ನಾಗಿ ಕುದಿಸಿ, ಅದಕ್ಕೆ ತಾಜಾ ಅರಿಶಿನ, ಸಕ್ಕರೆ ಸೇರಿಸಿ ಮತ್ತು ಹಾಲು ಕಾಲು ಭಾಗ ಬರುವಷ್ಟು ಕುದಿಯಲು ಬಿಡಿ. ನಂತರ ಮಿಶ್ರಣವನ್ನು ಸಿಲಿಕಾನ್ ಕುಲ್ಫಿ ಅಚ್ಚುಗಳಲ್ಲಿ ಸುರಿಯಿರಿ. 4 ಗಂಟೆಗಳ ಕಾಲ ಫ್ರೀಜರ್​ನಲ್ಲಿಟ್ಟು ನಂತರ ತಿನ್ನಿ.

ಲಿಚಿ ರಾಬ್ರಿ ಕುಲ್ಫಿ ನೀವು ಲಿಚಿ ಐಸ್ ಕ್ರೀಮ್ ಅನ್ನು ತಿಂದಿದ್ದರೆ ಒಮ್ಮೆ ಲಿಚಿ ಕುಲ್ಫಿಯನ್ನು ಸಹ ಟ್ರೈ ಮಾಡಿ. ಇದು ಕೂಡ ಮಾಡುವುದು ಸುಲಭವಾಗಿದ್ದು, 30 ನಿಮಿಷಗಳಲ್ಲಿ ಕುಲ್ಫಿ ತಯಾರಿರುತ್ತದೆ. ಬೇಕಿರುವ ಸಾಮಾಗ್ರಿ

– 1 ಲೀಟರ್ ಹಾಲು -100 ಗ್ರಾಂ ಖೋವಾ – 100 ಮಿಲಿಲೀಟರ್ ಲಿಚಿ ಜ್ಯೂಸ್ – 200 ಗ್ರಾಂ ಕತ್ತರಿಸಿದ ಲಿಚಿ – 1/2 ಕಪ್ ಸಕ್ಕರೆ – 4 ಹನಿಗಳು ಕೇವ್ರಾ ನೀರು – 1 ಟೀಸ್ಪೂನ್ ಪಿಸ್ತಾ (ಕತ್ತರಿಸಿದ) -1 ಚಮಚ ಗೋಡಂಬಿ ಬೀಜಗಳು (ಕತ್ತರಿಸಿದ) -1 ಚಮಚ ಬಾದಾಮಿ

ವಿಧಾನ ಲಿಚಿ ಹಣ್ಣನ್ನು ನುಣ್ಣಗೆ ಪೇಸ್ಟ್ ಮಾಡಿ ,ಸೋಯಿಸಿಕೊಳ್ಳಿ. ನಂತರ ಡ್ರೈ ಪ್ರೂಟ್ಸ್ ಗಳನ್ನು ಸಣ್ಣ ಕತ್ತರಿಸಿ ಪಕ್ಕಕ್ಕೆ ಇರಿಸಿ. ಕಡಾಯಿಯಲ್ಲಿ ಹಾಲನ್ನು ಬಿಸಿ ಮಾಡಿ ಇವುಗಳನ್ನು ಬೆರೆಸಿ, ಚೆನ್ನಾಗಿ ಕುದಿಸಿ. ಈಗ ತುರಿದ ಖೋಯಾ ಸೇರಿಸಿ ಮತ್ತು 2-3 ನಿಮಿಷ ಬೇಯಿಸಿ ಮತ್ತು ನಂತರ ಲಿಚಿ ರಸವನ್ನು ಸೇರಿಸಿ. ಸಕ್ಕರೆ, ಕೇವ್ರಾ ನೀರಿನ ಹನಿಗಳನ್ನು ಬೆರೆಸಿ ಮತ್ತು ಇನ್ನೊಂದು 2/3 ನಿಮಿಷ ಬೇಯಿಸಿ ಮತ್ತು ಅದನ್ನು ತಣ್ಣಗಾಗಿಸಿ ನಂತರ ಕತ್ತರಿಸಿದ ಲಿಚಿಯನ್ನು ಸೇರಿಸಿ ಈ ಮಿಶ್ರಣವನ್ನು ಕುಲ್ಫಿ ಅಚ್ಚುಗಳಿಗೆ ವರ್ಗಾಯಿಸಿ ಮತ್ತು ಫ್ರೀಜರ್‌ನಲ್ಲಿ ಇಟ್ಟು ಬಳಿಕ ಸೇವಿಸಿ

ಮಸಾಲೆಯುಕ್ತ ಕಾಫಿ ಕುಲ್ಫಿ ತಯಾರಿಸಲು ಬೇಕಿರುವ ವಸ್ತುಗಳು ಹೀಗಿವೆ. 1/2 ಲೀಟರ್ ಹಾಲು, 1/2 ಕಪ್ ಕೆನೆ, 1/2 ಕಪ್ ಮಂದ ಹಾಲು, 1 ಟೀಸ್ಪೂನ್ ಕಾಫಿ, 2 ಏಲಕ್ಕಿ, 1 ತುಂಡು ದಾಲ್ಚಿನ್ನಿ, 2-3 ಸ್ಟಾರ್ ಸೋಂಪು 1 ಟೀಸ್ಪೂನ್ ಕತ್ತರಿಸಿದ ಬಾದಾಮಿ ಸ್ಟ್ರಾಬೆರಿ ಇನ್ಫ್ಯೂಸ್ಡ್ ಕುಲ್ಫಿ ಇದು ಹಣ್ಣಿನ ಅಂಶ ಒಳಗೊಂಡ ಮತ್ತೊಂದು ಕುಲ್ಫಿ ಪಾಕವಿಧಾನ. ಬೇಕಾಗಿರುವ ಪದಾರ್ಥ – 1/2 ಗಟ್ಟಿ ಹಾಲು, 400 ಗ್ರಾಂ ಕಂಡೆನ್ಸಡ್ ಮಿಲ್ಕ್, 1/2 ಕಪ್ ಕೆನೆ, 1 1/2 ಕಪ್ ಸ್ಟ್ರಾಬೆರಿ ಪ್ಯೂರಿ, 2-5 ಟೀಸ್ಪೂನ್ ಪುಡಿ ಸಕ್ಕರೆ, 1/4 ಟೀಸ್ಪೂನ್ ಏಲಕ್ಕಿ 2 ಚಮಚ ಸಕ್ಕರೆ, ಜೇನುತುಪ್ಪ ಅಥವಾ ಮೇಪಲ್ ಸಿರಪ್

ವಿಧಾನ ಹಾಲು ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ ನಂತರ ಇದಕ್ಕೆ ಮಂದವಾದ ಹಾಲು, ಫ್ರೆಶ್ ಕ್ರೀಮ್ ಸೇರಿಸಿ ಮಿಶ್ರಣ ಮಾಡಿ. ನಂತರ ಏಲಕ್ಕಿ ಪುಡಿ, ಸ್ಟ್ರಾಬೆರಿ ಪ್ಯೂರೀ, ಸಕ್ಕರೆಯನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣವಾಗಲು ಬಿಡಿ. ಕೊನೆಯದಾಗಿ ಮಿಶ್ರಣವನ್ನು ಕುಲ್ಫಿ ಅಚ್ಚುಗಳಿಗೆ ಸುರಿದು ಪ್ರಿಡ್ಜ್ ನಲ್ಲಿಡಿ. ವಿಧಾನ ಬಾಣಲೆಯಲ್ಲಿ ಹಾಲನ್ನು ಮಂದವಾಗುವವರೆಗೂ ಕುದಿಸಿ. ನಂತರ ಇದಕ್ಕೆ ಟೋನ್ಡ್ ಹಾಲು, ಕೆನೆ, ಕಾಫಿ ಪುಡಿ ಸೇರಿಸಿ ಮತ್ತು 2 ನಿಮಿಷಗಳ ಕಾಲ ಮಿಕ್ಸ್ ಮಾಡಿ. ಅಂತಿಮವಾಗಿ ಏಲಕ್ಕಿ, ದಾಲ್ಚಿನ್ನಿ, ಸ್ಟಾರ್ ಸೋಂಪು ಮತ್ತು ಕತ್ತರಿಸಿದ ಬಾದಾಮಿ ಬೀಜಗಳನ್ನು ಸೇರಿಸಿ. ಕುಲ್ಫಿ ಮಿಶ್ರಣವನ್ನು ಒಂದು ಗಂಟೆ ತಣ್ಣಗಾಗಲು ಬಿಡಿ ನಂತರ ಪ್ರಿಡ್ಜ್ ನಲ್ಲಿಟ್ಟು ಕೋಲ್ಡ್ ಕುಲ್ಫಿಯನನ್ನು ಸವಿಯಿರಿ.

ಅಲ್ಫೊನ್ಸೊ ಮತ್ತು ಕ್ರ್ಯಾನ್‌ಬೆರಿ ಕುಲ್ಫಿ ಬೇಕಿರುವ ಸಾಮಾಗ್ರಿ -500 ಗ್ರಾಂ ಅಲ್ಫೋನ್ಸೊ ಮಾವು – 100 ಗ್ರಾಂ ಅಲ್ಫೋನ್ಸೊ ಮಾವಿನ ಪ್ಯೂರಿ – 4 ಮಿಲಿ ನಿಂಬೆ ರಸ – 3 ಗ್ರಾಂ ತುರಿದ ನಿಂಬೆ – 60 ಗ್ರಾಂ ಒಣಗಿದ ಕ್ರ್ಯಾನ್ಬೆರಿ

ವಿಧಾನ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ. ಮಾವಿನ ಹಣ್ಣಿನ ಪ್ಯೂರಿ, ನಿಂಬೆ ರಸ, ಕ್ರ್ಯಾನ್‌ಬೆರಿ ಮತ್ತು ತುರಿದ ನಿಂಬೆ ರುಚಿಗೆ ತಕ್ಕಷ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್ ಗಳಿಗೆ ಸುರಿಯಿರಿ ಮತ್ತು ಡೀಪ್ ಫ್ರೀಜರ್‌ನಲ್ಲಿ ಸುಮಾರು 2 ಗಂಟೆಗಳ ಕಾಲ ಇರಿಸಿದರೆ ರುಚಿಯಾದ ಕುಲ್ಫಿ ರೆಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್