ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು

ಪ್ರತಿ ವರ್ಷ ಹಬ್ಬದಂತೆ ಇದನ್ನು ಕೂಡ ನಾವು ಆಚರಣೆ ಮಾಡಬೇಕು. ಮಾಡಿದ್ದ ಅಡುಗೆ ತಿನ್ನಲು ಆಗಲಿಲ್ಲ. ಎಲ್ಲ ಅನ್ನ ನೀರು ಪಾಲಾಯ್ತು. ಸರ್ಕಾರದ ಜನಪ್ರತಿನಿಧಿ ಸರಿಯಾಗಿ ಸ್ಪಂದಿಸುತ್ತಿಲ್ಲ.

ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು
ಹೊರಮಾವು ಪ್ರದೇಶದಲ್ಲಿ ನಿಂತಿರುವ ನೀರು
Follow us
TV9 Web
| Updated By: sandhya thejappa

Updated on:May 18, 2022 | 1:02 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಮೇ 17) ಸುರಿದ ಬಾರೀ ಮಳೆಗೆ (Heavy Rain) ಅವಾಂತರ ಸೃಷ್ಟಿಯಾಗಿದೆ. ಧಾರಕಾರ ಮಳೆಗೆ ನಗರದ ಹೊರಮಾವು (Horamavu) ಪ್ರದೇಶದಲ್ಲಿ 300ರಿಂದ 400 ಮನೆಗಳು ಜಲಾವೃತವಾಗಿವೆ. ಮನೆಯಲ್ಲಿ ನಿಂತ ನೀರು ಹೊರಹಾಕಲಾಗದೇ ಜನರು ಪರದಾಡುತ್ತಿದ್ದಾರೆ. ಸ್ಥಳೀಯರು ಟ್ರಾಕ್ಟರ್ ಮೂಲಕ ತೆರಳಿ ಆಹಾರ ಹಂಚುತ್ತಿದ್ದಾರೆ. ಸದ್ಯ ಮೊದಲ ಮಹಡಿ ಹಾಗೂ ಎರಡನೇ ಮಹಡಿಗೆ ತೆರಳಿ ಆಶ್ರಯ ಪಡಿತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿದ್ದಾರೆ.

ಇನ್ನು ವಡ್ಡತಹಳ್ಳಿ, ಶ್ರೀ ಸಾಯಿ ಬಡಾವಣೆಯಲ್ಲಿ ನೀರು ನುಗ್ಗಿದ್ದು, ಸರ್ಕಾರ ಹಾಗೂ ಜನಪ್ರತಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಹಬ್ಬದಂತೆ ಇದನ್ನು ಕೂಡ ನಾವು ಆಚರಣೆ ಮಾಡಬೇಕು. ಮಾಡಿದ್ದ ಅಡುಗೆ ತಿನ್ನಲು ಆಗಲಿಲ್ಲ. ಎಲ್ಲ ಅನ್ನ ನೀರು ಪಾಲಾಯ್ತು. ಸರ್ಕಾರದ ಜನಪ್ರತಿನಿಧಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವು ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ? ಪೆಟ್ರೋಲ್, ಡೀಸೆಲ್, ದಿನಸಿ ಬೆಲೆ ಮೊದಲೇ ಜಾಸ್ತಿ ಆಗಿದೆ. ಈಗ ಹಾಳಾಗಿರೊ ಗೃಹಪಯೋಗಿ ವಸ್ತು ತೆಗೆದುಕೊಳ್ಳಲು ಮತ್ತೆ ಖರ್ಚು ಮಾಡಬೇಕು ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Indrani Mukerjea: ಶೀನಾ ಬೋರಾ ಕೊಲೆ ಕೇಸ್; ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

24 ಗಂಟೆ ಅವಧಿಯಲ್ಲಿ 114 ಮಿಮೀ ಮಳೆ ದಾಖಲು: ಬೆಂಗಳೂರಿನಲ್ಲಿ ಕಳೆದ 24 ಗಂಟೆಗೆ 114 ಮಿಮೀ ಮಳೆ ದಾಖಲಾಗಿದೆ. 2017 ರ ಆಗಸ್ಟ್ 15 ರಂದು 128 ಮಿಮೀ ಮಳೆ ಸುರಿದಿತ್ತು. ಈ ವರ್ಷದ ಮೇ ತಿಂಗಳಲ್ಲಿ ನಗರದಲ್ಲಿ ಇದುವರೆಗೆ ಐಎಂಡಿ ಕೇಂದ್ರದಲ್ಲಿ 253 ಮಿಮೀ ಮಳೆ ದಾಖಲಾಗಿದೆ.

ಟಿವಿ9 ಮುಂದೆ ಮಹಿಳೆ ಕಣ್ಣೀರು: ಎಚ್​ಬಿಆರ್ ಲೇಔಟ್​ನಲ್ಲಿ ಮನೆ ಜಲಾವೃತವಾಗಿದೆ. ಟಿವಿ9 ಬಳಿ ಮಹಿಳೆ ಕಣ್ಣೀರು ಹಾಕಿ ಸಮಸ್ಯೆ ಹೇಳಿಕೊಂಡಿದ್ದಾರೆ. ಮನೆಗೆ ರಾತ್ರಿ ಏಕಾಏಕಿ ನೀರು ನುಗ್ಗಿತು. ಮನೆಯಲ್ಲಿ ಚಿಕ್ಕ ಮಗು ಇತ್ತು. ಊಟ ಇಲ್ಲದೆ ಮನೆಯವರು ಇಡಿ ರಾತ್ರಿ ಕಳೆದಿದ್ದಾರೆ. ನಮ್ಮ ಗೋಳು ಕೇಳೋರು ಯಾರು ಇಲ್ಲ. ಸಮಸ್ಯೆ ಬಂದಾಗ ಬರುತ್ತಾರೆ, ಮತ್ತೆ ಏನೂ ಮಾಡಲ್ಲ. ನಮ್ಮ ಸಮಸ್ಯೆ ನಾವೇ ಬಗೆ ಹರಿಸಿಕೊಳ್ಳಬೇಕು ಅಂತ ಮಹಿಳೆ ಹೇಳಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Wed, 18 May 22