ಸಿಲಿಕಾನ್ ಸಿಟಿಯಲ್ಲಿ ಎಲ್ಲದಕ್ಕೂ ಸಲ್ಯೂಶನ್​ಗಳಿವೆ, ಆದರೆ ಬಡಾವಣೆಗಳಿಗೆ ನುಗ್ಗುವ ಮಳೆನೀರು ತಡೆಯಲು ಯಾವುದೇ ಸಾಫ್ಟ್​ವೇರ್ ಇಲ್ಲ!

ಇಡೀ ಬಡಾವಣೆ ಜಲಾವೃತ. ಮನೆಗಳ ಮುಂದೆ ಪಾರ್ಕ್ ಮಾಡಿರುವ ವಾಹನಗಳು ಮುಳುಗಡೆಯಾಗಿವೆ. ಮನೆಗಳಲ್ಲಿ ವಾಸ ಮಾಡುವ ಜನರಂತೂ ಹೊರಗೆ ಬರೋದು ಸಾಧ್ಯವಿಲ್ಲ. ಅಗತ್ಯ ವಸ್ತುಗಳನ್ನು ತಂದುಕೊಳ್ಳುವುದು ದೂರದ ಮಾತು. ಕೋರ್ಟ್ ಕಚೇರಿಗಳಿಗೆ ಹೋಗುವವರು ಬಲವಂತದ ರಜೆ ತೆಗೆದುಕೊಂಡು ಮನೆಯಲ್ಲಿ ಉಳಿದುಬಿಟ್ಟರು.

TV9kannada Web Team

| Edited By: Arun Belly

May 18, 2022 | 8:53 PM

ಬೆಂಗಳೂರು: ನಮ್ಮ ಬೆಂಗಳೂರು ನಿಸ್ಸಂದೇಹವಾಗಿ ವಿಶ್ವದ ಪ್ರಮುಖ ನಗರಗಳಲ್ಲಿ ಒಂದೆನಿಸಿಕೊಂಡಿದೆ. ಸಿಲಿಕಾನ್ ವ್ಯಾಲಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ (Garden City), ರಿಟೈರ್ ಅದವರ ಸ್ವರ್ಗ-ಕೆಂಪೇಗೌಡರು (Kempegowda) ಕಟ್ಟಿದ ಊರಿಗೆ ಹಲವಾರು ಬಿರುದಾವಳಿಗಳು! ಆದರೆ ಒಂದು ಮಳೆ ಈ ನಗರದ ಅಸಲೀಯತ್ತನ್ನು ಬಯಲು ಮಾಡುತ್ತದೆ. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆ (heavy rains) ನಗರದ ಹಲವಾರು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಅವರ ಮನೆಗಳ ಮುಂದೆ ನಿಂತ ನೀರಿನಂತೆ ಅವರ ಬದುಕು ಕೂಡ ತಾತ್ಕಾಲಿಕವಾಗಿ ಅದೇ ರೀತಿಯಾಗಿತ್ತು. ನೀವೇ ನೋಡಿ ಅವರ ಸ್ಥಿತಿ ಹೇಗಿದೆ ಅಂತ. ಇದು ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಒಂದಾಗಿರುವ ಹೊರಮಾವು ಬಡಾವಣೆ.

ಇಡೀ ಬಡಾವಣೆ ಜಲಾವೃತ. ಮನೆಗಳ ಮುಂದೆ ಪಾರ್ಕ್ ಮಾಡಿರುವ ವಾಹನಗಳು ಮುಳುಗಡೆಯಾಗಿವೆ. ಮನೆಗಳಲ್ಲಿ ವಾಸ ಮಾಡುವ ಜನರಂತೂ ಹೊರಗೆ ಬರೋದು ಸಾಧ್ಯವಿಲ್ಲ. ಅಗತ್ಯ ವಸ್ತುಗಳನ್ನು ತಂದುಕೊಳ್ಳುವುದು ದೂರದ ಮಾತು. ಕೋರ್ಟ್ ಕಚೇರಿಗಳಿಗೆ ಹೋಗುವವರು ಬಲವಂತದ ರಜೆ ತೆಗೆದುಕೊಂಡು ಮನೆಯಲ್ಲಿ ಉಳಿದುಬಿಟ್ಟರು.

ಅವರ ಅಸಹಾಯಕತೆಯನ್ನು ಅರಿತುಕೊಂಡು ಕೆಲವು ಸಂಘಸಂಸ್ಥೆಗಳು ಅಹಾರ ಪೊಟ್ಟಣಗಳನ್ನು ವಿತರಿಸುತ್ತಿವೆ. ಅವರ ಸೇವೆ ಶ್ಲಾಘನೀಯ ಮಾರಾಯ್ರೇ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರದಂದು ಖುದ್ದಾಗಿ ಕೆಲವು ಜಲಾವೃತ ಪ್ರದೇಶಗಳನ್ನು ಪರಿಶೀಲಿಸಿದರು. ಬೆಂಗಳೂರು ನಗರದ ಶಾಸಕರು ಮತ್ತು ಮಂತ್ರಿಗಳು ತಮ್ಮ ಕ್ಷೇತ್ರಗಳ ಪರಿಶೀಲನೆ ನಡೆಸಿ ಪ್ರತಿವರ್ಷದಂತೆ ಈ ಬಾರಿಯೂ ನೀರು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಜನ ಪ್ರತಿಸಲದಂತೆ ಈ ಬಾರಿಯೂ ನಂಬಿದರು. ಕೆಲವು ಭಾಗದ ನಿವಾಸಿಗಳು ಜನ ಪ್ರತಿನಿಧಿಗಳ ನೀರಿಳಿಸಿದರು.

ಇದನ್ನೂ ಓದಿ:   ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು  

Follow us on

Click on your DTH Provider to Add TV9 Kannada