ಮಳೆಯಿಂದ ಬೆಂಗಳೂರಿನ ನಿವಾಸಿಗಳು ಪಡುತ್ತಿರುವ ಬವಣೆಗೆ ಯಡಿಯೂರಪ್ಪನವರಿಂದ ಸಮರ್ಪಕ ಉತ್ತರ ಸಿಗಲಿಲ್ಲ

ಮಳೆಯಿಂದ ಬೆಂಗಳೂರಿನ ನಿವಾಸಿಗಳು ಪಡುತ್ತಿರುವ ಬವಣೆಗೆ ಯಡಿಯೂರಪ್ಪನವರಿಂದ ಸಮರ್ಪಕ ಉತ್ತರ ಸಿಗಲಿಲ್ಲ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 18, 2022 | 11:02 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಾವೃತಗೊಂಡಿರುವ ಪ್ರದೇಶಗಳ ಪರಿಶೀಲನೆ ನಡೆಸಿ ಹಾನಿಗೊಳಗಾದ ಮನೆಗಳಿಗೆ ರೂ. 25,000 ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆಂದು ಅವರು ಹೇಳುತ್ತಾರೆ. ಪರಿಹಾರ ನೀಡುವುದು ಈ ಸಮಸ್ಯೆಗೆ ಪರಿಹಾರ ಅಲ್ಲ ಅನ್ನೋದು ನಮ್ಮ ನಾಯಕರಿಗೆ ಅರ್ಥವಾಗದಿರುವುದು ಖೇದಕರ ಸಂಗತಿ.

Bengaluru:  ಮಂಗಳವಾರ ರಾತ್ರಿ ಸುರಿದ ಮಳೆ ಬೆಂಗಳೂರು ನಗರವನ್ನು ಮತ್ತೊಮ್ಮೆ ನರಕವಾಗಿಸಿದೆ. ಹಲವಾರು ಬಡಾವಣೆಗಳು ಜಲಾವೃತ! ದ್ವೀಪಗಳಾಗಿ ಪರಿವರ್ತನೆಗೊಂಡ ಪ್ರದೇಶಗಳ ಪೈಕಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವಾರು ಪ್ರತಿಷ್ಠಿತರು ವಾಸಮಾಡುವ ಡಾಲರ್ಸ್ ಕಾಲೋನಿ (Dollar’s Colony) ಸಹ ಸೇರಿದೆ. ಹೊರಮಾವು (Horamavu) ಪ್ರದೇಶವನನ್ನು ನಾವು ದಿನವಿಡೀ ತೋರಿಸಿದ್ದೇವೆ. ಬೆಂಗಳೂರು ನಗರದ ಸ್ಥಿತಿಯ ಮತ್ತು ಉಂಟಾಗಿರುವ ಹಾನಿಯ ಬಗ್ಗೆ ಟಿವಿ ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಕಿರಣ್ ಹನಿಯಡ್ಕ ಯಡಿಯೂರಪ್ಪನವರನ್ನು ಬುಧವಾರ ವಿಧಾನ ಸೌಧದಲ್ಲಿ ಮಾತಾಡಿಸಿದರು. ವರದಿಗಾರ ನೇರವಾದ ಪ್ರಶ್ನೆಯನ್ನು ಕೇಳಿದರು. ಬಿ ಎಸ್ ವೈ ಮುಖ್ಯಮಂತ್ರಿಯಾಗಿದ್ದಾಗಲೂ ಮಳೆ ಇಂಥ ಅವಾಂತರಗಳನ್ನು ಸೃಷ್ಟಿಸಿತ್ತು. ಆಗ ಅವರು ಹೋಗಿ ಪರಿಶೀಲನೆ ನಡೆಸಿದ್ದರು. ಅವರು ಆಗ ಭೇಟಿ ನೀಡಿದ್ದ ಸ್ಥಳಗಳೇ ಈಗ ಐಲ್ಯಾಂಡ್ ಗಳಾಗಿ ಮಾರ್ಪಟ್ಟಿವೆ. ಅಂದರೆ ಅಲ್ಲಿಂದ ಇಲ್ಲೀವರೆಗೆ ಯಥಾಸ್ಥಿತಿ ಮುಂದುವರೆದಿದೆ.

ಯಡಿಯೂರಪ್ಪನವರಿಂದ ಸಮರ್ಪಕ ಉತ್ತರ ಬರಲಿಲ್ಲ. ದೂಷಣೆಯನ್ನು ಅವರು ಮಳೆ ಮೇಲೆ ಹಾಕುತ್ತಾರೆ. ಅನಿರೀಕ್ಷಿತವಾಗಿ ಮಳೆ ಸುರಿದಿರುವುದರಿಂದ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಭಾರೀ ಅನಾಹುತಗಳಾಗಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಾವೃತಗೊಂಡಿರುವ ಪ್ರದೇಶಗಳ ಪರಿಶೀಲನೆ ನಡೆಸಿ ಹಾನಿಗೊಳಗಾದ ಮನೆಗಳಿಗೆ ರೂ. 25,000 ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆಂದು ಅವರು ಹೇಳುತ್ತಾರೆ. ಪರಿಹಾರ ನೀಡುವುದು ಈ ಸಮಸ್ಯೆಗೆ ಪರಿಹಾರ ಅಲ್ಲ ಅನ್ನೋದು ನಮ್ಮ ನಾಯಕರಿಗೆ ಅರ್ಥವಾಗದಿರುವುದು ಖೇದಕರ ಸಂಗತಿ.

ಪರಿಹಾರ ಘೋಷಿಸುವಂತೆ ತಾವೇನೂ ಮುಖ್ಯಮಂತ್ರಿಗಳಿಗೆ ಹೇಳಿಲ್ಲ, ಅದು ಅವರ ಸುಪರ್ದಿಗೆ ಬಿಟ್ಟ ವಿಚಾರ ಎಂದು ಹೇಳುವ ಮಾಜಿ ಮುಖ್ಯಮಂತ್ರಿಗಳು ಹೇಳಿ ಅವಸರದಲ್ಲಿ ಅಲ್ಲಿಂದ ನಡೆಯುತ್ತಾರೆ.

ಇದನ್ನೂ ಓದಿ:   Bengaluru Rains: ಕಾಮಾಕ್ಯ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಕೊಚ್ಚಿ ಹೋದ ವಾಹನಗಳು